BollywoodCinemaLatestMain PostNational

‘ಸುಶಾಂತ್ ಸ್ಟಾರ್ ಅಲ್ಲ’ ಎಂದು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿರಲಿಲ್ಲ: ಅಭಿಷೇಕ್ ಕಪೂರ್

ಮುಂಬೈ: ‘ಸುಶಾಂತ್ ಸ್ಟಾರ್ ಅಲ್ಲ’ ಎಂದು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿರಲಿಲ್ಲ ಎಂದು ನಿರ್ದೇಶಕ ಅಭಿಷೇಕ್ ಕಪೂರ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ಸಾರಾ ಅಲಿ ಖಾನ್ ನಟಿಸಿದ್ದ ‘ಕೇದಾರನಾಥ್’ ಸಿನಿಮಾ ತೆರೆ ಮೇಲೆ ಬಂದು ಇತ್ತೀಚೆಗೆ ಮೂರು ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆ ಸಾರಾ ತನ್ನ ಕೋ-ಸ್ಟಾರ್ ಅನ್ನು ನೆನೆದು ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆ ಸುಶಾಂತ್ ಬಗ್ಗೆ ‘ಕೇದಾರನಾಥ್’ ಸಿನಿಮಾದ ನಿರ್ದೇಶಕ ಅಭಿಷೇಕ್ ಕಪೂರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಸುಶಾಂತ್ ಅವರನ್ನು ಇಂಡಸ್ಟ್ರಿಯಲ್ಲಿ ಹೇಗೆ ನೋಡುತ್ತಿದ್ದರು ಎಂಬುದನ್ನು ವಿವರಿಸಿದ್ದಾರೆ. ಇದನ್ನೂ ಓದಿ: ಕರೀನಾ, ಅಮೃತಾ ಅರೋರಾಗೆ ಕೊರೊನಾ ಪಾಸಿಟಿವ್

ನಾನು ‘ಕೇದಾರನಾಥ್’ ಸಿನಿಮಾವನ್ನು ನಿರ್ದೇಶನ ಮಾಡುತ್ತಿರಬೇಕಾದರೆ ಯಾರು ಈ ಸಿನಿಮಾಗೆ ಹೂಡಿಕೆ ಮಾಡಲು ಬರುತ್ತಿರಲಿಲ್ಲ. ಎಲ್ಲರೂ ಸುಶಾಂತ್ ಸ್ಟಾರ್ ಅಲ್ಲ ಎಂದು ಎಷ್ಟೋ ಹೂಡಿಕೆದಾರರು ಸಿನಿಮಾಗೆ ದುಡ್ಡನ್ನು ಹಾಕಲು ಮುಂದೆ ಬಂದಿರಲಿಲ್ಲ. ಅದಕ್ಕೆ ಸುಶಾಂತ್ ಅವರೇ ತಮ್ಮ ಸ್ವಂತ ಹಣದಿಂದ ಈ ಚಿತ್ರವನ್ನು ಮಾಡಿದರು ಎಂದು ನೆನೆದರು.

ಜೂನ್ 14 ರಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ನಂತರ ಅವರ ಬಗ್ಗೆ ತಿಳಿದುಕೊಂಡ ಜನರು, ಇಂದು ಅವರನ್ನು ಪ್ರತಿಭಾವಂತ ನಟ ಎಂದು ನೆನೆಪಿಸಿಕೊಳ್ಳುತ್ತಾರೆ. ಆದರೆ ಇದೇ ಪ್ರೀತಿ ಅವರು ಜೀವಂತವಾಗಿರುವಾಗ ಅಗತ್ಯವಿತ್ತು. ಆಗ ಯಾರು ಅವರ ಜೊತೆ ನಿಂತಿರಲಿಲ್ಲ. ಈಗ ಅವರ ಬಗ್ಗೆ ಮಾತನಾಡುವುದನ್ನು ಕೇಳಿದರೆ ವಿಚಿತ್ರವೆನಿಸುತ್ತೆ ಎಂದರು.

ಸುಶಾಂತ್ ಸ್ಟಾರ್ ಅಲ್ಲ ಎಂದು ನಿರ್ಮಾಪಕರು ‘ಕೇದಾರನಾಥ’ ಸಿನಿಮಾಗೆ ಬಂಡವಾಳ ಹಾಕಲು ಯಾರು ಬಂದಿರಲಿಲ್ಲ. ಆಗ ಅವರೇ ಈ ಸಿನಿಮಾವನ್ನು ಮುಗಿಸಲೇ ಬೇಕು ಎಂದು ಛಲ ತೊಟ್ಟಿದ್ದರು. ಅದಕ್ಕೆ ಅವರ ಸ್ವಂತ ಜೇಬಿನಿಂದ ಹಣವನ್ನು ಹಾಕಿದ್ದರು. ನಾನು ಸಹ ಈ ಸಿನಿಮಾ ಮಾಡುವಾಗ ತುಂಬಾ ಒತ್ತಡದಲ್ಲಿದ್ದೆ. ಆದ್ದರಿಂದ ನಾನು ಚಿತ್ರ ಮಾಡಬೇಕಾಯಿತು. ಆದರೆ, ‘ಕೇದಾರನಾಥ’ ಸಿನಿಮಾ ಮಾಡುವಾಗ ಸುಶಾಂತ್ ನೋವು ಅನುಭವಿಸಿದ್ದು ನನಗೆ ಗೊತ್ತಿತ್ತು ಎಂದು ತಿಳಿಸಿದರು.

ಸುಶಾಂತ್ ಸಾವನ್ನಪ್ಪಿದ ಸುದ್ದಿ ತಿಳಿದ ತಕ್ಷಣ ಇಡೀ ಜಗತ್ತೇ ಅವರ ಅಭಿಮಾನಿಯಾಗಿದೆ. ಅವರು ಬದುಕಿದ್ದಾಗ ಅವರನ್ನು ಯಾರು ಪ್ರೀತಿಸುತ್ತಾರೆ ಎಂದು ತಿಳಿಯಲು ಯಾರು ಬಿಡಲಿಲ್ಲ. ಆದರೆ ಅವರು ನಮ್ಮನ್ನು ಅಗಲಿದ ಮೇಲೆ ಎಲ್ಲರಿಗೂ ಗೊತ್ತಾಗಿದೆ. ಇದು ದುರಂತ ಎಂದು ಹೇಳಿದರು.

ಸುಶಾಂತ್ ಅದ್ಭುತ ನಟ. ಅವರು ಎಂಜಿನಿಯರ್ ಆಗಿದ್ದು, ಖಗೋಳ ಭೌತಶಾಸ್ತ್ರ ಮತ್ತು ಕ್ವಾಂಟಮ್ ಭೌತಶಾಸ್ತ್ರದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ತುಂಬಾ ಪ್ರತಿಭಾವಂತ ನಟ ಮಾತ್ರವಲ್ಲ, ವಿಜ್ಞಾನದ ಬಗ್ಗೆಯೂ ಹೆಚ್ಚು ಜ್ಞಾನವನ್ನು ಹೊಂದಿದ್ದರು. ಅದಕ್ಕೆ ಎಷ್ಟೂ ಜನರು ಸುಶಾಂತ್ ಅವರ ಕ್ರಾಫ್ಟ್ ಮತ್ತು ಸಿನಿಮಾದ ಮೇಲಿನ ಪ್ರೀತಿಯನ್ನು ನೋಡಿ ಅವರ ಅಭಿಮಾನಿಗಳಾಗಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ‘ಕಭಿ ಖುಷಿ ಕಭಿ ಗಮ್’ ಸೀನ್ ರೀ ಕ್ರಿಯೇಟ್ ಮಾಡಿದ ಆಲಿಯಾ-ರಣವೀರ್

ಈ ಹಿಂದೆಯೂ ಮಾಧ್ಯಮಗಳಲ್ಲಿ ಮಾತನಾಡುತ್ತಾ, ನಿರ್ದೇಶಕರು ‘ಕೇದಾರನಾಥ್’ ಚಿತ್ರೀಕರಣದ ವೇಳೆ ಸುಶಾಂತ್ ತೊಂದರೆಯಾಗಿದ್ದ ಬಗ್ಗೆ ಬಹಿರಂಗಪಡಿಸಿದ್ದರು.

Leave a Reply

Your email address will not be published.

Back to top button