BollywoodCinemaLatestMain PostNational

‘ಕಭಿ ಖುಷಿ ಕಭಿ ಗಮ್’ ಸೀನ್ ರೀ ಕ್ರಿಯೇಟ್ ಮಾಡಿದ ಆಲಿಯಾ-ರಣವೀರ್

ಮುಂಬೈ: ಬಾಲಿವುಡ್ ಬ್ಲಾಕ್‍ಬಸ್ಟರ್ ಹಿಟ್ ‘ಕಭಿ ಖುಷಿ ಕಭಿ ಗಮ್’ ಸಿನಿಮಾದ ಸೀನ್ ಅನ್ನು ಬಾಲಿವುಡ್ ಸ್ಟಾರ್ ಗಳಾದ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ರೀ ಕ್ರಿಯೇಟ್ ಮಾಡಿದ್ದಾರೆ.

ಕರಣ್ ಜೋಹರ್ ನಿರ್ದೇಶನ ಮಾಡಿರುವ ಬ್ಲಾಕ್‍ಬಸ್ಟರ್ ಹಿಟ್ ಸಿನಿಮಾ ‘ಕಭಿ ಖುಷಿ ಕಭಿ ಗಮ್’ ಸಿನಿಮಾ ಬಂದು 20 ವರ್ಷ ತುಂಬಿದ ಹಿನ್ನೆಲೆ ಆಲಿಯಾ, ರಣವೀರ್ ಮತ್ತು ಇಬ್ರಾಹಿಂ ಅಲಿ ಖಾನ್ ಆ ಸಿನಿಮಾದ ಕರೀನಾ ನಟನೆಯ ಸೂಪರ್ ಹಿಟ್ ಸೀನ್ ಅನ್ನು ರೀ ಕ್ರಿಯೇಟ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕರೀನಾ ಪೂ..(ಪೂಜಾ) ಪಾತ್ರದಲ್ಲಿ ನಟಿಸಿದ್ದು, ಆಕೆಯನ್ನು ಕಾಲೇಜಿನ ಹುಡುಗರು ಪ್ರಾಮ್‍ಗೆ ಕರೆದೊಯ್ಯಲು ಇಷ್ಟಪಡುತ್ತಾರೆ. ಆಗ ಪೂ.. ಅವರೆಲ್ಲರನ್ನು ಸಾಲಾಗಿ ನಿಲ್ಲಿಸಿ ವರ್ಣಿಸಿರುವ ಸೀನ್ ಅನ್ನು ಸಖತ್ ಆಗಿ ಮೂಡಿಬಂದಿತ್ತು. ಇದನ್ನೂ ಓದಿ: ಜನ ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ರೆ ನಮಗೆ ಖುಷಿ: ಶ್ರೀಮುರಳಿ

 

View this post on Instagram

 

A post shared by Alia Bhatt ☀️ (@aliaabhatt)

ಈ ಸೀನ್ ನಲ್ಲಿ ಅವರ ಎಸ್ಪೇಷನ್ ಸಖತ್ ಆಗಿ ಮೂಡಿ ಬಂದಿದ್ದು, ಆ ಸೀನ್ ನಲ್ಲಿ ಹೃತಿಕ್ ಎಂಟ್ರಿಗೆ ಪೂ ಹೇಗೆ ಫಿದಾ ಆಗುತ್ತಾಳೆ ಎಂಬ ದೃಶ್ಯವನ್ನು ಆಲಿಯಾ ಮತ್ತು ರಣವೀರ್ ಆ್ಯಕ್ಟ್ ಮಾಡಿದ್ದು, ವೀಡಿಯೂ ಮಾತ್ರ ಕ್ಯೂಟ್ ಆಗಿ ಬಂದಿದೆ. ಅದರಲ್ಲಿ ಆಲಿಯಾ ಸಹ ಸಖತ್ ಆಗಿ ಅಭಿನಯಿಸಿದ್ದು, ಕರೀನಾರನ್ನು ಸಖತ್ ಆಗಿ ಕಾಪಿ ಮಾಡಿದ್ದಾರೆ.

ಆಲಿಯಾ ಇನ್‍ಸ್ಟಾಗ್ರಾಮ್ ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ನನ್ನ ನೆಚ್ಚಿನ ದೃಶ್ಯ ಮತ್ತು ನನ್ನ ನೆಚ್ಚಿನ ಜನರು. 20 ವರ್ಷಗಳನ್ನು ಪೂರೈಸಿದ ಕೆ3ಜಿ ಸಿನಿಮಾದ ಇಡೀ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದರು. ಅದರಲ್ಲಿಯೂ ಸ್ಪೆಷಲ್ ಆಗಿ ಕರೀನಾಗೆ ಲವ್ ಯೂ, ಮೈ ಫೇವರಿಟ್ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

 

View this post on Instagram

 

A post shared by Farah Khan Kunder (@farahkhankunder)

2001ರಲ್ಲಿ ‘ಕಭಿ ಖುಷಿ ಕಭಿ ಗಮ್’ ಸಿನಿಮಾವನ್ನು ಕರಣ್ ನಿರ್ದೇಶಿಸಿದ್ದು, ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, ಜಯ ಬಚ್ಚನ್, ಶಾರೂಖ್ ಖಾನ್, ಕಾಜೂಲ್, ಕರೀನಾ ಮತ್ತು ಹೃತಿಕ್ ರೋಷನ್ ನಟಿಸಿದ್ದು, ಈ ಸಿನಿಮಾ ಸಖತ್ ಹಿಟ್ ಸಿನಿಮಾಗಳಲ್ಲಿ ಒಂದಾಗಿದೆ. ಈ ಸಿನಿಮಾ ಯಾವಾಗಲೇ ಬಂದರೂ ಅದನ್ನು ನೋಡುವ ಪ್ರೇಕ್ಷಕರ ಬಳಗ ಮಾತ್ರ ಕಮ್ಮಿಯಾಗಿಲ್ಲ. ಇದನ್ನೂ ಓದಿ: ಬೀಸ್ಟ್’ ಸಿನಿಮಾ ವಿಶೇಷ ಫೋಟೋ ಶೇರ್ ಮಾಡಿದ ಚಿತ್ರತಂಡ

 

View this post on Instagram

 

A post shared by Ananya 💛💫 (@ananyapanday)

‘ಕಭಿ ಖುಷಿ ಕಭಿ ಗಮ್’ ಸಿನಿಮಾ 20 ವರ್ಷ ಪೂರೈಸಿದ ಹಿನ್ನೆಲೆ ಬಾಲಿವುಡ್ ನ ಎಲ್ಲ ಸೆಲೆಬ್ರೆಟಿಗಳು ಅವರಿಗೆ ಇಷ್ಟವಾದ ಸೀನ್ ಅನ್ನು ಅಭಿನಯಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

Leave a Reply

Your email address will not be published.

Back to top button