ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮತ್ತು ಅವರ ಸ್ನೇಹಿತೆ ಅಮೃತಾ ಅರೋರಾ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಬ್ರಾಹನ್‍ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಈ ಕುರಿತು ಅಧಿಕೃತ ಮಾಹಿತಿಯನ್ನು ನೀಡಿದೆ.
Advertisement
ಕರೀನಾ ಕಪೂರ್ ಖಾನ್ ಮತ್ತು ಅಮೃತಾ ಅರೋರಾ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಇಬ್ಬರೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಹಲವಾರು ಪಾರ್ಟಿಗಳಲ್ಲಿ ಭಾಗವಹಿಸಿದ್ದರು. ಇಬ್ಬರು ನಟಿಯರ ಸಂಪರ್ಕಕ್ಕೆ ಬಂದವರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗುವಂತೆ ಬಿಎಂಸಿ ಆದೇಶಿಸಿದೆ. ಇದನ್ನೂ ಓದಿ: ‘ಕಭಿ ಖುಷಿ ಕಭಿ ಗಮ್’ ಸೀನ್ ರೀ ಕ್ರಿಯೇಟ್ ಮಾಡಿದ ಆಲಿಯಾ-ರಣವೀರ್
Advertisement
ಕರೀನಾ ಮತ್ತು ಅಮೃತಾ ಈ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ ಈ ಸುದ್ದಿ ತಿಳಿದ ಅವರ ಅಭಿಮಾನಿಗಳು ಅಮೃತಾ ಮತ್ತು ಕರೀನಾ ಇಬ್ಬರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.
Advertisement
Actors Kareena Kapoor Khan & Amrita Arora tested positive for #COVID19. Both of them had violated COVID norms & attended several parties. BMC has ordered people, who came in contact with the two actors, to undergo RT-PCR test: BMC (Brihanmumbai Municipal Corporation)
(File pic) pic.twitter.com/wKqoqgFM4x
— ANI (@ANI) December 13, 2021
Advertisement
ಕರೀನಾ ಮತ್ತು ಅಮೃತಾ ಇತ್ತೀಚೆಗೆ ಮುಂಬೈನಲ್ಲಿರುವ ರಿಯಾ ಕಪೂರ್ ಅವರ ಮನೆಯಲ್ಲಿ ಪಾರ್ಟಿಯನ್ನು ಮಾಡಿದ್ದರು. ಈ ವೇಳೆ ಈ ನಟಿಯರು ಕ್ಯಾಮೆರಾಗೆ ಪೋಸ್ ಸಹ ನೀಡಿದ್ದರು. ಅವರೊಂದಿಗೆ ಮಲೈಕಾ ಅರೋರಾ, ಪೂನಂ ದಮಾನಿಯಾ ಮತ್ತು ಮಸಾಬಾ ಗುಪ್ತಾ ಸಹ ಇದ್ದರು.
ಪ್ರಸ್ತುತ ಕರೀನಾ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಪೋಸ್ಟ್-ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದು, ಅಮೀರ್ ಖಾನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಅದವೈತ್ ಚಂದನ್ ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಉಸ್ತುವಾರಿ ಬದಲಾಗದಿದ್ದರೆ ಜನವರಿಯಲ್ಲಿ ಸತ್ಯಾಗ್ರಹ ಆರಂಭಿಸುತ್ತೇನೆ: ಸೋಮಶೇಖರ್ ರೆಡ್ಡಿ