ಗಾಂಧಿನಗರ: ಗುಜರಾತ್‍ನ ಸೂರತ್ (Surat) ನಗರದ ಕಲಾವಿದರೊಬ್ಬರು 9,999 ವಜ್ರಗಳನ್ನು ಬಳಸಿ ಅಯೋಧ್ಯೆಯ (Ayodhya) ರಾಮಮಂದಿರದ (Ram Mandir) ಕಲಾಕೃತಿಯನ್ನು ರಚಿಸಿದ್ದಾರೆ. ಈ ವೀಡಿಯೋ ಇದೀಗ ಎಕ್ಸ್‌ನಲ್ಲಿ ವೈರಲ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ.
ಕಲಾವಿದ ಚಿಕ್ಕ ಚಿಕ್ಕ ವಜ್ರಗಳನ್ನು ಬಳಸಿ ಕಪ್ಪು ಬೋರ್ಡ್ ಮೇಲೆ ರಾಮಮಂದಿರದ ಕಲಾಕೃತಿ ರಚಿಸಿದ್ದಾರೆ. ಈ ಬೋರ್ಡ್ ಮೇಲ್ಭಾಗದಲ್ಲಿ ಜೈ ಶ್ರೀ ರಾಮ್ ಎಂದು ಬರೆಯಲಾಗಿದೆ. ಮೇಲಿನ ಬಲ ಮೂಲೆಯಲ್ಲಿ ಭಗವಾನ್ ರಾಮನ ಚಿತ್ರವಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಸ್ಯಾಟಲೈಟ್ ಚಿತ್ರ ಬಿಡುಗಡೆ ಮಾಡಿದ ಇಸ್ರೋ
Advertisement
Advertisement
ಇಲ್ಲಿನ ವಜ್ರದ ವ್ಯಾಪಾರಿಯೊಬ್ಬರು 5,000 ಅಮೆರಿಕನ್ ವಜ್ರಗಳು ಮತ್ತು ಎರಡು ಕಿಲೋಗ್ರಾಂಗಳಷ್ಟು ಬೆಳ್ಳಿಯನ್ನು ಬಳಸಿ ರಾಮಮಂದಿರದ ಆಕೃತಿಯ ವಿಶೇಷ ನೆಕ್ಲೇಸ್ ಸಹ ಮಾಡಿದ್ದಾರೆ. ಈ ಹಾರವನ್ನು ರಾಮಮಂದಿರ ಟ್ರಸ್ಟ್‌ಗೆ ಉಡುಗೊರೆಯಾಗಿ ನೀಡಲಾಗಿದೆ.
Advertisement
Advertisement
ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ (Pran Pratishtha) ಸಕಲ ಸಿದ್ಧತೆಗಳು ಆಗಿದೆ. ಸೋಮವಾರ ಶಾಸ್ತ್ರೋಕ್ತವಾಗಿ ಸಮಾರಂಭ ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶ-ವಿದೇಶಗಳ ಹಲವಾರು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: PublicTV Explainer: ‘ದಶಾವತಾರಿ ರಾಮ’ನೂರಿನ ಅಯೋಧ್ಯೆ ರಾಮಮಂದಿರದ 10 ವಿಶೇಷತೆಗಳು..