ಮುಂಬೈ: ಕಾರ್ಯಕ್ರಮವೊಂದರ ಉದ್ಘಾಟನೆ (Program Inauguration) ವೇಳೆ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ (Supriya Sule) ಅವರ ಸೀರೆಗೆ ಬೆಂಕಿ (Fire) ಹೊತ್ತಿಕೊಂಡಿರುವ ಘಟನೆ ಪುಣೆಯ (Pune) ಹಿಂಜೆವಾಡಿಯಲ್ಲಿ ಭಾನುವಾರ ನಡೆದಿದೆ.
ನಗರದಲ್ಲಿ ನಡೆದ ಕರಾಟೆ ಸ್ಪರ್ಧೆಯ ಉದ್ಘಾಟನೆ ವೇಳೆ ಬಾರಾಮತಿ ಸಂಸದೆಯ ಸೀರೆಗೆ (Saree) ಬೆಂಕಿ ಹೊತ್ತಿಕೊಂಡಿದೆ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಲು ವೇದಿಕೆಯಲ್ಲಿ ಮೇಜಿನ ಮೇಲೆ ಇರಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಮುಂದಾಗಿದ್ದರು. ಸಂಸದೆ ಟೇಬಲ್ ಹತ್ತಿರ ಹೋಗುತ್ತಿದ್ದಂತೆ ಕೆಳಗಡೆ ಇರಿಸಲಾಗಿದ್ದ ದೀಪಕ್ಕೆ ತಾಗಿ ಸೀರೆಗೆ ಬೆಂಕಿ ತಗುಲಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಆಡಳಿತದಲ್ಲಿ ಭರವಸೆ ಉಚಿತ, ಸಾಲ ಖಚಿತ: ಸಚಿವ ಸುನಿಲ್ ಕುಮಾರ್ ವ್ಯಂಗ್ಯ
Advertisement
पुण्यातल्या सार्वजनिक कार्यक्रमात दीप प्रज्वलन करताना खासदार @supriya_sule यांच्या साडीने पेट घेतला. मात्र सुदैवानं साडी तातडीनं विझवण्यात आली. हा व्हिडीओ बघून व्यासपीठावर दिवे ठेवताना काळजी घेणं किती गरजेचं आहे हे दिसतंय. #Pune pic.twitter.com/hNNodJhMst
— Abhijit Karande (@AbhijitKaran25) January 15, 2023
Advertisement
ಸಂಸದೆ ತಕ್ಷಣವೇ ತಮ್ಮ ಕೈಗಳಿಂದ ಸೀರೆಗೆ ತಗುಲಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಈ ಬಗ್ಗೆ ತಿಳಿಸಿದ ಸುಳೆ ಹಿಂಜೆವಾಡಿ ಪ್ರದೇಶದಲ್ಲಿ ಆಯೋಜಿಸಿದ್ದ ಕರಾಟೆ ಸ್ಪರ್ಧೆಯ ಉದ್ಘಾಟನೆ ವೇಳೆ ನನ್ನ ಸೀರೆಗೆ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡಿತ್ತು. ಆದರೆ ತಕ್ಷಣವೇ ಬೆಂಕಿಯನ್ನು ನಿಯಂತ್ರಿಸಲಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಆದಿವಾಸಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಯತ್ನ – ಐವರು ಪೊಲೀಸ್ ವಶಕ್ಕೆ
Advertisement
ಘಟನೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ನನ್ನ ಬೆಂಬಲಿಗರು, ನಾಗರಿಕರು, ಪಕ್ಷದ ಪದಾಧಿಕಾರಿಗಳು ಹಾಗೂ ಅಭಿಮಾನಿಗಳಿಗೆ ನಾನು ಸುರಕ್ಷಿತವಾಗಿದ್ದೇನೆ ಎಂದು ಹೇಳಲು ಬಯಸುತ್ತೇನೆ. ನನ್ನ ಬಗೆಗಿನ ಪ್ರೀತಿ ಹಾಗೂ ಕಾಳಜಿಗೆ ಎಲ್ಲರನ್ನೂ ಗೌರವಿಸುತ್ತೇನೆ ಎಂದು ಸುಪ್ರಿಯಾ ಸುಳೆ ತಿಳಿಸಿದ್ದಾರೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k