– ಮೋದಿ ಮಿತವ್ಯಯ ಕರೆ ಬೆನ್ನಲ್ಲೇ ಈ ನಿರ್ಧಾರ
ನವದೆಹಲಿ: ಪ್ರಧಾನಿ ಮೋದಿ (PM Modi) ಮಿತವ್ಯಯ ಕರೆ ಬೆನ್ನಲ್ಲೇ ಸುಪ್ರೀಂಕೋರ್ಟ್ (Supreme Court) ವಾರಕ್ಕೆರಡು ದಿನ ವರ್ಚುವಲ್ ವಿಚಾರಣೆ ನಡೆಸಲು ನಿರ್ಧರಿಸಿದೆ.
ಸಾಮಾನ್ಯವಾಗಿ ಮಂಗಳವಾರದಿಂದ ಗುರುವಾರದವರೆಗೆ ನಡೆಯುವ ಎಲ್ಲಾ ವಿಚಾರಣೆಗಳು ನ್ಯಾಯಾಲಯದಲ್ಲಿ ನಡೆಯುತ್ತವೆ. ಈ ಸಮಯದಲ್ಲಿ ವಿಚಾರಣೆಗಾಗಿ ವಕೀಲರು ಹಾಗೂ ಕಕ್ಷಿದಾರರು ಆನ್‌ಲೈನ್ ಮೂಲಕ ಅಥವಾ ನ್ಯಾಯಾಲಯಕ್ಕೆ ಬಂದು ಹಾಜರಾಗುವ ಎರಡೂ ಆಯ್ಕೆಗಳನ್ನು ಹೊಂದಿರುತ್ತಾರೆ. ಇದರ ಹೊರತಾಗಿ ಸೋಮವಾರ ಹಾಗೂ ಶುಕ್ರವಾರದಂದು ಎಲ್ಲಾ ವಿಚಾರಣೆಗಳು ಆನ್‌ಲೈನ್ ಮೂಲಕ ನಡೆಯುತ್ತವೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ʻಐಪಿಎಲ್ ಫ್ಯಾನ್ಸ್ ಪಾರ್ಕ್ʼ – ಏಕಕಾಲಕ್ಕೆ 5,000 ಜನ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಸಿದ್ಧತೆ
ಕೋರ್ಟ್ ಕಚೇರಿಯ ಪ್ರತಿಯೊಂದು ವಿಭಾಗದಲ್ಲೂ ಶೇ.50ರಷ್ಟು ಸಿಬ್ಬಂದಿ ವಾರಕ್ಕೆ ಎರಡು ದಿನ ಮನೆಯಿಂದಲೇ ಕೆಲಸ ಮಾಡಲು ಅನುಮತಿ ನೀಡಲಾಗಿದೆ. ಆದರೆ ಇದರಿಂದ ಕೋರ್ಟ್‌ನ ಕೆಲಸಗಳಿಗೆ ಯಾವುದೇ ರೀತಿಯಲ್ಲಿಯೂ ಅಡ್ಡಿ ಆಗಬಾರದು ಮತ್ತು ತುರ್ತು ಕೆಲಸವಿದ್ದಾಗ ಕಚೇರಿಗೆ ಖುದ್ದಾಗಿ ಬರಬೇಕಾಗುತ್ತದೆ. ಜೊತೆಗೆ ಕಚೇರಿಯಲ್ಲಿ ಖುದ್ದಾಗಿ ಹಾಜರಿರಲೇಬೇಕಾದ ಅನಿವಾರ್ಯತೆ ಇದ್ದರೆ ಅಂತಹ ಸಂದರ್ಭದಲ್ಲಿ ಈ ವರ್ಕ್ ಫ್ರಂ ಹೋಮ್ ಸೌಲಭ್ಯವನ್ನು ರದ್ದುಗೊಳಿಸುವ ಅಥವಾ ಮಾರ್ಪಾಡು ಮಾಡುವ ಅಧಿಕಾರವನ್ನು ಹಿರಿಯ ಅಧಿಕಾರಿಗಳಿಗೆ ನೀಡಲಾಗಿದೆ.
ಇನ್ನೂ ಜಡ್ಜ್‌ಗಳಿಗೆ ಕಾರ್ ಪೂಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಅಂದರೆ ಸಾಮಾನ್ಯವಾಗಿ ಒಂದು ಕಾರಿನಲ್ಲಿ ಓರ್ವ ನ್ಯಾಯಾಧೀಶರು ಅಥವಾ ನ್ಯಾಯಮೂರ್ತಿ ಅವರು ಆಗಮಿಸುತ್ತಾರೆ. ಇದರ ಬದಲಿಗೆ ಒಂದೇ ಕಾರಿನಲ್ಲಿ ಇಬ್ಬರಿಂದ ಮೂವರನ್ನು ಕರೆತರಲು ನಿರ್ಧರಿಸಿದ್ದಾರೆ.
ವರ್ಕ್ ಫ್ರಂ ಹೋಮ್, ಆನ್‌ಲೈನ್ ವಿಚಾರಣೆ ಸೇರಿದಂತೆ ಎಲ್ಲಾ ನಿರ್ಧಾರಗಳು ಮುಂದಿನ ಆದೇಶದವರೆಗೂ ಜಾರಿಯಲ್ಲಿರಲಿದೆ.ಇದನ್ನೂ ಓದಿ: ಆರ್‌ಜಿ ಕರ್ ರೇಪ್ & ಮರ್ಡರ್ ಕೇಸ್ – ತನಿಖೆಯ ಹಾದಿ ತಪ್ಪಿಸಿದ ಮೂವರು IPS ಅಧಿಕಾರಿಗಳು ಸಸ್ಪೆಂಡ್: ಸಿಎಂ

