Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಭಾರತದಲ್ಲಿ ಸಲಿಂಗಕಾಮ ಅಪರಾಧವಲ್ಲ: 156 ವರ್ಷದ ಬ್ರಿಟಿಷ್ ಕಾನೂನು ರದ್ದು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಭಾರತದಲ್ಲಿ ಸಲಿಂಗಕಾಮ ಅಪರಾಧವಲ್ಲ: 156 ವರ್ಷದ ಬ್ರಿಟಿಷ್ ಕಾನೂನು ರದ್ದು

Districts

ಭಾರತದಲ್ಲಿ ಸಲಿಂಗಕಾಮ ಅಪರಾಧವಲ್ಲ: 156 ವರ್ಷದ ಬ್ರಿಟಿಷ್ ಕಾನೂನು ರದ್ದು

Public TV
Last updated: September 6, 2018 1:04 pm
Public TV
Share
2 Min Read
377
SHARE

ನವದೆಹಲಿ: ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಈ ಮೂಲಕ 17 ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ.

ಸಲಿಂಗಕಾಮ ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 377ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಕೋರ್ಟ್ ಈ ತೀರ್ಪು ಪ್ರಕಟಿಸಿದೆ. ಕಾಲದ ಜೊತೆ ಕಾನೂನು ಕೂಡ ಬದಲಾಗಬೇಕು ಎಂದು ಹೇಳಿ ಐಪಿಸಿ 377 ಅನ್ನು ಅಸಿಂಧುಗೊಳಿಸಿದೆ. ಈ ಮೂಲಕ 156 ವರ್ಷದ ಹಿಂದಿನ ಬ್ರಿಟಿಷ್ ಕಾನೂನು ರದ್ದಾಗಿದೆ.

ಇಬ್ಬರು ವಯಸ್ಕರು ಸಮ್ಮತಿಯಿಂದ ನಡೆಸುವ ಲೈಂಗಿಕ ಕ್ರಿಯೆ ಅಪರಾಧವಲ್ಲ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ, ಕಳೆದ ಜುಲೈ 17 ರಂದು ತೀರ್ಪು ಕಾಯ್ದಿರಿಸಿತ್ತು.

#WATCH People in Mumbai celebrate after Supreme Court decriminalises #Section377 and legalises homosexuality pic.twitter.com/ztI67QwfsT

— ANI (@ANI) September 6, 2018

ಕೇಂದ್ರ ಸರ್ಕಾರ ಸೆಕ್ಷನ್ 377ರ ರದ್ದತಿ ವಿಚಾರವನ್ನು ನ್ಯಾಯಾಲಯದ ವಿವೇಚನೆಗೆ ಬಿಡುವುದಾಗಿ ಹೇಳಿತ್ತು. ಆದರೆ ಸಲಿಂಗ ವಿವಾಹ ಮತ್ತು ಕೆಲವು ಹಕ್ಕುಗಳ ವಿಚಾರದಲ್ಲಿ ಗೊಂದಲ ಉಂಟಾಗಬಹುದು ಎಂಬ ಕಳವಳವನ್ನು ವ್ಯಕ್ತಪಡಿಸಿತ್ತು.

ಈ ಹಿಂದೆ ಅಂದರೆ 2009ರಲ್ಲಿ ದೆಹಲಿ ಹೈಕೋರ್ಟ್ ಸಲಿಂಗಕಾಮವು ಅಪರಾಧವಲ್ಲ ಎಂದು ತೀರ್ಪು ನೀಡಿತ್ತು. ಆದರೆ, 2014ರಲ್ಲಿ ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್ ತೀರ್ಪನ್ನು ವಜಾ ಮಾಡಿ, ಸಲಿಂಗಕಾಮವನ್ನು ಅಪರಾಧವೆಂದು ಘೋಷಿಸಿತ್ತು. ನಂತರ ಹೋಟೆಲ್ ಉದ್ಯಮಿ ಕೇಶವ್ ಸೂರಿ ಅವರು ಸೆಕ್ಷನ್ 377ರ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಇದಾದ ಬಳಿಕ ಹಮ್ಸಫರ್ ಟ್ರಸ್ಟ್ ನ ಅಶೋಕ್ ರಾವ್ ಕವಿ ಮತ್ತು ಆರಿಫ್ ಜಾಫರ್ ಏಪ್ರಿಲ್ 27ರಂದು ಸೆಕ್ಷನ್ ರದ್ದತಿಗೆ ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು. ಮೇ ತಿಂಗಳಿನಿಂದ ನಡೆದ ವಿಚಾರಣೆಯ ತೀರ್ಪು ಇಂದು ಹೊರಬಿದ್ದಿದೆ.

ಐಪಿಸಿ ಸೆಕ್ಷನ್ 377 ಏನು ಹೇಳುತ್ತೆ?
ಯಾವುದೇ ವ್ಯಕ್ತಿ, ಮಹಿಳೆ ಅಥವಾ ಪ್ರಾಣಿಗಳೊಂದಿಗೆ ನಿಸರ್ಗಕ್ಕೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದರೆ, ಅದು ಅಪರಾಧ. ಇಂತಹ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಅಥವಾ 10 ವರ್ಷ ಜೈಲು ಹಾಗೂ ದಂಡ ವಿಧಿಸಬಹುದಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

#Section377 in Supreme Court: LGBT Community has same rights as of any ordinary citizen. Respect for each others rights, and others are supreme humanity. Criminalising gay sex is irrational and indefensible, observes CJI Dipak Misra. https://t.co/05ADSuh5cv

— ANI (@ANI) September 6, 2018

TAGGED:Controversial LawlawSection 377Supreme Courtಕನ್ನಡಪಬ್ಲಿಕ್ ಟಿವಿಸಲಿಂಗಕಾಮಸುಪ್ರೀಂ ಕೋರ್ಟ್
Share This Article
Facebook Whatsapp Whatsapp Telegram

Cinema news

Rashmika Vijay 4
ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಆರತಕ್ಷತೆಗೆ ʻತುಳಸಿʼ ಮ್ಯಾಜಿಕ್‌
Cinema Latest Main Post
Love Mocktail
Toxic ಪೋಸ್ಟ್‌ಪೋನ್‌ ಬಳಿಕ ಲವ್ ಮಾಕ್ಟೇಲ್-3 ರಿಲೀಸ್ ಡೇಟ್ ಬದಲು
Cinema Latest Sandalwood Top Stories
Rashmika Mandanna Vijay Deverakonda 1
ರಶ್ಮಿಕಾ ರಿಸೆಪ್ಷನ್ ಸೀರೆಯಲ್ಲಿ ಕನ್ನಡದ ಕಂಪು – ಗಂಡಭೇರುಂಡ, ಕೊಡವರ ಒಡಿಕತ್ತಿ ಕಸೂತಿ
Cinema Latest South cinema
Krishna Rukku
ಪ್ರೀತಿ, ಸೇಡು ಮತ್ತು ವಿಧಿ, ಗೆಲುವುಗಳ ಮಿಶ್ರಣ `ಕೃಷ್ಣ ರುಕ್ಕು’ ಸೀರಿಯಲ್
Cinema Latest Top Stories TV Shows

You Might Also Like

Nancy Grewal
Crime

ಖಲಿಸ್ತಾನಿ ಉಗ್ರರನ್ನು ಟೀಕಿಸುತ್ತಿದ್ದ ಪಂಜಾಬಿ ಯೂಟ್ಯೂಬರ್​ ಕೆನಡಾದಲ್ಲಿ ಹತ್ಯೆ

Public TV
By Public TV
7 minutes ago
ಕರ್ನಾಟಕ ರಾಜ್ಯ ಬಜೆಟ್‌- 2025
Bengaluru City

ಶುಕ್ರವಾರ ಬೆಳಗ್ಗೆ 10:15ಕ್ಕೆ ಬಜೆಟ್‌: ಪೆಟ್ರೋಲ್, ಡೀಸೆಲ್‌ ಮೇಲೆ 1 ರೂ. ಸೆಸ್?

Public TV
By Public TV
26 minutes ago
murder of woman for gold accused arrested in karwar
Crime

ಚಿನ್ನದ ಆಸೆಗೆ ವೃದ್ಧೆಯ ರುಂಡ ತುಂಡರಿಸಿ ಹತ್ಯೆ, ಶವ ವಿವಸ್ತ್ರಗೊಳಿಸಿ ವಿಕೃತಿ – ಆರೋಪಿ ಅರೆಸ್ಟ್‌

Public TV
By Public TV
31 minutes ago
Siddaramaiah HD Kumaraswamy
Bengaluru City

ಒಳ ಮೀಸಲಾತಿ ಗೊಂದಲ ಇತ್ಯರ್ಥ ಮಾಡೋಕೆ ಎಷ್ಟು ವರ್ಷ ಬೇಕು – ಸಿದ್ದರಾಮಯ್ಯಗೆ ಹೆಚ್‌ಡಿಕೆ ಪ್ರಶ್ನೆ

Public TV
By Public TV
58 minutes ago
india condoles death of irans supreme leader ayatollah ali khamenei
Latest

ಖಮೇನಿ ಸಾವು – ಸಂತಾಪ ಸೂಚಿಸಿದ ಭಾರತ ಸರ್ಕಾರ

Public TV
By Public TV
59 minutes ago
Dharwad Big twist in hit and run case It was intentional murder
Crime

ಧಾರವಾಡ | ಹಿಟ್‌ & ರನ್‌ ಕೇಸ್‌ಗೆ ಬಿಗ್‌ ಟ್ವಿಸ್ಟ್‌ – ಬಸ್‌ನ ಡ್ಯಾಶ್‌ ಕ್ಯಾಮೆರಾದಿಂದ ಕೊಲೆ ರಹಸ್ಯ ಬಯಲು

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?