ನವದೆಹಲಿ: ಕೆಲವೇ ಗಂಟೆಗಳ ಹಿಂದೆ ಅಸ್ಸಾಂ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಪವನ್ ಖೇರಾಗೆ ಸುಪ್ರೀಂಕೋರ್ಟ್ (SupremeCourt) ಜಾಮೀನು ನೀಡಿದೆ. ಜಾಮೀನು (Bail) ಕೋರಿ ಅರ್ಜಿ ಸಲ್ಲಿಸುವವರೆಗೂ ಮಧ್ಯಂತರ ಜಾಮೀನು ನೀಡಲು ದ್ವಾರಕ ನ್ಯಾಯಾಲಯಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
Advertisement
ಇಂದು ದೆಹಲಿ ವಿಮಾನ ನಿಲ್ದಾಣ (Delhi Airport) ದಲ್ಲಿ ಪವನ್ ಖೇರಾ ಅವರನ್ನು ಬಂಧಿಸುತ್ತಿದ್ದಂತೆ ಸುಪ್ರೀಂಕೋರ್ಟ್ ನಲ್ಲಿ ವಿಚಾರವನ್ನು ಪ್ರಸ್ತಾಪಿಸಲಾಯಿತು. ಸಿಜೆಐ ಚಂದ್ರಚೂಡ್ ಪೀಠದ ಮುಂದೆ ವಿಷಯ ಪ್ರಸ್ತಾಪಿಸಿದ ವಕೀಲ ಅಭಿಷೇಕ್ ಮನುಸಿಂಘ್ವಿ (Abhishek Manu Singhvi) ದೇಶದ್ಯಾಂತ ದಾಖಲಾಗುತ್ತಿರುವ ಎಫ್‍ಐಆರ್‍ಗಳನ್ನು ಒಂದೂಗೂಡಿಸಬೇಕು ಮತ್ತು ಖೇರಾಗೆ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿದರು.
Advertisement
Supreme Court issues notice to Assam Police & UP Police on Congress leader Pawan Khera's plea seeking clubbing of FIRs. SC says, till the next date of hearing,the petitioner will be released on interim bail by Dwarka court
SC directs Dwarka court to grant interim relief to Khera pic.twitter.com/PyTalWRrAl
— ANI (@ANI) February 23, 2023
Advertisement
ವಾದ ಆಲಿಸಿದ ಬಳಿಕ ಸಿಜೆಐ ಪೀಠ ಮಧ್ಯಂತರ ಜಾಮೀನು ನೀಡಲು ಸೂಚಿಸಿ, ಎಫ್‍ಐಆರ್ ಗಳನ್ನು ಕ್ಲಬ್ ಮಾಡುವ ಅಭಿಪ್ರಾಯ ತಿಳಿಸುವಂತೆ ಅಸ್ಸಾಂ ಮತ್ತು ಉತ್ತರಪ್ರದೇಶ ಪೊಲೀಸರಿಗೆ ನೋಟಿಸ್ ಜಾರಿ ಮಾಡಿತು. ಮುಂದಿನ ವಿಚಾರಣೆ ವೇಳೆಗೆ ಉತ್ತರಿಸಲು ಪೀಠ ಸೂಚಿಸಿದೆ. ಇದನ್ನೂ ಓದಿ: 1.5 ಲಕ್ಷ ಮೌಲ್ಯದ ಚಪ್ಪಲಿ, 80 ಸಾವಿರ ಮೌಲ್ಯದ ಜೀನ್ಸ್ – ಜೈಲಿನಲ್ಲಿ ಸುಕೇಶ್ ಐಷಾರಾಮಿ ಜೀವನ
Advertisement
ಪವನ್ ಖೇರಾ ವಿರುದ್ಧ ಐಪಿಸಿ ಸೆಕ್ಷನ್ 153 ಎ ಧರ್ಮ, ಜನಾಂಗ, ಜನ್ಮಸ್ಥಳ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೆಕ್ಷನ್ 295 ಎ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಅಪರಾಧಗಳನ್ನು ದಾಖಲಿಸಲಾಗಿದೆ.
Supreme Court begins hearing the plea related to the arrest of Congress leader Pawan Khera. pic.twitter.com/8XBz4qS4Hz
— ANI (@ANI) February 23, 2023
ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ, ಪವನ್ ಖೇರಾ (Pawan Khera) ಅದಾನಿ-ಹಿಂಡೆನ್‍ಬರ್ಗ್ ಪ್ರಕರಣವನ್ನು ಬಗ್ಗೆ ಜಂಟಿ ಸಂಸದೀಯ ತನಿಖೆಗೆ ನೀಡಬೇಕು ಎಂದು ಒತ್ತಾಯಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಪ್ರಸ್ತಾಪಿಸಿದ್ದರು. ನರಸಿಂಹರಾವ್ ಅವರು ಜೆಪಿಸಿ (ಜಂಟಿ ಸಂಸದೀಯ ಸಮಿತಿ) ರಚಿಸಬಹುದಾದರೆ, ಅಟಲ್ ಬಿಹಾರಿ ವಾಜಪೇಯಿ ಅವರು ಜೆಪಿಸಿ ರಚಿಸಬಹುದಾದರೆ, ನರೇಂದ್ರ ಗೌತಮ್ ದಾಸ್ ಅವರಿಗೆ ಏನು ಸಮಸ್ಯೆ? ಕ್ಷಮಿಸಿ ದಾಮೋದರದಾಸ್ ಮೋದಿಗೆ? ಎಂದು ಖೇರಾ ಹೇಳಿದ್ದರು. ನಂತರ ಅವರು ಮಧ್ಯದ ಹೆಸರನ್ನು ಸಹೋದ್ಯೋಗಿಯೊಂದಿಗೆ ದೃಢೀಕರಿಸಿಕೊಂಡರು.
Senior Advocate AS Singhvi seeks interim relief for Khera and consolidation of FIR since several are being registered across the country
Singhvi, representing Congress leader Pawan Khera, tells Supreme Court that Khera apologised and said that it was a mistake, a slip of tongue.
— ANI (@ANI) February 23, 2023
ಖೇರಾ ಅವರು ಉದ್ದೇಶಪೂರ್ವಕವಾಗಿ ಹೆಸರನ್ನು ತೇಲಿಬಿಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೇ ಅಸ್ಸಾಂ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಅವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗುತ್ತಿದೆ. ಅಸ್ಸಾಂನಲ್ಲಿ ದಾಖಲಾದ ಎಫ್‍ಐಆರ್ ಅನ್ವಯ ಅವರನ್ನು ಇಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ರಾಯ್‍ಪುರಕ್ಕೆ ಕಾಂಗ್ರೆಸ್ ನಾಯಕರು ತೆರಳುವ ವೇಳೆ ವಿಮಾನದಿಂದ ಇಳಿಸಿ ಅವರನ್ನು ಪೊಲೀಸರು ಬಂಧಿಸಿದ್ದರು.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k