ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪ ಸೇರಿದಂತೆ ಹಲವು ವಂಚನೆ ಪ್ರಕರಣಗಳಲ್ಲಿ ಬಂಧಿತನಾಗಿ ಜೈಲು ಸೇರಿರುವ ಕರ್ನಾಟಕ (Karnataka) ಮೂಲದ ಸುಕೇಶ್ ಚಂದ್ರಶೇಖರ್ (Sukesh Chandrasekhar) ಮಂಡೋಲಿ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಗುರುವಾರ ಜೈಲು (Jail) ಅಧಿಕಾರಿಗಳು ಸೇರಿದಂತೆ ವಿಶೇಷ ಅಧಿಕಾರಿಗಳು ಕೊಠಡಿ ತಪಾಸಣೆ ನಡೆಸಿದ ವೇಳೆ ಹಲವು ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿವೆ.
ಮಾಹಿತಿಗಳ ಪ್ರಕಾರ ಸುಕೇಶ್ ಚಂದ್ರಶೇಖರ್ ಕೊಠಡಿಯಲ್ಲಿ 1.5 ಲಕ್ಷ ಮೌಲ್ಯದ ಚಪ್ಪಲಿ, 80 ಸಾವಿರ ಮೌಲ್ಯದ 3 ಜೋಡಿ ಜೀನ್ಸ್ ಸೇರಿದಂತೆ ಹಲವು ಐಷಾರಾಮಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ತಪಾಸಣೆಗಾಗಿ ಅಧಿಕಾರಿಗಳು ಜೈಲಿನಲ್ಲಿನ ಕೊಠಡಿ ಪ್ರವೇಶಿಸುತ್ತಿರುವ ಸಿಸಿಟಿವಿ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Advertisement
Advertisement
ಸುಕೇಶ್ ಚಂದ್ರಶೇಖರ್ ಕೊಠಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಸೋರಿಕೆ ಮಾಡಿದ ವ್ಯಕ್ತಿಯ ವಿರುದ್ಧ ಜೈಲು ಪ್ರಾಧಿಕಾರವು ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.
Advertisement
#WATCH | Luxury items found in conman Sukesh Chandrasekhar’s jail cell. CCTV visuals from Mandoli jail shared by sources show Sukesh after raids caught items in his jail cell.
(Source: Mandoli Jail Administration) pic.twitter.com/Fr77ZAsGbF
— ANI (@ANI) February 23, 2023
Advertisement
ಕೇಂದ್ರ ಗೃಹ ಮತ್ತು ಕಾನೂನು ಕಾರ್ಯದರ್ಶಿಗಳೆಂದು ಹೇಳಿಕೊಂಡು ಮಾಜಿ ರೆಲಿಗೇರ್ ಪ್ರವರ್ತಕ ಮಲ್ವಿಂದರ್ ಸಿಂಗ್ ಅವರ ಪತ್ನಿಯನ್ನು ಸುಕೇಶ್ ಚಂದ್ರಶೇಖರ್ ವಂಚಿಸಿದ್ದ ಪ್ರಕರಣದಡಿ ಫೆ. 16ರಂದು ಜಾರಿ ನಿರ್ದೇಶನಾಲಯ ಸುಕೇಶ್ ಅನ್ನು ಬಂಧಿಸಿತ್ತು. ಇದಲ್ಲದೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ಇಡಿ ದಾಖಲಿಸಿದೆ. ಇದನ್ನೂ ಓದಿ: ನನಗೆ ನಾನ್ ವೆಜ್ ತಿಂದಿದ್ದು ನೆನಪಿರಲಿಲ್ಲ: ಸಿ.ಟಿ ರವಿ
ಈ ಮೊದಲು ದೆಹಲಿಯ ತಿಹಾರ್ ಜೈಲಿನಲ್ಲಿದ್ದ ಸುಕೇಶ್ ಚಂದ್ರಶೇಖರ್ ದೆಹಲಿಯ ಹೊಸ ಮದ್ಯ ನೀತಿ ಹಗರಣ ಬಗ್ಗೆ ಸಾಲು ಸಾಲು ಪತ್ರಗಳನ್ನು ಲೆಫ್ಟಿನೆಂಟ್ ಗವರ್ನರ್‌ಗೆ ಬರೆದಿದ್ದರು. ಇದರಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಸೇರಿ ಹಲವು ನಾಯಕರ ವಿರುದ್ಧ ಸಾಕ್ಷ್ಯಗಳಿದ್ದು, ತಮಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ – ಓರ್ವ ಸಾವು, ಆರು ಮಂದಿಗೆ ಗಂಭೀರ ಗಾಯ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k