ರಾಯಿತಾ ಅಥವಾ ಕೂರ್ಮ ಇಲ್ಲದೇ ಹೋದರೆ ಬಿರಿಯಾನಿಯಲ್ಲಿ ಏನೋ ಮಿಸ್ಸಿಂಗ್ ಅಂತ ಯಾವಾಗಲೂ ಅನ್ನಿಸುತ್ತದೆ. ಬಿರಿಯಾನಿಯೊಂದಿಗೆ ಸವಿಯೋ ಮಟನ್ ದಾಲ್ಚಾ ನೀವು ಕೇಳಿದ್ದೀರಾ? ತಮಿಳುನಾಡು ಮುಖ್ಯವಾಗಿ ಕೊಯಮತ್ತೂರಿನಲ್ಲಿ ಈ ರೆಸಿಪಿ ತುಂಬಾ ಫೇಮಸ್. ಈ ಬಾರಿ ಬಿರಿಯಾನಿಯೊಂದಿಗೆ ರಾಯಿತಾ ಅಥವಾ ಚಿಕನ್ ಕೂರ್ಮ ಸವಿಯೋ ಬದಲು ದಾಲ್ಚಾವನ್ನು ಟ್ರೈ ಮಾಡಿ.
ಬೇಕಾಗುವ ಪದಾರ್ಥಗಳು:
ಬೇಯಿಸಲು:
ಮೂಳೆ ಸಹಿತ ಮಟನ್ – 100 ಗ್ರಾಂ
ಕಡಲೆ ಬೇಳೆ – ಕಾಲು ಕಪ್
ತೊಗರಿ ಬೇಳೆ – ಕಾಲು ಕಪ್
ಅರಿಶಿನ ಪುಡಿ – ಅರ್ಧ ಟೀಸ್ಪೂನ್
ನೀರು – 2 ಕಪ್
ಪೇಸ್ಟ್ ತಯಾರಿಸಲು:
ಬೆಳ್ಳುಳ್ಳಿ – 6
ಶುಂಠಿ – 1 ಇಂಚು
ಈರುಳ್ಳಿ – 1
ನೀರು – ಕಾಲು ಕಪ್
Advertisement
Advertisement
ಇತರ ಪದಾರ್ಥಗಳು:
ಎಣ್ಣೆ – 2 ಟೀಸ್ಪೂನ್
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಹಸಿರು ಮೆಣಸಿನಕಾಯಿ – 2
ಕರಿಬೇವಿನ ಎಲೆ – 2 ಚಿಗುರುಗಳು
ಹೆಚ್ಚಿದ ಟೊಮೆಟೊ – 1
ಕೆಂಪು ಮೆಣಸಿನ ಪುಡಿ – 2 ಟೀಸ್ಪೂನ್
ಗರಂ ಮಸಾಲಾ ಪುಡಿ – 1 ಟೀಸ್ಪೂನ್
ಹುಣಸೆಹಣ್ಣಿನ ಪೇಸ್ಟ್ – 2 ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ಹೆಚ್ಚಿದ ಸಣ್ಣ ಬದನೆ – 5
ಹೆಚ್ಚಿದ ಹಸಿ ಮಾವಿನಕಾಯಿ – ಅರ್ಧ
ಹೆಚ್ಚಿದ ಬಾಳೆ ಕಾಯಿ – ಅರ್ಧ
ತೆಂಗಿನ ಹಾಲು – ಅರ್ಧ ಕಪ್ ಇದನ್ನೂ ಓದಿ: ಫಿಶ್ ಫ್ರೈಗೆ ಟ್ವಿಸ್ಟ್ – ಪೆಪ್ಪರ್ ಫ್ರೈ ಟ್ರೈ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಪ್ರೆಶರ್ ಕುಕ್ಕರ್ ತೆಗೆದುಕೊಂಡು ಅದರಲ್ಲಿ ಮಟನ್ ತುಂಡುಗಳನ್ನು ಹಾಕಿ, ತೊಗರಿ ಬೇಳೆ, ಕಡಲೆ ಬೇಳೆ, 2 ಕಪ್ ನೀರು ಹಾಕಿ 5 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
* ಬಳಿಕ ಉರಿಯನ್ನು ಆಫ್ ಮಾಡಿ, ಒತ್ತಡ ತಾನಾಗೇ ಬಿಡುಗಡೆಯಾಗುವವರೆಗೆ ಕಾಯಿರಿ.
* ಈ ನಡುವೆ ಮಿಕ್ಸರ್ ಜಾರ್‌ನಲ್ಲಿ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಹಾಗೂ ಕಾಲು ಕಪ್ ನೀರು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ.
* ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಈರುಳ್ಳಿ, ಕರಿಬೇವಿನ ಸೊಪ್ಪು ಮತ್ತು ಹಸಿಮೆಣಸಿನಕಾಯಿ ಹಾಕಿ, ಈರುಳ್ಳಿ ಮೃದುವಾಗುವವರೆಗೆ 3-4 ನಿಮಿಷಗಳ ಕಾಲ ಫ್ರೈ ಮಾಡಿ.
* ಬಳಿಕ ಟೊಮೆಟೊ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಒಂದೆರಡು ನಿಮಿಷ ಫ್ರೈ ಮಾಡಿ.
* ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಪುಡಿ, ಹುಣಸೆಹಣ್ಣಿನ ಪೇಸ್ಟ್ ಮತ್ತು ಉಪ್ಪನ್ನು ಸೇರಿಸಿ ಒಂದು ನಿಮಿಷ ಫ್ರೈ ಮಾಡಿ.
* ಬದನೆ, ಮಾವು, ಬಾಳೆ ಕಾಯಿ ಹಾಗೂ ಸ್ವಲ್ಪ ನೀರು ಸೇರಿಸಿ ಮುಚ್ಚಳ ಮುಚ್ಚಿ 15 ನಿಮಿಷಗಳ ಕಾಲ ಕುದಿಸಿಕೊಳ್ಳಿ.
* ಬೇಯಿಸಿದ ಮಟನ್ ಮಿಶ್ರಣಕ್ಕೆ ಹುರಿದ ಮಿಶ್ರಣ ಸೇರಿಸಿ ತೆಂಗಿನ ಹಾಲು ಹಾಕಿ ಒಂದೆರಡು ನಿಮಿಷಗಳ ಕಾಲ ಕುದಿಯಲು ಬಿಡಿ.
* ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮಟನ್ ದಾಲ್ಚಾ ತಯಾರಾಗುತ್ತದೆ. ಇದನ್ನು ಬಿರಿಯಾನಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ವಯಸ್ಸಿನ ಭೇದವಿಲ್ಲ – ಪ್ರತಿಯೊಬ್ಬರಿಗೂ ಇಷ್ಟವಾಗುತ್ತೆ ಎಗ್ ಟಿಕ್ಕಾ ಕಬಾಬ್