ಮಾದಕ ಬೆಡಗಿ ಸನ್ನಿ ಲಿಯೋನ್ ಮಂಡ್ಯದ ಅಭಿಮಾನಿಗೆ ದೊಡ್ಡ ಶಾಕ್ ಕೊಟ್ಟಿದ್ದಾರೆ. ಆದರೂ, ಆ ಅಭಿಮಾನಿಯ ಕಾಯಕವನ್ನು ಗೌರವಿಸುವುದಾಗಿ ಅವರು ಹೇಳಿದ್ದಾರೆ. ನಿನ್ನೆಯಷ್ಟೇ ಬೆಂಗಳೂರಿಗೆ ಆಗಮಿಸಿದ ಸನ್ನಿ ಲಿಯೋನ್, ತಮ್ಮ ಮಂಡ್ಯದ ಅಭಿಮಾನಿಗಳ ಬಗ್ಗೆ ಮಾತನಾಡಿದರು. ಮಂಡ್ಯದಲ್ಲಿ ತಮ್ಮ ಅಭಿಮಾನಿ ಬಳಗವಿದ್ದು, ಅಲ್ಲಿ ಈ ಬಾರಿ ಸನ್ನಿಯ ಹುಟ್ಟು ಹಬ್ಬ ಆಚರಿಸಿದ್ದರ ಬಗ್ಗೆ ಖುಷಿಯಿಂದ ಮಾತನಾಡಿದರು. ಇದನ್ನೂ ಓದಿ : ಓಟಿಟಿಯಲ್ಲೂ ದಾಖಲೆ ಬರೆದ ‘ದಿ ಕಾಶ್ಮೀರ್ ಫೈಲ್ಸ್’
ಮಂಡ್ಯದಲ್ಲಿ ಅಭಿಮಾನಿಗಳು ಇರುವ ವಿಚಾರ ಪತ್ರಿಕೆಯಿಂದ ನೋಡಿ ತಿಳಿದುಕೊಂಡೆ. ತುಂಬಾ ಖುಷಿ ಆಯಿತು. ಖಂಡಿತಾ ಅವರನ್ನು ನಾನು ಭೇಟಿ ಮಾಡುವೆ. ಅಲ್ಲದೇ, ಅವರು ನನ್ನ ಹುಟ್ಟು ಹಬ್ಬದಂದು ರಕ್ತದಾನ ಮಾಡಿದ್ದಾರೆ. ನಾನೂ ಕೂಡ ಅಭಿಮಾನಿಗಳ ಹೆಸರಿನಲ್ಲಿ ರಕ್ತದಾನ ಮಾಡುವುದಾಗಿ ಅವರು ಘೋಷಿಸಿದ್ದಾರೆ. ಈ ನಡುವೆ ಮಂಡ್ಯದಲ್ಲೇ ಅಭಿಮಾನಿಯೊಬ್ಬ ಸನ್ನಿ ಹೆಸರಿನಲ್ಲಿ ರಿಯಾಯತಿ ದರದಲ್ಲಿ ಚಿಕನ್ ಕೊಡುವ ಕುರಿತು ಅವರ ಗಮನಕ್ಕೆ ತರಲಾಯಿತು. ಆಗ ಮತ್ತೆ ಅಚ್ಚರಿ ವ್ಯಕ್ತ ಪಡಿಸಿದರು ಸನ್ನಿ ಲಿಯೋನ್. ಇದನ್ನೂ ಓದಿ : ಯಶ್ ಆಸೆ ಈಡೇರಿಸುತ್ತಾರಾ ತಮಿಳಿನ ಖ್ಯಾತ ನಿರ್ದೇಶಕ ಶಂಕರ್
ಸನ್ನಿ ಲಿಯನ್ ಸಸ್ಯಹಾರಿಯಂತೆ. ಅವರು ನಾನ್ ವೆಜ್ ತಿನ್ನುವುದಿಲ್ಲವಂತೆ. ಪ್ರಾಣಿಗಳ ಹತ್ಯೆ ಮಾಡುವುದು ಅವರಿಗೆ ಇಷ್ಟವಿಲ್ಲವಂತೆ. ಹಾಗಾಗಿ ಅವರು ಕೇವಲ ವೆಜ್ ತಿನ್ನುತ್ತಾರಂತೆ. ಆದರೆ, ಅಭಿಮಾನಿಗಳು ಮಾಂಸ ಮಾರಾಟ ಮಾಡುತ್ತಾರೆ ಎಂದರೆ, ಅದನ್ನು ಬೇಡ ಎಂದು ಹೇಳಲು ಆಗದು. ಅವರ ಕಾಯಕ ಬಗ್ಗೆ ಗೌರವಿಸುವುದಾಗಿ ಸನ್ನಿ ಹೇಳಿದ್ದಾರೆ. ಇದನ್ನೂ ಓದಿ : ಪ್ರಾದೇಶಿಕ ಭಾಷಾ ಮಹತ್ವ ಪ್ರಧಾನಿ ಮೋದಿ ಮಾತಿಗೆ ಸಂತಸ ವ್ಯಕ್ತ ಪಡಿಸಿದ ಕಿಚ್ಚ ಸುದೀಪ್
ಸನ್ನಿ ಹೆಸರಿನಲ್ಲಿ ರಿಯಾಯತಿ ದರದಲ್ಲಿ ಮಾಂಸ ಮಾರಾಟ ಮಾಡುತ್ತಿದ್ದ ಮಂಡ್ಯದ ಹುಡುಗ ಈ ವಿಷಯ ಕೇಳಿ ನಿಜಕ್ಕೂ ಅಚ್ಚರಿ ವ್ಯಕ್ತ ಪಡಿಸಿದ್ದಾನೆ. ಈವರೆಗೂ ಸನ್ನಿ ಲಿಯೋನ್ ನಾನ್ ವೆಜ್ ಪ್ರಿಯೆ ಎಂದೇ ನಂಬಲಾಗುತ್ತಿತ್ತು. ಅವರು ವೆಜ್ ಪ್ರಿಯೆ ಎಂದು ಹೇಳುವ ಮೂಲಕ ಊಹೆಯನ್ನೇ ಬುಡಮೇಲು ಮಾಡಿದ್ದಾರೆ.