CinemaDistrictsKarnatakaLatestMain PostSandalwoodSouth cinema

ಯಶ್ ಆಸೆ ಈಡೇರಿಸುತ್ತಾರಾ ತಮಿಳಿನ ಖ್ಯಾತ ನಿರ್ದೇಶಕ ಶಂಕರ್

ಜನಿಕಾಂತ್ ಸೇರಿದಂತೆ ತಮಿಳಿನ ಸೂಪರ್ ಸ್ಟಾರ್ ಗಳಿಗೆಲ್ಲ ಸಿನಿಮಾ ಮಾಡಿರುವ ನಿರ್ದೇಶಕ ಶಂಕರ್ ಇತ್ತೀಚೆಗಷ್ಟೇ ಯಶ್ ನಟನೆಯ ಕೆಜಿಎಫ್ 2 ಸಿನಿಮಾ ನೋಡಿದ್ದಾರೆ. 33 ದಿನಗಳ ನಂತರ ಕೆಜಿಎಫ್ 2 ಸಿನಿಮಾ ನೋಡಿರುವ ನಿರ್ದೇಶಕರು ಈ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ತಮ್ಮ ಮುಕ್ತ ಅಭಿಪ್ರಾಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅವರ ಬರಹ ಮತ್ತೊಂದು ಚರ್ಚೆಯನ್ನು ಹುಟ್ಟುಹಾಕಿದೆ. ಇದನ್ನೂ ಓದಿ : ಪ್ರಾದೇಶಿಕ ಭಾಷಾ ಮಹತ್ವ ಪ್ರಧಾನಿ ಮೋದಿ ಮಾತಿಗೆ ಸಂತಸ ವ್ಯಕ್ತ ಪಡಿಸಿದ ಕಿಚ್ಚ ಸುದೀಪ್

‘ಕೊನೆಗೂ ನಾನು ಕೆಜಿಎಫ್ 2 ಸಿನಿಮಾ ನೋಡಿದೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ಕಾಡಿತು. ತೀಕ್ಷ್ಣವಾದ ಕಥೆ, ಅದನ್ನು ಹೇಳುವ ಕ್ರಮ, ದೃಶ್ಯಗಳನ್ನು ಕಟ್ಟಿದ ರೀತಿ, ಎಡಿಟಿಂಗ್, ದೃಶ್ಯಗಳನ್ನು ಜೋಡಿಸಿದ ಕಲೆ ಎಲ್ಲವೂ ಇಷ್ಟವಾಯಿತು. ಮಾಸ್ ಡೈಲಾಗ್ ಮತ್ತು ಅದನ್ನು ಸಮರ್ಥವಾಗಿ ಕಟ್ಟಿಕೊಟ್ಟ ರೀತಿಯೂ ಆಧುನಿಕವಾಗಿದೆ. ಯಶ್ ಪವರ್ ಹೌಸ್, ಪ್ರಶಾಂತ್ ನೀಲ್ ಕೂಡ ಅದ್ಭುತವಾಗಿ ಸಿನಿಮಾ ಮಾಡಿದ್ದಾರೆ’ ಎಂದು ಹಾಡಿಹೊಗಳಿದ್ದಾರೆ ಶಂಕರ್. ಇದನ್ನೂ ಓದಿ : ನಾಲ್ಕೈದು ವರ್ಷ ಪ್ರಶಾಂತ್ ನೀಲ್ ತೆಲುಗಿನಲ್ಲೇ ಲಾಕ್ : ಮತ್ತೆ ರಕ್ತದ ಹಿಂದೆ ಬಿದ್ದ ಕೆಜಿಎಫ್ ಡೈರೆಕ್ಟರ್

ಭಾರತೀಯ ಸಿನಿಮಾ ರಂಗದಲ್ಲಿ ‘ಎಂದಿರನ್’, ‘ಜೆಂಟಲ್ ಮನ್’, ‘ಕಾದಲನ್’, ‘ಅನ್ನಿಯನ್’, ‘ಇಂಡಿಯನ್’  ರೀತಿಯ ಭಾರೀ ಬಜೆಟ್ ಸಿನಿಮಾ ಕೊಟ್ಟಿರುವ ಮತ್ತು ಅವೆಲ್ಲವೂ ಬಾಕ್ಸ್ ಆಫೀಸಿನಲ್ಲಿ ಹಿಟ್ ಆದಂತಹ ಚಿತ್ರಗಳನ್ನು ನೀಡಿರುವ ಶಂಕರ್ ಅವರು ಕೆಜಿಎಫ್ 2 ಸಿನಿಮಾದ ಬಗ್ಗೆ ಆಡಿದ ಮಾತುಗಳು ಚಿತ್ರತಂಡಕ್ಕೆ ಮತ್ತಷ್ಟು ಚೈತನ್ಯ ತುಂಬಿವೆ. ಅದರಲ್ಲೂ ಯಶ್‍ ಗೆ ಸಾಕಷ್ಟು ಸಂಭ್ರಮ ತಂದಿದೆ. ಅದಕ್ಕೆ ಕಾರಣವೂ ಇದೆ. ಇದನ್ನೂ ಓದಿ: ಬಾಡಿ ಶೇಮಿಂಗ್ ವಿರುದ್ಧ ನಟಿ ಮಯೂರಿ ಮಾತು

KGF 2 Yash (4)

ಈ ಹಿಂದೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಯಶ್ ಅವರಿಗೆ ನಿರೂಪಕರು, ‘ನೀವು ಶಂಕರ್ ಅವರ ಚಿತ್ರಗಳಲ್ಲಿ ನಟಿಸಲು ಇಷ್ಟಪಡುತ್ತಿರೋ ಅಥವಾ ಮಣಿರತ್ನಂ ಚಿತ್ರದಲ್ಲಿ ನಟಿಸಲು ಆಸಕ್ತಿ ಹೊಂದಿದ್ದೀರೋ’ ಎಂದು ಕೇಳಿದ್ದರು. ಕ್ಷಣವೂ ಯಶ್ ಯೋಚಿಸದೇ ಶಂಕರ್ ಅವರ ಹೆಸರು ಹೇಳಿದ್ದರು. ಇದೀಗ ಯಶ್ ನಟನೆಯ ಚಿತ್ರವನ್ನು ಶಂಕರ್ ಹಾಡಿಹೊಗಳಿದ್ದಾರೆ. ಹಾಗಾಗಿ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರಾ ಎನ್ನುವ ಹೊಸ ಚರ್ಚೆ ಇದೀಗ ಶುರುವಾಗಿದೆ. ಇದನ್ನೂ ಓದಿ: 625ಕ್ಕೆ 619 ಅಂಕಗಳನ್ನು ಗಳಿಸಿದ `ಗಟ್ಟಿಮೇಳ’ ಖ್ಯಾತಿಯ ಮಹತಿ ಭಟ್

ಈ ಹಿಂದೆಯೂ ಕೆಜಿಎಫ್ ಸಿನಿಮಾದ ನಂತರ ಶಂಕರ್ ಅವರು ಯಶ್ ಗಾಗಿ ಸಿನಿಮಾವೊಂದನ್ನು ಮಾಡಲಿದ್ದಾರೆ ಎನ್ನುವ ಸುದ್ದಿಯಾಗಿತ್ತು. ಅದು ಕೊನೆಗೂ ಸುದ್ದಿಯಾಗಿಯೇ ಉಳಿಯಿತು. ಇದೀಗ ಮತ್ತೆ ಅದೇ ಸುದ್ದಿ ಹರಿದಾಡುತ್ತಿದೆ. ಆದರೆ, ಎರಡೂ ಕಡೆಯಿಂದ ಕುರಿತು ಪ್ರತಿಕ್ರಿಯೆ ಬರಬೇಕಷ್ಟೇ.

Leave a Reply

Your email address will not be published.

Back to top button