ಸುಡುವ ಬಿಸಿಲಿಗೆ ಟ್ರೆಂಡ್ ಆಯ್ತು ಸನ್ ಡ್ರೆಸ್ ಫ್ಯಾಷನ್

Public TV
2 Min Read
FASHION DRESS

ಬೇಸಿಗೆಯಲ್ಲಿ ಸನ್ ಡ್ರೆಸ್‌ಗಳು (Sun Dresses) ಹಂಗಾಮ ಎಬ್ಬಿಸಿವೆ. ಹೌದು, ಪ್ರತಿ ಬಾರಿಯಂತೆ ಈ ಬಾರಿಯು ಈ ಸೀಸನ್‌ನಲ್ಲಿ ಮತ್ತೊಮ್ಮೆ ನಾನಾ ಶೈಲಿಯ ಸನ್ ಡ್ರೆಸ್‌ಗಳು ಕಾಲಿಟ್ಟಿವೆ. ಧರಿಸಿದಾಗ ಉಲ್ಲಾಸ ನೀಡುವ ಈ ಉಡುಪುಗಳು ಯುವತಿಯರ ಮನಸ್ಸನ್ನು ಗೆದ್ದಿವೆ. ಇದನ್ನೂ ಓದಿ:ಸೋನು ಶ್ರೀನಿವಾಸ್ ಗೌಡಗೆ ಜಾಮೀನು

FASHION

ಬೇಸಿಗೆಯಲ್ಲಿ ದಪ್ಪನೆಯ ಫ್ಯಾಬ್ರಿಕ್‌ನ ಔಟ್‌ಫಿಟ್‌ಗಳನ್ನು ಧರಿಸುವುದು ಕಷ್ಟ ಸಾಧ್ಯ. ಇವು ಅಂಟಿಕೊಳ್ಳುತ್ತವೆ ಜೊತೆಗೆ ಉಸಿರುಗಟ್ಟಿಸುತ್ತವೆ. ಈ ಹಿನ್ನೆಲೆಯಲ್ಲಿ ಪ್ರತಿ ಬಾರಿಯು ಈ ಸೀಸನ್‌ನಲ್ಲಿ, ಬಗೆಬಗೆಯ ಕಲರ್‌ಫುಲ್ ಪ್ರಿಂಟ್ಸ್‌ನ ಹಾಗೂ ಮಾನೋಕ್ರೋಮ್ ಡಿಸೈನ್‌ನ ಆರಾಮದಾಯಕ ಎಂದೆನಿಸುವ ಸನ್ ಡ್ರೆಸ್‌ಗಳು ಎಂಟ್ರಿ ನೀಡುತ್ತವೆ.

FotoJet 1 1

ಕೆಲವು ಸಿಂಪಲ್ ಡಿಸೈನ್ ಹೊಂದಿದ್ದರೇ, ಇನ್ನೂ ಕೆಲವು ಪ್ರಿಂಟೆಡ್ ಹಾಗೂ ಶಾರ್ಟ್ ಸ್ಲೀವ್ ಡಿಸೈನ್ ಹೊಂದಿರುತ್ತವೆ. ನೋಡಲು ಕೂಡ ಆಕರ್ಷಕವಾಗಿ ಕಾಣುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಪ್ರಕಾರ, ಅವರವರ ಪರ್ಸನಾಲಿಟಿಗೆ ತಕ್ಕಂತೆ ಇವನ್ನು ಆಯ್ಕೆ ಮಾಡಿಕೊಂಡಾಗ ನೋಡಲು ಆಕರ್ಷಕವಾಗಿ ಕಾಣಿಸುತ್ತವೆ ಎನ್ನುತ್ತಾರೆ.

FotoJet 2 1

ಸನ್ ಡ್ರೆಸ್‌ಗಳಲ್ಲಿ ಆಫ್ ಶೋಲ್ಡರ್ ಫ್ರಾಕ್, ಕೋಲ್ಡ್ ಶೋಲ್ಡರ್ ಫ್ರಾಕ್, ಮ್ಯಾಕ್ಸಿ ಡ್ರೆಸ್, ಮಿಡಿ ಡ್ರೆಸ್, ಟ್ಯಾಂಕ್ ಡ್ರೆಸ್, ಮಿನಿ ಸನ್ ಡ್ರೆಸ್, ಶಾರ್ಟ್ ಸ್ಕರ್ಟ್ ಸನ್ ಡ್ರೆಸ್, ಸ್ಪೆಗೆಟಿ, ವಿಂಟೇಜ್ ಸ್ಲೀವ್ ಸನ್ ಡ್ರೆಸ್, ಫಿಟ್ ಫ್ಲೋವಿ ಸನ್ ಡ್ರೆಸ್, ಎ ಲೈನ್, ಟೈ ಡ್ರೆಸ್, ಟ್ಯೂನಿಕ್, ಬಟನ್ ಡೌನ್, ಬೋಹೋ ಸೇರಿದಂತೆ ಲೆಕ್ಕವಿಲ್ಲದಷ್ಟು ಶೈಲಿಯಲ್ಲಿ ನಾನಾ ಬಗೆಯಲ್ಲಿ ಬಿಡುಗಡೆಗೊಂಡಿವೆ. ಅದರಲ್ಲೂ ಬೇಸಿಗೆಗೆ ಹೊಂದುವಂತಹ ವೈವಿಧ್ಯಮಯ ಫ್ಲೋರಲ್ ಪ್ರಿಂಟ್ಸ್‌ನವು ಹೆಚ್ಚು ಚಾಲ್ತಿಯಲ್ಲಿವೆ.

ಇದೀಗ ಯುವತಿಯರು ಮಾತ್ರವಲ್ಲ, ಮಧ್ಯ ವಯಸ್ಕ ಹುಡುಗಿಯರು ಕೂಡ ಈ ಸನ್ ಡ್ರೆಸ್‌ಗಳಿಗೆ ಶರಣಾಗುತ್ತಿದ್ದಾರೆ. ಧರಿಸಿದಾಗ ಉಲ್ಲಾಸ ಹೆಚ್ಚಿಸುವ ಈ ಹೂವುಗಳ ಪ್ರಿಂಟ್ಸ್ ಡ್ರೆಸ್‌ಗಳು ಮೂಡನ್ನು ಕೂಡ ಸರಿ ಮಾಡುತ್ತವಂತೆ. ಇದಕ್ಕೆ ಕಾರಣ, ಈ ಡ್ರೆಸ್‌ನಲ್ಲಿ ಕಂಡು ಬರುವ ಹೂವುಗಳ ಅಂದ-ಚೆಂದ. ಹೂವುಗಳನ್ನು ನೋಡಿದಾಗ ಎಂತಹವರ ಮನಸ್ಸು ಕೂಡ ಉಲ್ಲಾಸಮಯವಾಗಿಸುತ್ತದೆ. ಯಾಕೆಂದರೆ, ಹೂವುಗಳ ಬಗೆಬಗೆಯ ಪ್ರಿಂಟ್ಸ್ ಇದಕ್ಕಾಗಿಯೇ ಬೇಡಿಕೆ ಹೆಚ್ಚಿಸಿಕೊಂಡಿದೆ ಎನ್ನುತ್ತಾರೆ ಸ್ಟೈಲಿಸ್ಟ್.

ಫ್ಯಾಷನ್ ಟಿಪ್ಸ್:

ಸಾದಾ ಡಿಸೈನ್ ಬದಲು ಫ್ಲೋರಲ್ ಪ್ರಿಂಟ್ಸ್‌ನದ್ದನ್ನು ಆಯ್ಕೆ ಮಾಡಿ.
ಸನ್ ಡ್ರೆಸ್ ನೆಕ್‌ಲೈನ್ ಅಗಲವಾಗಿರಲಿ.
ಶಾರ್ಟ್ ಲೆಂಥ್ ಸನ್ ಡ್ರೆಸ್ ಟ್ರೆಂಡಿಯಾಗಿವೆ

Share This Article