– ಇತ್ತ ಅಂಬಿಕಾಗೂ ಫುಲ್ ಡ್ರಿಲ್
ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಕಿಚ್‍ಗುತ್ತ್ ಮಾರಮ್ಮ ವಿಷಪ್ರಸಾದಕ್ಕೆ ಬಿಗ್ ಟ್ವಿಸ್ಟ್ ದೊರೆತಿದೆ. ವಿಷ ದುರಂತದ ತನಿಖೆ ಚುರುಕುಗೊಂಡಿದೆ. ಸಾಲೂರು ಮಠದ ಕಿರಿಯ ಸ್ವಾಮೀಜಿಯ ತೀವ್ರ ವಿಚಾರಣೆ ಮಾಡಲಾಗುತ್ತಿದ್ದು, ಇಮ್ಮಡಿ ಮಹದೇವಸ್ವಾಮಿ ಬಂಧನವಾಗೋ ಸಾಧ್ಯತೆ ಹೆಚ್ಚಿದೆ.
ಇಂದು ರಾತ್ರಿ ಅಥವಾ ನಾಳೆ ವಶಕ್ಕೆ ಪಡೆಯೋ ಸಾಧ್ಯತೆಗಳಿವೆ. ಯಾಕಂದ್ರೆ ಸ್ವಾಮೀಜಿಯನ್ನು ಇಂದು ಪೊಲೀಸರು ಎರಡನೇ ಬಾರಿಗೆ ವಿಚಾರಣೆಗೆ ಒಳಪಡಿಸಿದ್ದಾರೆ. ಶಂಕಿತ ಆರೋಪಿಗಳು ಸ್ವಾಮೀಜಿ ಹೆಸರು ಬಾಯ್ಬಿಟ್ಟ ಹಿನ್ನೆಲೆಯಲ್ಲಿ ಮತ್ತೆ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ. ಈ ಮೂಲಕ ಸ್ವಾಮೀಜಿ ಯಾರದೋ ಮೇಲಿನ ದ್ವೇಷಕ್ಕೆ ವಿಷ ಬೆರೆಸಲು ಸೂಚಿಸಿದ್ರಾ ಅನ್ನೋ ಪ್ರಶ್ನೆಯೊಂದು ಮೂಡಿದೆ.
ಇತ್ತ ಆರೋಪಿ ಮಾದೇಶ್ ಪತ್ನಿ ಅಂಬಿಕಾರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಪ್ರಸಾದಕ್ಕೆ ಕ್ರಿಮಿನಾಶಕ ಬೆರೆಸಿರುವ ವಿಚಾರ ಈಕೆಗೂ ಗೊತ್ತಿರಬಹುದು ಎಂಬ ಶಂಕೆ ಮೇಲೆ ಕಳೆದ ರಾತ್ರಿಯಿಂದ ಇಲ್ಲಿವರೆಗೂ ಸುಮಾರು 10 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಈಗಾಗಲೇ ಅಂಬಿಕಾಳ ಗಂಡ ದೇವಸ್ಥಾನದ ವ್ಯವಸ್ಥಾಪಕ ಮಾದೇಶ್ ಪೊಲೀಸ್ ವಶದಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾನೆ. ಇದನ್ನೂ ಓದಿ: ವಿಷ ಪ್ರಸಾದ ಕೇಸ್ – ರಾತ್ರಿ ಅಡ್ಮಿಟ್, ಬೆಳಗ್ಗೆ ಡಿಸ್ಚಾರ್ಜ್ ಕಿರಿಯ ಸ್ವಾಮೀಜಿ ನಡೆ ಬಗ್ಗೆ ಮೂಡಿದೆ ಅನುಮಾನ
ಒಟ್ಟಿನಲ್ಲಿ ಸುಳ್ವಾಡಿಯಲ್ಲಿರುವ ಮಾರಮ್ಮನ ಪ್ರಸಾದಕ್ಕೆ ಹಾಕಲು ವಿಷ ಸಿಕ್ಕಿದಾದ್ರೂ ಎಲ್ಲಿಂದ..? ಕೊಟ್ಟಿದ್ದು ಯಾರು..? ತಂದಿದ್ದು ಯಾರು..? ಇದು ಇನ್ನೂ ನಿಗೂಢವಾಗಿರೋ ಪ್ರಶ್ನೆಯಾಗಿದೆ. ಸುಳ್ವಾಡಿಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜದ ಮೂರು ಅಂಗಡಿಗಳಿವೆ. ಆದ್ರೆ ಆ ಅಂಗಡಿಗಳಲ್ಲಿ ಕ್ರಿಮಿನಾಶಕ ಮಾರುತ್ತಿಲ್ಲ. ಕೀಟನಾಶಕ ಬೇಕು ಅಂದ್ರೆ 50 ಕಿಲೋ ಮೀಟರ್ ದೂರದಲ್ಲಿರುವ ಹನೂರಿಗೆ ಬರಬೇಕು. ಸುಳ್ವಾಡಿ ಭಾಗದಲ್ಲಿ ಬೆಳೆದಿರೋದೇ ಜೋಳ ಮತ್ತು ಸೂರ್ಯಕಾಂತಿ ಬೆಳೆ. ಅವುಗಳಿಗೆ ಕ್ರಿಮಿನಾಶಕದ ಅವಶ್ಯಕತೆ ಇಲ್ಲ. ಹಾಗಾದ್ರೆ ಪ್ರಸಾದಕ್ಕೆ ವಿಷ ತಂದಿದ್ದು ಎಲ್ಲಿಂದ ಅನ್ನೋ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ.
https://www.youtube.com/watch?v=y44ngMg3714
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv