ನವದೆಹಲಿ: ಸಾಮಾಜಿಕ ಕಾರ್ಯಕರ್ತ ಹಾಗೂ ಸುಲಭ್ ಇಂಟರ್‌ನ್ಯಾಷನಲ್ ಸ್ಥಾಪಕ ಬಿಂದೇಶ್ವರ್ ಪಾಠಕ್ (Sulabh International founder Bindeshwar Pathak) ದೆಹಲಿಯ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ.
ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ (Independence Day) ತೊಡಗಿದ್ದ 80 ವರ್ಷದ ಪಾಠಕ್ ಅವರು ಏಕಾಏಕಿ ತೀವ್ರ ಅಸ್ವಸ್ಥರಾದರು. ಕೂಡಲೇ ಅವರನ್ನು ದೆಹಲಿಯ ಏಮ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಹೃದಯ ಸ್ತಂಭನಕ್ಕೊಳಗಾಗಿ ಕೊನೆಯುಸಿರೆಳೆದರು.
Advertisement
The passing away of Dr. Bindeshwar Pathak Ji is a profound loss for our nation. He was a visionary who worked extensively for societal progress and empowering the downtrodden.
Bindeshwar Ji made it his mission to build a cleaner India. He provided monumental support to the… pic.twitter.com/z93aqoqXrc
— Narendra Modi (@narendramodi) August 15, 2023
Advertisement
ಪರಿಸರ ನೈರ್ಮಲ್ಯಕ್ಕೆ ಪಾಠಕ್ ಅವರು ಹೆಚ್ಚು ಒತ್ತು ಕೊಟ್ಟಿದ್ದರಿಂದ ಹೆಸರುವಾಸಿಯಾಗಿದ್ದರು. 1970ರಲ್ಲಿ ಬಿಹಾರದಲ್ಲಿ ಸುಲಭ್ ಇಂಟರ್‌ನ್ಯಾಷನಲ್ ಸಂಸ್ಥೆಯನ್ನು ಸ್ಥಾಪಿಸಿದರು. ಈ ಮೂಲಕ ಶೌಚಾಲಯ ನಿರ್ಮಾಣ ಮಾಡುವ ಯೋಜನೆಯೊಂದನ್ನು ಜಾರಿಗೆ ತಂದರು. ಹೀಗಾಗಿ ಅವರಿಗೆ ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದವು.
Advertisement
Advertisement
ಸದ್ಯ ಪಾಠಕ್ ನಿಧನಕ್ಕೆ ಪ್ರಧಾನಿ ನರೇಂದ್ರ (Narendra Modi) ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಸೇರಿದಂತೆ ಅನೇಕ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪ್ರಧಾನಿಯವರು ಈ ಸಂಬಂಧ ಟ್ವೀಟ್ ಮಾಡಿ, ಡಾ. ಬಿಂದೇಶ್ವರ್ ಪಾಠಕ್ ನಿಧನವು ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಸಮಾಜದ ಪ್ರಗತಿಗಾಗಿ ಮತ್ತು ದೀನದಲಿತರ ಸಬಲೀಕರಣಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಧ್ವಜಾರೋಹಣ ಮಾಡ್ತಾರೆ: ಮುಂದಿನ ವರ್ಷ ಕೆಂಪು ಕೋಟೆಯಲ್ಲಿ ಮತ್ತೆ ಸಿಗೋಣ ಎಂದಿದ್ದ ಮೋದಿಗೆ ಖರ್ಗೆ ಟಾಂಗ್
ಬಿಂದೇಶ್ವರ್ ಜಿ ಅವರು ಸ್ವಚ್ಛ ಭಾರತ ನಿರ್ಮಾಣವನ್ನು ತಮ್ಮ ಗುರಿಯಾಗಿಟ್ಟುಕೊಂಡಿದ್ದರು. ಹೀಗಾಗಿ ಅವರು ಸ್ವಚ್ಛ ಭಾರತ್ ಮಿಷನ್‍ಗೆ ಸಂಪೂರ್ಣ ಬೆಂಬಲ ನೀಡಿದ್ದರು. ಪಾಠಕ್ ಅವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಸದ್ಯ ಅವರು ನಮ್ಮಿಂದ ದೂರವಾಗಿದ್ದು, ಇಂತಹ ದುಃಖದ ಸಮಯದಲ್ಲಿ ಅವರ ಕುಟುಂಬಕ್ಕೆ ದುಃಖಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಓಂ ಶಾಂತಿ ಎಂದು ಮೋದಿ ಬರೆದುಕೊಂಡಿದ್ದಾರೆ.
Web Stories