ಶುಗರ್ ಡ್ಯಾಡಿ, ಡ್ರಗ್ಸ್ ಇನ್ ಸ್ಯಾಂಡಲ್‍ವುಡ್ ಪುಸ್ತಕ ಬರೆಯುತ್ತೇನೆ: ಪ್ರಶಾಂತ್ ಸಂಬರಗಿ

Public TV
2 Min Read
prashanth sambargi

ಬೆಂಗಳೂರು: ಡ್ರಗ್ಸ್ ದಂಧೆ ಕುರಿತು ‘ಶುಗರ್ ಡ್ಯಾಡಿ, ಡ್ರಗ್ಸ್ ಇನ್ ಸ್ಯಾಂಡಲ್‍ವುಡ್’ ಎಂಬ ಪುಸ್ತಕ ಬರೆಯುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ನಟಿ ರಾಗಿಣಿ ಮತ್ತು ಸಂಜನಾ ಡ್ರಗ್ಸ್ ಸೇವಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಶಾಂತ್ ಸಂಬರಗಿ ಪ್ರತಿಕ್ರಿಯೆ ನೀಡಿದ್ದಾರೆ.

ಡ್ರಗ್ಸ್ ವಿಚಾರವಾಗಿ ಕೇವಲ ನಟಿಯರು ಮಾತ್ರವಲ್ಲ ಪ್ರಭಾವಿ ರಾಜಕಾರಣಿಗಳ ಬಗ್ಗೆಯೂ ಸ್ವಲ್ಪ ದಾಖಲೆ ಸಿಕ್ಕಿದೆ. ಈ ಬಗ್ಗೆ ಪೊಲೀಸರಿಗೆ ದಾಖಲೆ ನೀಡುತ್ತೇನೆ. ಸ್ಯಾಂಡಲ್‍ವುಡ್‍ನಲ್ಲಿ ಇಂತಹ ಹಲವು ಡ್ರಗ್ಸ್ ಪ್ರಕರಣಗಳಿವೆ. ಈ ಬಗ್ಗೆ ನಾನು ಶುಗರ್ ಡ್ಯಾಡಿ, ಡ್ರಗ್ಸ್ ಇನ್ ಸ್ಯಾಂಡಲ್‍ವುಡ್’ ಎಂಬ ಪುಸ್ತಕ ಬರೆಯುತ್ತೇನೆ. ಇದರಲ್ಲಿ ಪೊಲೀಸರು ಬಿಟ್ಟು ಹೋದ ಹೆಸರನ್ನು ಬರೆಯುತ್ತೇನೆ. ಇಡೀ ಡ್ರಗ್ಸ್ ಲೋಕದ ಕೆಟ್ಟ ಪ್ರಪಂಚವನ್ನು ಅನಾವರಣಗೊಳಿಸುತ್ತೇನೆ ಎಂದಿದ್ದಾರೆ.

ಇದು ನನ್ನ ಗೆಲುವಲ್ಲ. ಸತ್ಯಕ್ಕೆ ಸಿಕ್ಕ ಗೆಲುವು. ಪ್ರಶಾಂತ್ ಸಂಬರಗಿ ಅವರು ಪ್ರಚಾರಕ್ಕಾಗಿ ನಟಿಮಣಿಯರ ಹೆಸರನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ನನ್ನ ಮೇಲೆ ಬರುತ್ತಿತ್ತು. ಆದರೆ ಇಂದು ಅದಕ್ಕೆಲ್ಲ ಉತ್ತರ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸುರುಳಿ ಸುತ್ತಿದ್ದ 100 ರೂ. ನೋಟಿನ ಮೂಲಕ ರಾಗಿಣಿ ಡ್ರಗ್ಸ್ ಸೇವನೆ

ಶುಗರ್ ಡ್ಯಾಡಿ ಅಂದರೆ ಯಾರು?
ಶ್ರೀಮಂತ ವ್ಯಕ್ತಿಯನ್ನು ಶುಗರ್ ಡ್ಯಾಡಿ ಎಂದು ಕರೆಯಲಾಗುತ್ತದೆ. ಈತ ರಾಜಕಾರಣಿ, ಅಧಿಕಾರಿ, ಉದ್ಯಮಿ, ನಿರ್ಮಾಪಕ ಯಾರೂ ಬೇಕಾದರೂ ಆಗಬಹುದು. ಈತ ಹುಡುಗಿಯರಿಗೆ ದುಡ್ಡು ಕೊಡಬಹುದು, ಸಿನಿಮಾ ಆಫರ್ ಕೊಡಬಹುದು, ಸರ್ಕಾರಿ ಉದ್ಯೋಗ ಕೊಡಿಸಬಹುದು. ಒಟ್ಟಿನಲ್ಲಿ ಆತ ಆಕೆಗೆ ವಿಶೇಷವಾದ ಉಡುಗೊರೆ ಕೊಡುತ್ತೇನೆ. ಈ ಉಡುಗೊರೆಗೆ ಪ್ರತಿಯಾಗಿ ಆತ ಆಕೆಯಿಂದ ಆಕೆಯಿಂದ ದೈಹಿಕ ಸುಖವನ್ನು ಬಯಸುತ್ತಾನೆ. ಈ ಷರತ್ತಿಗೆ ಒಪ್ಪಿದರೆ ಆತ ಕರೆದಾಗ ಆಕೆ ಆತನ ಜೊತೆ ಎಲ್ಲದ್ದಕ್ಕೂ ತಯಾರಿ ಇರಬೇಕಾಗುತ್ತದೆ. ಇದನ್ನೂ ಓದಿ: ಸಣ್ಣ ಮೀನು ಹಿಡಿದಿದ್ದಾರೆ, ತಿಮಿಂಗಿಲಗಳಿವೆ: ಇಂದ್ರಜಿತ್ ಲಂಕೇಶ್

ಹಣಕಾಸಿನ ಸಹಾಯದ ಜೊತೆ ವಿಶೇಷ ಗಿಫ್ಟ್ ಪಡೆದು ಶುಗರ್ ಡ್ಯಾಡಿಗೆ ಸೆಕ್ಸ್ ಸುಖ ನೀಡುವ ಹುಡುಗಿಯರನ್ನು ಶುಗರ್ ಬೇಬಿ ಎಂದು ಕರೆಯಲಾಗುತ್ತದೆ. ಸಿನಿಮಾ ಕ್ಷೇತ್ರದಲ್ಲಿ ಹೊಸದಾಗಿ ಅವಕಾಶಕ್ಕಾಗಿ ಪ್ರಯತ್ನಿಸುತ್ತಿರುವ ನಟಿಯರಲ್ಲಿ ಹಲವು ಮಂದಿ ಶುಗರ್ ಬೇಬಿಗಳಾಗಿ ಆಫರ್ ಪಡೆಯುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *