ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್ ವಿಚಾರವಾಗಿ ಸಣ್ಣ ಮೀನು ಹಿಡಿದಿದ್ದಾರೆ ಇನ್ನೂ ತಿಮಿಂಗಿಲಗಳಿವೆ ತನಿಖೆಯಾಗಬೇಕು ಎಂದು ನಿರ್ದೇಶಕ, ನಿರ್ಮಾಪಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
Advertisement
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತನಿಖೆಯಾಗಿ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ಈ ಪ್ರಕರಣವನ್ನು ತನಿಖೆ ಮಾಡಿದ ಸಿಸಿಬಿ ತಂಡ ರಿಪೋರ್ಟ್ ಸಲ್ಲಿಸಿದ್ದಾರೆ. ಜೊತೆಗೆ ಕೋಟ್ಯಾಂತರ ರೂಪಾಯಿ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ತಂಡದ ತನಿಖೆಗೆ ಬೆನ್ನು ತಟ್ಟಲೇ ಬೇಕು ಎಂದಿದ್ದಾರೆ. ಇದನ್ನೂ ಓದಿ: ನಟಿ ರಾಗಿಣಿ ವಿರುದ್ಧ ಅಕುಲ್ ಬಾಲಾಜಿ ಸಾಕ್ಷ್ಯ!
Advertisement
Advertisement
ನನಗೆ ಸಿಕ್ಕಿರುವ ಮಾಹಿತಿಯನ್ನು ನಾನು ಹಂಚಿಕೊಂಡಿದ್ದೇನೆ. ಆ ಆಧಾರವಾಗಿ ತನಿಖೆ ಮಾಡಿ ಕೋರ್ಟ್‍ಗೆ ಒಂದು ರಿಪೋರ್ಟ್ ಕೊಟ್ಟಿದ್ದಾರೆ. ಈ ಪ್ರಕರಣ ಸಾಬೀತಾಗಿರುವುದು ಇದೀಗ ತಿಳಿದುಕೊಂಡೆ ಸಮಾಧಾನ ಆಗಿದ್ದರು. ಈ ಪ್ರಕರಣದಲ್ಲಿ ನನ್ನ ತೇಜೋವಧೆಯನ್ನು ಮಾಡಲು ಹಲವರು ಪ್ರಯತ್ನಿಸಿದರು. ಪವಿತ್ರವಾದ ಸ್ಥಳ ಗಲೀಜು ಆದ್ರೆ ಸ್ವಚ್ಛ ಮಾಡಬೇಕು. ಆ ಕೆಲಸವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಮೂಗಿನಲ್ಲಿ ಕೊಕೇನ್ ಸೇವಿಸುತ್ತಿದ್ದ ನಟಿ ರಾಗಿಣಿ!
Advertisement
ಸಾಮಾಜಿಕ ದೃಷ್ಟಿಯಿಂದ ಈ ಡ್ರಗ್ಸ್ ಜಾಲ ಕುರಿತಾಗಿ ಇನ್ನಷ್ಟು ತನಿಖೆ ಮಾಡಬೇಕು. ಸಣ್ಣ ಮೀನು ಹಿಡಿದಿದ್ದಾರೆ, ತಿಮಿಂಗಿಲಗಳಿವೆ ಬೆಂಗಳೂರು, ಕರ್ನಾಟಕದಲ್ಲಿ ದೊಡ್ಡ ಮಾಫಿಯವಾಗಿದೆ ಈ ಕುರಿತಾಗಿ ತನಿಖೆ ನಡೆಸಬೇಕು. ಇಂದ್ರಜಿತ್ ಅವರ ಮಾಹಿತಿ ಟುಸ್ ಆಗಿದೆ, ಇಂದ್ರಜಿತ್ ಅವರ ಕೂದಲು ಇತ್ತುಕೊಳ್ಳಲು ಆಗಲ್ಲ, ಗಾಳಿಯಲ್ಲಿ ಗುದ್ದಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಆದರೆ ನಾನು ವೈಯಕ್ತಿಕವಾಗಿ ನಾನು ಈ ಪ್ರಕರಣದಲ್ಲಿ ಬಂದಿಲ್ಲ. ನಾನು ಸಾಮಾಜಿಕ ಹಿತದೃಷ್ಟಿಯಿಂದ ನಾನು ಮುಂದೆ ಬಂದಿದ್ದು ಎಂದಿದ್ದಾರೆ.
ನನಗೆ ಈ ವಿಚಾರವಾಗಿ ಸಂತೋಷವಾಗಿದೆ, ನಾನು ಗೆದ್ದಿದ್ದೇನೆ, ನನ್ನ ಹೇಳಿಕೆ ನಿಜವಾಯಿತು ಎಂದು ಹೇಳಲು ನಾನು ಬಂದಿಲ್ಲ. ಈ ಕುರಿತಾಗಿ ಒಂದು ದೊಡ್ಡ ಮಾಫಿಯಾ ಇದೆ ತನಿಖೆಯಾಗಬೇಕಿದೆ. ಸಮಾಜ ಸ್ವಚ್ಛವಾಗಬೇಕು ಎಂದರು.
ಕೋಟ್ಯಾಂತರ ರೂಪಾಯಿ ಮೌಲ್ಯದ ಡ್ರಗ್‍ಅನ್ನು ವಶಪಡಿಸಿಕೊಂಡಿದ್ದಾರೆ. ಸಮಾಜ ಸ್ವಚ್ಚವಾಗಬೇಕು. ಸ್ಯಾಂಡಲ್‍ವುಡ್‍ನಲ್ಲಿ ನಡಿತಾ ಇರುವುದು ಸಾಬೀತಾಗಿದೆ. ಇಷ್ಟಕ್ಕೆ ಮುಗಿದಿಲ್ಲ ಇದರ ಹಿಂದೆ ದೊಡ್ಡ ಮಾಫಿಯಾ ಇದೆ ಇದರ ಹಿಂದೆ ಯಾರ್ಯಾರು ಇದ್ದಾರೆ ಎನ್ನುವುದು ತನಿಖೆ ನಡೆಯಬೇಕು. ಈ ಕುರಿತಾಗಿ ತನಿಖೆ ನಡೆಸುತ್ತಿರುವ ಸಿಸಿಬಿ ತಂಡಕ್ಕೆ ಧನ್ಯವಾದ ಹೇಳಿದರು.