Monday, 23rd July 2018

ಇಬ್ಬರು ಮೆಗಾಸ್ಟಾರ್‍ಗಳ ಜೊತೆ ನಟಿಸಲಿದ್ದಾರೆ ಕಿಚ್ಚ ಸುದೀಪ್

ಹೈದರಾಬಾದ್: ಟಾಲಿವುಡ್‍ನ ಅತಿ ನಿರೀಕ್ಷೆಯ ಮೆಗಾ ಸ್ಟಾರ್ ಚಿರಂಜೀವಿ ಅವರ 151ನೇ ಸಿನಿಮಾದ ಸೈರಾ ನರಸಿಂಹ ರೆಡ್ಡಿ ಸಿನಿಮಾದ ಟೀಸರ್ ಬಿಡುಗಡೆಗೊಂಡಿದ್ದು, ಇಬ್ಬರು ಮೆಗಾ ಸ್ಟಾರ್‍ಗಳೊಂದಿಗೆ ಕನ್ನಡದ ಮಾಣಿಕ್ಯ ಸುದೀಪ್ ತೆರೆಯನ್ನು ಹಂಚಿಕೊಳ್ಳಲಿದ್ದಾರೆ.

ಟಾಲಿವುಡ್ ಮತ್ತು ಬಾಲಿವುಡ್‍ನ ಮೆಗಾ ಸ್ಟಾರ್‍ಗಳಾದ ಚಿರಂಜೀವಿ ಮತ್ತು ಅಮಿತಾಬ್ ಬಚ್ಚನ್ ಜೊತೆಯಾಗಿ ನಟಿಸುತ್ತಿರುವುದು ಚಿತ್ರದ ವಿಶೇಷವಾಗಿದೆ. ಸ್ವಾತಂತ್ರ್ಯ ಹೋರಾಟಗಾರ ನರಸಿಂಹರೆಡ್ಡಿ ಅವರ ಐತಿಹಾಸಿಕ ಕಥೆಯನ್ನು ಹೊಂದಿರುವ ಸೈರಾ ದೊಡ್ಡ ತಾರಾಬಳಗವನ್ನೇ ಹೊಂದಿದೆ. ಸಿಲ್ವರ್ ಸ್ಕ್ರೀನ್ ಕ್ವೀನ್ ನಯನತಾರಾ, ಮಲೆಯಾಳಂನ ಸ್ಟಾರ್ ವಿಜಯ್ ಸೇಥುಪತಿ, ಟಾಲಿವುಡ್‍ನ ಡೇರಿಂಗ್ ಸ್ಟಾರ್ ಜಗಪತಿ ಬಾಬು ಒಳಗೊಂಡಂತೆ ಅನುಭವಿ ಕಲಾವಿದರನ್ನೇ ಸಿನಿಮಾ ಆಯ್ಕೆ ಮಾಡಿಕೊಂಡಿದೆ.

ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಸಾರಥ್ಯದಲ್ಲಿ ಹಾಡುಗಳು ಮೂಡಿಬರಲಿವೆ. ಸೈರಾ ಗೆ ನಿರ್ದೇಶಕ ಸುರೇಂದ್ರ ರೆಡ್ಡಿ ಆ್ಯಕ್ಷನ್ ಕಟ್ ಹೇಳಲಿದ್ದು, ನಟ ರಾಮ್ ಚರಣ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸಿನಿಮಾ ತೆಲಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿ ಬರಲಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಅಭಿಮಾನಿಗಳಲ್ಲಿ ಭಾರೀ ಕುತೂಹಲವನ್ನು ಹುಟ್ಟು ಹಾಕಿದೆ.

 

 

Leave a Reply

Your email address will not be published. Required fields are marked *