ನಟ ಕಿಚ್ಚ ಸುದೀಪ್ (Sudeep) ಬಗ್ಗೆ ಕೊಳ್ಳೇಗಾಲ (Kollegala) ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಪುತ್ರ ಲೋಕೇಶ್ (Lokesh) ಅವಹೇಳನಕಾರಿಯಾಗಿ (Contempt) ಆಡಿದ್ದಾರೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕಿಚ್ಚನ ಬಗ್ಗೆ ಲೋಕೇಶ್ ಹಗುರವಾಗಿ ಮಾತನಾಡಿದ್ದಕ್ಕಾಗಿ ಅವರ ಅಭಿಮಾನಿಗಳು ಬೇಸರಗೊಂಡಿದ್ದರು. ತಮ್ಮ ನೆಚ್ಚಿನ ನಟನ ಕುರಿತು ಕ್ಷಮೆ ಕೇಳದೇ ಇದ್ದರೆ ಪ್ರತಿಭಟನೆ ಮಾಡುವುದಾಗಿಯೂ ಎಚ್ಚರಿಸಿದ್ದರು.
Advertisement
ಈ ಎಚ್ಚರಿಕೆಯ ಹಿನ್ನೆಲೆಯಲ್ಲಿ ಲೋಕೇಶ್ ಮತ್ತೊಂದು ವಿಡಿಯೋ ಮಾಡಿ, ‘ಸುದೀಪ್ ಅವರು ನನಗೆ ಕರೆ ಮಾಡಿದ್ದರು. ನಮ್ಮವರು ಅವರೆಲ್ಲ ಕ್ಷಮೆ ಕೇಳಿ ಎಂದು ಹೇಳಿದ್ದರು. ಹಾಗಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ’ ಎನ್ನುವ ವಿಡಿಯೋ ಅಪ್ ಲೋಡ್ ಮಾಡಿದ್ದರು. ಅದು ಕೂಡ ವೈರಲ್ ಆಗಿತ್ತು. ಈ ವಿಡಿಯೋ ಕುರಿತಂತೆ ಸುದೀಪ್ ಬೇಸರ ವ್ಯಕ್ತ ಪಡಿಸಿದ್ದಾರೆ. ಆ ಕುರಿತು ಅವರು ಟ್ವೀಟ್ ಕೂಡ ಮಾಡಿದ್ದಾರೆ. ಇದನ್ನೂ ಓದಿ:ನೆಗೆಟಿವ್ ರೋಲ್ ಮಾಡಿದ್ದಕ್ಕೆ ಮದುವೆ ಸಂಬಂಧ ಕ್ಯಾನ್ಸಲ್- ನಟಿ ಅನಿಕಾ ಸಿಂಧ್ಯ
Advertisement
Advertisement
‘ನಾನು ಯಾರಿಗೂ ಕರೆ ಮಾಡಿಲ್ಲ. ಕ್ಷಮೆ ಕೇಳುವುದನ್ನು ನಾನು ಹೆಮ್ಮೆ ಪಡುವುದಿಲ್ಲ. ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇರುತ್ತದೆ ಎನ್ನುವುದು ಹಳೆಯ ಸಿದ್ಧಾಂತ. ನಾನು ಹೇಳಿಲ್ಲ’ ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಲೋಕೇಶ್ ತಮ್ಮ ಬಗ್ಗೆ ಸುಳ್ಳು ಹೇಳಿದ್ದಾರೆ ಎಂದು ಪರೋಕ್ಷವಾಗಿ ಅಭಿಮಾನಿಗಳಿಗೆ ಹೇಳಿದ್ದಾರೆ.
Advertisement
ಏನಿದು ವಿವಾದ?
ಬಿಜೆಪಿ ಪರವಾಗಿ ಪ್ರಚಾರ ಮಾಡಲು ಕಿಚ್ಚ ಕೊಳ್ಳೇಗಾಲಕ್ಕೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಾತನ್ನು ಶಾಸಕ ಎನ್. ಮಹೇಶ್ ಪದೇ ಪದೇ ಹೇಳುತ್ತಿದ್ದಾರಂತೆ. ಇವರಿಗೆ ಟಾಂಗ್ ಕೊಡುವುದಕ್ಕಾಗಿಯೇ ಲೋಕೇಶ್ ನಾಲಿಗೆ ಹರಿಬಿಟ್ಟಿದ್ದರು.
ಕಾಂಗ್ರೆಸ್ ಪಕ್ಷದ ಪ್ರಚಾರದ ವೇಳೆ ಮಾತನಾಡಿರುವ ಲೋಕೇಶ್, ‘ಎನ್.ಮಹೇಶ್ ಅವರು ಪದೇ ಪದೇ ಕಿಚ್ಚ ಸುದೀಪ್ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳುತ್ತಿದ್ದಾರೆ. ನಮ್ಮಲ್ಲಿ ಯಾರೇ ಬಂದರೂ ಊಟ ಮಾಡ್ಕೊಂಡು, ಜೇಬಿಗೆ ಹಾಕ್ಕೊಂಡು ಹೋಗ್ತಾ ಇರ್ತಾರೆ’ ಎಂದು ಮಾತನಾಡಿದ್ದಾರೆ. ಈ ಮಾತುಗಳು ಸುದೀಪ್ ಅಭಿಮಾನಿಗಳನ್ನು ಕೆರಳಿಸಿವೆ. ಹಾಗಾಗಿ ಲೋಕೇಶ್ ಕ್ಷಮೆ ಕೇಳಬೇಕು ಎಂದು ಅಭಿಮಾನಿಗಳು ಪಟ್ಟ ಹಿಡಿದಿದ್ದರು.
ಈ ಕುರಿತು ಮಾತನಾಡಿರುವ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸರಗೂರು ಶಿವು, ‘ಲೋಕೇಶ್ ಕೂಡಲೇ ಸುದೀಪ್ ಅವರಿಗೆ ಕ್ಷಮೆ ಕೇಳಬೇಕು. ಕೇಳದೇ ಇದ್ದರೆ, ಪ್ರತಿಭಟನೆ ಮಾಡಲಾಗುವುದು. ಇದು ಕೇವಲ ಸುದೀಪ್ ಅವರಿಗೆ ಮಾಡಿರುವ ಅವಮಾನವಲ್ಲ, ಅಭಿಮಾನಿಗಳಿಗೂ ಮಾಡಿರುವ ಅಪಮಾನ’ ಎಂದಿದ್ದರು.