ನಾವು ಸಿನಿಮಾ ಮಾಡೋದು ಬೇರೆಯವ್ರ ರೆಕಾರ್ಡ್‌ ಬ್ರೇಕ್ ಮಾಡೋದಕ್ಕೆ ಅಲ್ಲ: ಹಿಂಗ್ಯಾಕಂದ್ರು ಸುದೀಪ್‌?

Public TV
1 Min Read
vikranth rona 4 1

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ `ವಿಕ್ರಾಂತ್ ರೋಣ’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ರಿಲೀಸ್ ಕಡೆ ಹೆಚ್ಚಿನ ಗಮನ ಕೊಡ್ತಿದ್ದಾರೆ. ಇದೀಗ ಸಿನಿಮಾ ಕೆಲಸದ ಮಧ್ಯೆ ಬ್ಯಾಟ್ ಹಿಡಿದು ಗ್ರೌಂಡ್‌ನಲ್ಲಿ ಮಿಂಚ್ತಿದ್ದಾರೆ. ಈ ವೇಳೆ ರಿಲೀಸ್‌ಗೆ ರೆಡಿಯಿರೋ ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ACTOR SUDEEP

ಕಿಚ್ಚ ಸುದೀಪ್ ಅವರಿಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ. ಕ್ರಿಕೆಟ್ ಕಡೆ ಎಲ್ಲಿಲ್ಲದ ಆಸಕ್ತಿ. ಸಿನಿಮಾ ಕೆಲಸದ ಬಿಡುವಿನಲ್ಲಿ ಆಗಾಗ ಬ್ಯಾಟ್ ಹಿಡಿದು ಫೀಲ್ಡ್‌ಗೆ ಇಳಿಯುತ್ತಾರೆ. ಹಾಗೆಯೇ ಇಂದು ಮುಂಜಾನೆ ಸುದೀಪ್ ಕ್ರಿಕೆಟ್ ಆಡಲು ಮೈದಾನದಲ್ಲಿ ಹಾಜರಾಗಿದ್ದಾರೆ. ಪೊಲೀಸ್ ತಂಡದ ಜೊತೆ ಸ್ನೇಹಪೂರ್ವಕ ಪಂದ್ಯ ಆಡಿದ್ದಾರೆ. ಈ ವೇಳೆ ಜುಲೈ 28ಕ್ಕೆ ತೆರೆಗೆ ಅಬ್ಬರಿಸುತ್ತಿರುವ `ವಿಕ್ರಾಂತ್ ರೋಣ’ ಚಿತ್ರದ ಬಗ್ಗೆ ಮಾಧ್ಯಮದ ಜೊತೆ ಸುದೀಪ್ ಮಾತನಾಡಿದ್ದಾರೆ. ಇದನ್ನೂ ಓದಿ:ಪ್ರಾಣಿ, ಪಕ್ಷಿಗಳ ಜೊತೆ ರಾಕಿಭಾಯ್ ಕುಟುಂಬ: ವಿಡಿಯೋ ಹಂಚಿಕೊಂಡ ಯಶ್

SUDEEP 1

`ವಿಕ್ರಾಂತ್ ರೋಣ’ ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಸಿನಿಮಾವಾಗಿದೆ. ನನ್ನ ಫ್ಯಾನ್ಸ್ ಮಾಡ್ತಿರುವ `ರಾ ರಾ ರಕ್ಕಮ್ಮ’ ರೀಲ್ಸ್ ಬಹಳ ರೀಚ್ ಆಗ್ತಿದೆ. ನಾವು ಸಿನಿಮಾ ಮಾಡೋದು ಬೇರೆ ರೆಕಾರ್ಡ್ ಬ್ರೇಕ್ ಮಾಡೊವುದಕ್ಕೆ ಅಲ್ಲ. ಪ್ರೇಕ್ಷಕರ ಮನರಂಜನೆಗಾಗಿ, ʻಆರ್ ಆರ್ ಆರ್ʼ ಅವರ ಕಷ್ಟಕ್ಕೆ ಪ್ರತಿಫಲ ಸಿಕ್ಕಿದೆ. `ಕೆಜಿಎಫ್’ ಸಿನಿಮಾದ ಶ್ರಮಕ್ಕೆ ಸಿಗಬೇಕಾದ ಪ್ರತಿಫಲ ಸಿಕ್ಕಿದೆ. ಇದನ್ನೂ ಓದಿ:ಹೊಸ ಮನೆಯ ಹೊಸ್ತಿಲಲ್ಲಿ ಬಿಗ್‌ ಬಾಸ್‌ ಖ್ಯಾತಿಯ ಕವಿತಾ ಗೌಡ- ಚಂದನ್

vikranth rona 1 2ನಾವು ಒಳ್ಳೆಯ ಸಿನಿಮಾ ಮಾಡಲು ಪ್ರಯತ್ನ ಮಾಡ್ತೀವಿ, ಸಕ್ಸಸ್ ಎಷ್ಟು ಸಿಗ್ಬೇಕೊ ಅದು ಸಿಗುತ್ತೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ `ವಿಕ್ರಾಂತ್ ರೋಣ’ ರೆಡಿಯಾಗಿದ್ದು, ತೆರೆಗೆ ಬರಲಿದೆ. ಹಿಂದಿ, ಇಂಗ್ಲಿಷ್‌ನಲ್ಲಿ `ವಿಕ್ರಾಂತ್ ರೋಣ’ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗ್ತಿದೆ. ಸಲ್ಮಾನ್ ಖಾನ್ ಹಿಂದಿಯಲ್ಲಿ `ವಿಕ್ರಾಂತ್ ರೋಣ’ ಚಿತ್ರದ ವಿತರಣೆಯ ಜವಾಬ್ದಾರಿ ಹೊತ್ತಿದ್ದಾರೆ ಎಂದು ಸುದೀಪ್ ಮಾತನಾಡಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *