Connect with us

Bengaluru City

ಪೈಲ್ವಾನನ ಫಿಟ್‍ನೆಸ್ ಮಂತ್ರ ನಿಮ್ಮ ಮುಂದೆ

Published

on

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಯಾರು ಅಂತ ಕೇಳಿದ್ರೆ ಉತ್ತರ ಬರೋದು ಕಿಚ್ಚನ ಹೆಸರು. ಪ್ರತಿ ಪಾತ್ರದಲ್ಲೂ ವಿಭಿನ್ನತೆ, ಪ್ರತಿ ಚಿತ್ರದಲ್ಲೂ ಬಾಡಿ ಸ್ಟೈಲ್ ಬದಲಾವಣೆ, ಡಿಸೈನರಿ ಹೇರ್‍ ಸ್ಟೈಲ್ ಮಾಡಿಕೊಂಡು ಅಭಿನಯಿಸೋದರಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಸದಾ ಮುಂದಿರುತ್ತಾರೆ. ನಿರ್ದೇಶಕರ ಆಸಕ್ತಿಗೆ ತಕ್ಕಂತೆ ಅಭಿನಯವನ್ನಷ್ಟೇ ಅಲ್ಲದೇ ಸ್ಟೈಲನ್ನೂ ದಾನ ಮಾಡುವ ಕಲಾವಿದ ಕಿಚ್ಚ ಸುದೀಪ್.

ಸ್ಯಾಂಡಲ್‍ವುಡ್‍ನ ಟ್ರೆಂಡ್ ಸೆಟರ್ ಕಿಚ್ಚ ಸಿನಿಮಾದಿಂದ ಸಿನಿಮಾಕ್ಕೆ ಬದಲಾಗಿದ್ದನ್ನ ನೋಡಿದ್ದೇವೆ. ಆದರೆ ಸದ್ಯಕ್ಕೆ ಕಿಚ್ಚನಿರುವ ಲುಕ್‍ನ್ನ ಹಿಂದೆಂದೂ ನೀವು ನೋಡಿರೋಕೆ ಸಾಧ್ಯವೇ ಇಲ್ಲ ಬಿಡಿ. ಯಾಕಂದ್ರೆ ಆ ಪರಿಯಾಗಿ ಕಿಚ್ಚ ಸಣ್ಣಗಾಗಿದ್ದಾರೆ. 6 ಅಡಿ ಕಟೌಟು ಬಳುಕೋದನ್ನ ನೋಡಿ ಹೀಗಾಗಬೇಕಾದ್ರೆ ಅದಕ್ಕೆ ಬಲವಾದ ಕಾರಣ ಇರಲೇಬೇಕು ಅನ್ನೋದರ ಜಾಡು ಹುಡುಕಿಕೊಂಡು ಹೋದಾಗ ಪಬ್ಲಿಕ್ ಟಿವಿಗೆ ಉತ್ತರ ಸಿಕ್ಕಿದೆ.

ಸುದೀಪ್ ಮುಂದಿನ ಸಿನಿಮಾ ಯಾವುದು ಅನ್ನೋದಕ್ಕೆ ಉತ್ತರ ಕಣ್ಮುಂದೇ ಇದೆ. ಸತತ ಎರಡು ತಿಂಗಳಿಂದ ಕಿಚ್ಚ ‘ಪೈಲ್ವಾನ್’ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಹೈದ್ರಾಬಾದ್‍ನಲ್ಲಿ ಈಗಲೂ ಚಿತ್ರೀಕರಣ ನಡೆಯುತ್ತಿದೆ. ಪೈಲ್ವಾನ್ ಅಂದ ಮೇಲೆ ದಢೂತಿ ದೇಹ ಇರಬಹುದೇನೋ ಅಂದುಕೊಳ್ಳೋದು ಜನರೆಲ್ಲರ ಲೆಕ್ಕಾಚಾರ. ಆದ್ರೆ ಇಲ್ಲಿ ಕಿಚ್ಚ ಪೈಲ್ವಾನ್ ಆಗಿರ್ತಾರೆ ನಿಜ. ಆದರೆ ಸ್ಟೀರಾಯ್ಡ್ ದೇಹದ ಥರ ಕಿಚ್ಚ ಕಾಣಿಸಿಕೊಳ್ಳಲ್ಲ. ರಿಯಲ್ ಆಗಿ ದೇಹ ದಂಡಿಸಿ, ಗಟ್ಟಿ ದೇಹದ ಜೊತೆ ಗಟ್ಟಿ ಎಲುಬಿನ ಪ್ರದರ್ಶನ ಮಾಡಲಿದ್ದಾರಂತೆ. ರಿಯಲ್ಲಾಗೇ ಕಿಚ್ಚ ವರ್ಕೌಟ್ ಮಾಡಿದ್ದಾರೆ.

ಸುದೀಪ್‍ರನ್ನ ಸಿಕ್ಸ್ ಪ್ಯಾಕ್‍ನಲ್ಲಿ ನೋಡಬೇಕು ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ. ಕೊನೆಗೂ ಕಿಚ್ಚ ಜಿಮ್‍ಗೆ ಹೋಗುವಂತೆ ಮಾಡಿದ್ದು ಪೈಲ್ವಾನ್ ಸಿನಿಮಾ. ಕಟ್ಟುನಿಟ್ಟು ಆಹಾರ ಪದ್ಧತಿ, ಶಿಸ್ತುಬದ್ಧ ವರ್ಕೌಟ್, ಶೂಟಿಂಗ್ ನಡುವೆಯೂ ವರ್ಕೌಟ್ ಮಾಡುವಂತೆ ಮಾಡಿದ್ದು ಪೈಲ್ವಾನ್ ಸಿನಿಮಾ. ಹೀಗಾಗಿ ಕಿಚ್ಚ ಸುದೀಪ್ ತೆಳ್ಳಗಾಗಿದ್ದಾರೆ. ತೆಳ್ಳಗೆ ಇದ್ದ ಮಾತ್ರಕ್ಕೆ ದೇಹ ಫಿಟ್ ಇಲ್ಲ ಅಂದುಕೊಂಡ್ರೆ ತಪ್ಪಾಗುತ್ತದೆ. ಯಾಕಂದ್ರೆ ಹಾಲಿವುಡ್ ನಟರ ರೀತಿ ಕಿಚ್ಚ ರಿಯಲ್ ಬಾಡಿ ಬಿಲ್ಡ್ ಮಾಡಿ ಶೂಟಿಂಗ್‍ಗೆ ಹಾಜರಾಗುತ್ತಿದ್ದಾರೆ. ದೇಹವನ್ನ ಏರಿಸಿಬಿಡೋದು ಸುಲಭ. ಆದ್ರೆ ತೂಕ ಕಡಿಮೆ ಮಾಡಿಕೊಳ್ಳೋದು ಸುಲಭವಲ್ಲ. ಕೊನೆಗೂ ಕಿಚ್ಚ ಸುದೀಪ್ ಸಿನಿಮಾಕ್ಕಾಗಿ ತೊಟ್ಟ ಸಂಕಲ್ಪವನ್ನ ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ.

ಕೆಲ ದಿನಗಳಿಂದ ಕಿಚ್ಚ ಸುದೀಪ್ ಈ ಪರಿಯಾಗಿ ತೂಕ ಇಳಿಸಿಕೊಂಡ ಬಗೆಗೆ ಭಾರೀ ಚರ್ಚೆಯಾಗುತ್ತಿತ್ತು. ಇಷ್ಟರ ಮಟ್ಟಿಗೆ ಕಿಚ್ಚ ಸಣ್ಣ ಆಗೋಕೆ ಕಾರಣ ಏನಿರಬಹುದು ಅನ್ನೋದು ಎಲ್ಲರ ಪ್ರಶ್ನೆಯಾಗಿತ್ತು. ಸಾಮಾನ್ಯವಾಗಿ ಶೂಟಿಂಗ್‍ಗಾಗಿ ಬದಲಾದಾಗ ಕಿಚ್ಚ ಲುಕ್ ರಿವೀಲ್ ಆಗುತ್ತೆ ಅನ್ನುವ ಕಾರಣಕ್ಕೆ ಬಹಿರಂಗವಾಗಿ ಕಾಣಿಸಿಕೊಳ್ಳುವುದಿಲ್ಲ. ಆದ್ರೆ ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮದ ನಿರೂಪಣೆಯಲ್ಲಿ ಕಾಣಿಸಿಕೊಳ್ಳುವ ಅನಿವಾರ್ಯತೆ ಬಂದಾಗ ಕಿಚ್ಚನ ಲೀನ್ ಬಾಡಿ ದೇಹಕ್ಕೆ ಕನ್ನಡಿಗರು ದಿಗ್ಭ್ರಾಂತಿಗೊಂಡಿದ್ದರು. ಕೊನೆಗೂ ಅದೇ ವೇದಿಕೆಯಲ್ಲಿ ಕಿಚ್ಚ ಲೀನ್ ದೇಹದ ಗುಟ್ಟು ರಿವೀಲ್ ಮಾಡಿದ್ದಾರೆ.

ಪೈಲ್ವಾನ್ ಸಿನಿಮಾಗಾಗಿ ಕಿಚ್ಚ ಮಾಂಸಹಾರ ಊಟವನ್ನೂ ತ್ಯಜಿಸಿದ್ದಾರೆ ಅನ್ನುವ ಗುಟ್ಟು ರಿವೀಲ್ ಆಗಿದೆ. ಹೀಗಾಗಿ ಕಿಚ್ಚ ಇಷ್ಟೊಂದು ತೆಳ್ಳಗಾಗಿರೋದು. ಅಂದಹಾಗೆ ಪೈಲ್ವಾನ್ ಚಿತ್ರದಲ್ಲಿ ಕಿಚ್ಚ ಮೂರು ರೀತಿಯಲ್ಲಿ ಫೈಟ್ ಮಾಡಲಿದ್ದಾರೆ. ಒಂದು ಶೇಡ್‍ನಲ್ಲಿ ಪೈಲ್ವಾನ್ ಆಗಿ ಕಾಣಿಸ್ತಾರೆ. ಇನ್ನೊಂದ್ಕಡೆ ಮಾಮೂಲಿ ಆ್ಯಕ್ಷನ್ನೂ ಇರುತ್ತೆ. ಪೋಸ್ಟರ್‍ಗಳಲ್ಲಿ ಈಗಾಗಲೇ ರಿವೀಲ್ ಆದಂತೆ ಕಿಚ್ಚ ಬಾಕ್ಸರ್ ಆಗಿಯೂ ಕಾಣಿಸಿಕೊಳ್ಳಲಿದ್ದಾರೆ.

ಬಾಕ್ಸರ್ ಅವತಾರಕ್ಕೆ ಕಿಚ್ಚ ಹೀಗೆ ತೆಳ್ಳಗಿನ ಲುಕ್‍ನಲ್ಲಿ ಮಿಂಚಲಿದ್ದಾರೆ. ಪಕ್ಕಾ ಫಿಟ್ ದೇಹದಲ್ಲಿ ಕಿಚ್ಚ ಹಾಲಿವುಡ್ ಹೀರೋ ಥರ ಲೀನ್ ದೇಹದಲ್ಲಿ ಕಾಣಿಸಿಕೊಳ್ಳುತ್ತಾg. ಇದಕ್ಕಾಗಿ ಕಿಚ್ಚ ಯಾವುದೇ ಲಘು ಬಗೆಯ ಫಿಟ್ನೆಸ್ ಸೂತ್ರ ಅನುಸರಿಸದೇ ನೈಜವಾಗಿಯೇ ದೇಹವನ್ನ ಹುರಿದುಂಬಿಸಿಕೊಳ್ಳೋಕೆ ಪಣ ತೊಟ್ಟಿದ್ದಾರೆ. ಕೊನೆಗೂ ಚಿತ್ರಕ್ಕಾಗಿಯೇ ಕಿಚ್ಚ ಈ ರೀತಿ ಲುಕ್ ಬದಲಾಯಿಸಕೊಂಡಿರೋದು ಅನ್ನೋ ಸತ್ಯ ರಿವೀಲ್ ಆಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *