ನಿರ್ಮಾಪಕ ಎನ್.ಕುಮಾರ್ ಮತ್ತು ಕಿಚ್ಚ ಸುದೀಪ್ (Sudeep) ನಡುವಿನ ಸಂಧಾನ (Sandhana) ಸಭೆ ಇಂದು ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ನಿನ್ನೆ ಬರೋಬ್ಬರಿ ಏಳು ಗಂಟೆಗಳ ಕಾಲ ನಟ ರವಿಚಂದ್ರನ್ (Ravichandran) ಈ ಇಬ್ಬರನ್ನೂ ಕೂರಿಸಿಕೊಂಡು ಮಾತನಾಡಿದ್ದಾರೆ. ಮಧ್ಯಾಹ್ನ ಶುರುವಾದ ಸಭೆ ರಾತ್ರಿ 10.30ಕ್ಕೆ ಮುಗಿದಿದೆ ಎಂದು ಹೇಳಲಾಗುತ್ತಿದೆ. ಆದರೂ, ಒಮ್ಮತಕ್ಕೆ ಬಾರದೇ ಇರುವ ಕಾರಣಕ್ಕಾಗಿ ಇಂದು ಮತ್ತೆ ಸಭೆ ಇದೆ ಎನ್ನುವ ಮಾಹಿತಿ ಇತ್ತು.
Advertisement
ಇಂದು ಮತ್ತೆ ಸಭೆ ಸೇರುವುದು ಅನುಮಾನ ಎನ್ನಲಾಗುತ್ತಿದೆ. ಸುದೀಪ್ ಮತ್ತು ಕುಮಾರ್ ಆಡಿದ ಮಾತುಗಳನ್ನು ಕೇಳಿಸಿಕೊಂಡಿರುವ ರವಿಚಂದ್ರನ್, ಕೇವಲ ಮಾತುಗಳನ್ನಷ್ಟೇ ಕೇಳದ ಅದಕ್ಕಿರುವ ಪೂರಕ ಸಾಕ್ಷಿಯನ್ನೂ ಪರಿಶೀಲಿಸಿದ್ದಾರಂತೆ. ಇನ್ನೂ ಕೆಲವು ವಿಷಯಗಳಿಗೆ ಅಸ್ಪಷ್ಟ ಚಿತ್ರಣ ಸಿಕ್ಕಿರುವ ಕಾರಣದಿಂದಾಗಿ ಮತ್ತೆ ಸಭೆ ಮಾಡುವ ಮಾತುಗಳಾಗಿತ್ತು. ಅದರಂತೆ ನಾಳೆ ಸಂಧಾನದ ಸಭೆ ನಡೆಯಲಿದೆ.
Advertisement
Advertisement
ಸುದೀಪ್ ಮೇಲೆ ನಿರ್ಮಾಪಕ ಎನ್.ಕುಮಾರ್ (N. Kumar) ಮಾಡಿರುವ ಆರೋಪದ ಕುರಿತಂತೆ ನಿನ್ನೆಯಿಂದ ರವಿಚಂದ್ರನ್ ನಿವಾಸದಲ್ಲಿ ಸಂಧಾನ ಸಭೆ ನಡೆಯುತ್ತಿದೆ. ನಿನ್ನೆ ಈ ಸಭೆಗೆ ಶಿವರಾಜ್ ಕುಮಾರ್ ಆಗಮಿಸಲಿದ್ದಾರೆ ಎಂದು ಹೇಳಲಾಗಿತ್ತು. ತಡರಾತ್ರಿವರೆಗೂ ನಡೆದ ಸಭೆಗೆ ಶಿವಣ್ಣ ಹಾಜರಾಗಲಿಲ್ಲ. ಆದರೆ, ಈ ಕುರಿತಂತೆ ಶಿವರಾಜ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಕಾಶ್ಮೀರದಲ್ಲಿ ಸ್ಟೈಲ್ ಆಗಿ ಕಾಣಿಸಿಕೊಂಡ ಸಾನ್ಯ ಅಯ್ಯರ್
Advertisement
ಮಾಧ್ಯಮಗಳ ಜೊತೆ ಮಾತನಾಡಿದ ಶಿವರಾಜ್ ಕುಮಾರ್, ‘ರವಿದು ನಂದು ಬೇರೆ ಬೇರೆ ಮಾತಿಲ್ಲ. ಅವರು ಏನು ಹೇಳಿದ್ರೆ ಅದೇ ನನ್ನ ಮಾತು. ಎಲ್ಲಾ ಒಳ್ಳೆಯ ರೀತಿಯಲ್ಲಿ ಆಗ್ಬೇಕು ಅನ್ನೊದು ನನ್ನ ಆಸೆ. ಆದಷ್ಟು ಬೇಗ ಕುಮಾರ್-ಸುದೀಪ್ ನಡುವಿನ ಸಮಸ್ಯೆ ಬಗೆಹರಿಯಬೇಕು. ಸಿನಿಮಾ ಅನ್ನುವುದು ಒಂದು ಕುಟುಂಬ. ಸಮಸ್ಯೆ ಆಗೋದು ಸಹಜ. ಆದಷ್ಟು ಬೇಗ ಸರಿ ಹೋಗಲಿ’ ಎಂದಿದ್ದಾರೆ.
ಆದರೆ, ನಿನ್ನೆಯ ಸಂಧಾನ ಯಶಸ್ವಿ ಆಗಿಲ್ಲ ಎಂದು ಹೇಳಲಾಗುತ್ತಿದೆ. ಕಿಚ್ಚ ಸುದೀಪ್ ಮತ್ತು ಕುಮಾರ್ ಪ್ರತ್ಯೇಕವಾಗಿ ತಮ್ಮ ನೋವುಗಳನ್ನು ಹೇಳಿಕೊಂಡಿದ್ದು, ಬಹುಶಃ ನಾಳೆ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಅಂದಾಜಿಸಲಾಗಿದೆ.
Web Stories