ಕಾಲ ಬದಲಾದಂತೆ ಫ್ಯಾಷನ್ ಸಹ ಬದಲಾಗುತ್ತಲೇ ಇದೆ. ಕಾಲಕ್ಕೆ ಸರಿ ಹೊಂದುವ ಉಡುಪುಗಳನ್ನು ಖರೀದಿಸಿ ಧರಿಸುವ ಹುಡುಗರ ಜಾಯಮಾನವೂ ಬದಲಾಗಿದೆ. ಆಧುನಿಕತೆಗೆ ತೆರೆದುಕೊಂಡು ಯುವಕರು ಫ್ಯಾಷನ್ ವಸ್ತುಗಳನ್ನು ಧರಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
ಧರಿಸಿದ ಬಟ್ಟೆ, ತೊಡುವ ಆಭರಣ ತನ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಂದ ಹಾಗೆ ಇದು ತೋರಿಕೆಯ ಕಾಲ. ತೋಚಿದ್ದಕ್ಕೆ ರೂಪ ಕೊಡೋ ಕಾಲ. ಕಣ್ಣಿಗೆ ಕಂಡದ್ದು, ಹೊಸತು ಅನ್ನಿಸಿದ್ದನ್ನು ಕೊಂಡು ಧರಿಸುವ ಕಾಲ. ಹುಡುಗಿಯರನ್ನ ತಮ್ಮತ್ತ ಹೇಗೆ ಸೆಳೆಯಬೇಕು? ಎಂಬುದು ಈಗಿನ ಯುವಕರಿಗೆ ಗೊತ್ತು.
Advertisement
Advertisement
ಸೌಂದರ್ಯ ಹೇಗೇ ಇರಲಿ, ಆದರೂ ಬಾಹ್ಯ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ತಂದುಕೊಳ್ಳಲು ಸೌಂದರ್ಯ ಸಾಧನಗಳನ್ನು ಬಳಸಲೇಬೇಕು. ಅಂತದರಲ್ಲಿ ಹುಡುಗರೇನೂ ಕಡಿಮೆ ಇಲ್ಲ ಬಿಡಿ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಶಾಪಿಂಗ್ ಮಾಲ್‌ಗಳಲ್ಲಿ ಯುವಕರ ಕಲರವವೇ ಹೆಚ್ಚಿದೆ. ಅದರಲ್ಲೂ ಸಿಕ್ಸ್‌ಪ್ಯಾಕ್ ಹುಡುಗರು ಫಿಟ್ ಆಗಿ ಕೂರುವ ಟೀಶರ್ಟ್‌ಗಳನ್ನೇ ಹೆಚ್ಚು ಇಷ್ಟಪಡುತ್ತಾರೆ. ಅದರ ಮೇಲೆ ಸೂಟ್‌ಕೋಡ್ ಫ್ರೆಶ್ ಲುಕ್ ನೀಡುತ್ತದೆ.
Advertisement
ವೆಡ್ಡಿಂಗ್ ದಿನಗಳಲ್ಲಂತು ತರಹೇವಾರಿಯ ಸೂಟ್ಸ್ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಮದುವೆಯ ಸಮಾರಂಭಗಳು ಅಥವಾ ಹುಟ್ಟುಹಬ್ಬದ ಪಾರ್ಟಿಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಫ್ರೆಶ್ ಹಾಗೂ ಕಲರ್‌ಫುಲ್ ಲುಕ್ ನೀಡುತ್ತವೆ. ಅವುಗಳ ವಿವಿಧ ಶೈಲಿಗಳನ್ನಿಲ್ಲಿ ನೋಡಬಹದು. ಇದನ್ನೂ ಓದಿ: ಫ್ಯಾಷನ್‍ನಲ್ಲೂ ರಾಷ್ಟ್ರಪ್ರೇಮ ಅಭಿವ್ಯಕ್ತ
Advertisement
ಇಟಾಲಿಯನ್ ಸ್ಟೈಲ್: ಎರಡು ಪಾಕೆಟ್‌ಗಳಿರೋ ಈ ಸೂಟ್ ಸಾಂಪ್ರದಾಯಿಕ ಲುಕ್ ನೀಡುತ್ತದೆ. ತೆಳ್ಳಗಿದ್ದು ಎತ್ತರವಾಗಿರುವವರಿಗೆ ಇಟಾಲಿಯನ್ ಸೂಟ್ ಒಳ್ಳೆಯ ಲುಕ್ ನೀಡುತ್ತದೆ. ಆದರೆ ಕುಳ್ಳಗಿರುವವರಿಗೆ ಈ ಸೂಟ್ ವಿಚಿತ್ರವಾಗಿ ಕಾಣಿಸುತ್ತದೆ. ಇದನ್ನೂ ಓದಿ: ಮದುವೆ ಸಮಾರಂಭಗಳಿಗೆ ವಿಭಿನ್ನ ಶೈಲಿಯ ಪೇಟ-ಪರಂಪರೆಯ ಕಿರೀಟ
ಬ್ರಿಟಿಷ್ ಶೈಲಿಯ ಸೂಟ್: ಯುವಕರಿಗೆ ಎಲೆಗೆಂಟ್ ಲುಕ್ ನೀಡುವುದರ ಜೊತೆಗೆ ಫ್ಯಾಷನೇಬಲ್ ಆಗಿ ಕಾಣಿಸುತ್ತಾರೆ. ಸಾಮಾನ್ಯ ಕಾರ್ಯಕ್ರಮಗಳಿಗೆ ಸಂದರ್ಶನದ ವೇಳೆ ಮತ್ತು ಕಚೇರಿಗೆ ಧರಿಸಬಹುದು. ಇದು ಜಾಕೆಟ್ 3 ಬಟನ್, ಮಧ್ಯಮ ಗಾತ್ರದ ಲಾಪೆಲ್ಸ್ ಮತ್ತು 3 ಹೊರ ಪಾಕೆಟ್‌ಗಳನ್ನು ಹೊಂದಿರುತ್ತದೆ.
ಅಮೇರಿಕನ್ ಮಾದರಿಯ ಸೂಟ್: ಈ ಸೂಟ್ ಬಹುಮುಖ ಹೊಂದಿರುತ್ತದೆ. ಅಂದರೆ ಯಾವುದೇ ಸೆಟ್ಟಿಂಗ್‌ಗೂ ಹೊಂದಿಕೊಳ್ಳುತ್ತದೆ. ಯಾವುದೇ ಸಂದರ್ಭಗಳಿಗೆ ಬೇಕಾದರೂ ಪುರುಷರು ಇದನ್ನು ಧರಿಸಬಹುದು.
ಬ್ರೋಕೇಡ್ ಸೂಟ್: ಸ್ವಲ್ಪ ಗ್ಲಾಮರ್ ಆಗಿ ಕಾಣುವ ಈ ಸೂಟ್ ಭಾರತೀಯ ಕರಕುಶಲ ಶೈಲಿಯನ್ನೇ ಹೋಲುತ್ತದೆ. ಟೀ ಶರ್ಟ್ ಮೇಲೆ ಧರಿಸಿದರೂ ಹೊಂದಿಕೊಳ್ಳುತ್ತದೆ.
ವೆಲ್ವೆಟ್ ಸೂಟ್: ವಿಶಾಲ ಭುಜ ವುಳ್ಳವರಿಗೆ ಈ ಸೂಟ್ಸ್ ಪರ್ಫೆಕ್ಟ್, ಪುರುಷರಿಗೆ ಸಾಂಪ್ರದಾಯಿಕ ಸೂಟ್‌ಗಳ ಸ್ಫರ್ಶವನ್ನೇ ಇದು ನೀಡುತ್ತದೆ. ಜ್ಯುವೆಲ್ಸ್ನೊಂದಿಗೆ ಧರಿಸಿದರೆ, ಐಶಾರಾಮಿ ಲುಕ್ ನೀಡುತ್ತದೆ. ಜೊತೆಗೆ ಶೈನ್ ಹೆಚ್ಚಿಸುತ್ತದೆ. ಬಿಸಿಲಿನಲ್ಲಿ ಧರಿಸುವುದು ಸೂಕ್ತವಲ್ಲ.
ಕ್ಲಾಸಿಕ್ ಬಂದ್ ಗಲಾವ್: ಸಿಕ್ ಬಂಧ್‌ಗಲಾವು ಫಾರ್ಮಲ್ ವೇರ್ ಮತ್ತು ಭಾರತೀಯ ಶೈಲಿಯ ಧಿರಿಸುಗಳಿಗೆ ಹೊಂದಿಕೆಯಾಗುತ್ತದೆ. ಇದು ಹುಡುಗಿಯರನ್ನು ಸೆಳೆಯಲು ಹೆಚ್ಚು ಆಕರ್ಷಣೆ ನೀಡುತ್ತದೆ. ಸಿಟ್‌ಡೌನ್ ಡಿನ್ನರ್ ಪಾರ್ಟಿಗಳಲ್ಲಿ ಹೆಚ್ಚಿನ ಜನರು ಇದನ್ನು ಬಳಸುತ್ತಾರೆ.