FashionKarnatakaLatestMain Post

ಮದುವೆ ಸಮಾರಂಭಗಳಿಗೆ ವಿಭಿನ್ನ ಶೈಲಿಯ ಪೇಟ-ಪರಂಪರೆಯ ಕಿರೀಟ

ಪೇಟಾ-ಪರಂಪರೆಯ ಕಿರೀಟ, ಇದನ್ನು ಯಾರು ತಾನೇ ಅರಿಯರು ಹೇಳಿ? ಸಣ್ಣ-ಸಣ್ಣ ಕುಶಲ ಕಲೆಗಾರಿಕೆ, ರತ್ನ-ಖಚಿತದಂತೆ ಹೊಳೆಯುವ ಅಂಚಿನ ಅರಳುಗಳು, ರೇಷ್ಮೆ ಬಟ್ಟೆಯಿಂದ ತಯಾರಿಸಲಾದ ಮದುವೆಯ ಪೇಟಗಳು ಅಬ್ಬಬ್ಬಾ ಹೇಳಿದಷ್ಟೂ ವಿಶೇಷ.

Rajasthani Turban

ಇದು ಕೆಲವರಿಗೆ ಪರಂಪರೆಯ ಶ್ರೀಮಂತಿಕೆಯಾದರೆ, ಇನ್ನೂ ಕೆಲವರಿಗೆ ಸಂಸ್ಕೃತಿಯ ಒಂದು ಭಾಗ. ವಧು ಬಂಗಾರದ ಆಭರಣಗಳಿಂದ ತನ್ನನ್ನು ಅಲಂಕರಿಸಿಕೊಳ್ಳುವಂತೆ, ವರನೂ ವಿವಿಧ ಶೈಲಿಯ ಪೇಟಗಳನ್ನು ಧರಿಸಿ ಅಲಂಕಾರ ಮಾಡಿಕೊಳ್ಳುತ್ತಾರೆ. ಆಧುನಿಕತೆಯಲ್ಲಿ ಟ್ರೆಂಡ್ ಬದಲಾದಂತೆ ಪೇಟ ಧರಿಸುವುದೇ ಒಂದು ಹೆಗ್ಗಳಿಕೆಯಾಗಿದೆ. ಮಾರುಕಟ್ಟೆಗಳಲ್ಲಿ, ವಿವಿಧ ಮೊಹಲ್ಲಾಗಳಲ್ಲಿಯೂ ತರಹೇವಾರಿ ಪೇಟಗಳು ಲಗ್ಗೆಯಿಟ್ಟಿದ್ದು, ಯುವಕರು, ಪುರುಷರು ತಮ್ಮಿಷ್ಟದ ಪೇಟಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಮಳಿಗೆದಾರರೂ ವಿಭಿನ್ನ ವಿನ್ಯಾಸಗಳನ್ನು ಪರಿಚಯಿಸುತ್ತಿದ್ದಾರೆ. ಅವುಗಳ ವಿವಿಧ ಶೈಲಿಗಳನ್ನಿಲ್ಲಿ ನೋಡಬಹುದು. ಇದನ್ನೂ ಓದಿ: ಫ್ಯಾಷನ್‍ನಲ್ಲೂ ರಾಷ್ಟ್ರಪ್ರೇಮ ಅಭಿವ್ಯಕ್ತ

arwari Turban 01

1. ರಾಜಸ್ಥಾನಿ ಪೇಟ
ವಿವಾಹ ಸಮಾರಂಭಗಳಲ್ಲಿ ಬಳಸುವ ಈ ರಾಜಸ್ಥಾನಿ ಪೇಟವು ಇಂದಿಗೂ ಟ್ರೆಂಡ್ ಆಗಿ ಉಳಿದಿದೆ. ವರ ಮಾತ್ರವಲ್ಲದೇ ಇತರ ಪುರುಷರೂ ಧರಿಸುವುದರಿಂದ ಇಂದಿಗೂ ಬೇಡಿಕೆ ಹೆಚ್ಚಾಗಿಯೇ ಇದೆ. ಇಲ್ಲಿನ ಪ್ರತಿಯೊಂದು ಪ್ರದೇಶದಲ್ಲೂ ವಿಭಿನ್ನ ರೀತಿಯ ಪೇಟಗಳನ್ನು ಜನರು ಧರಿಸುತ್ತಾರೆ. ಪ್ರತಿ ಪೇಟಗಳೂ ಆ ಪ್ರದೇಶದ ಸಾಂಸ್ಕೃತಿಕ ಗುರುತನ್ನು ಪ್ರತಿನಿಧಿಸುತ್ತವೆ. ಉಡುಪಿಗೆ ತಕ್ಕ ಶೈಲಿಯನ್ನು ಆಯ್ಕೆ ಮಾಡಿಕೊಂಡರೆ ಒಳಿತು.

Mewari turban

2. ಮಾರ್ವಾಡಿ ಪೇಟ
ರಾಜಸ್ಥಾನ ಮೂಲದ ಮಾರ್ವಾರ್ ಪ್ರದೇಶದಿಂದ ಬಂದಿರುವ ಈ ಪೇಟ ಯುವ ಸಮೂಹದ ಟ್ರೆಂಡ್ ಆಗಿದೆ. ಸಹಜವಾಗಿದ್ದರೂ ವರ್ಣರಂಜಿತವಾಗಿ ಕಾಣುವ ಈ ಪೇಟವನ್ನು ಸಾರ್ಪೇಚ್ ಎಂಬ ಆಭರಣದ ಅಲಂಕಾರಿಕ ಸ್ಪರ್ಶವನ್ನು ಹೊಂದಿರುತ್ತದೆ. ಬಂಧೇಜ್ ಬಟ್ಟೆಯಿಂದ ತಯಾರಿಸುವ ಈ ಪೇಟವನ್ನು ಹೂವಿನ ಮುದ್ರಣ ಶೈಲಿಯಿಂದಲೂ ಸಿಂಗರಿಸಬಹುದು. ನಿಮ್ಮ ಮದುವೆಯ ಸಜ್ಜು ಸರಳವಾಗಿದ್ದರೆ, ಸಾಧಾರಣ ಶೈಲಿಯ ಪೇಟ ಧರಿಸಿದರೂ ಸಾಕು. ಇದನ್ನೂ ಓದಿ: ಸೂಪರ್ ಹಾಟ್ ದೀಪಿಕಾ ಪಡುಕೋಣೆ ತೊಟ್ಟ ಡ್ರೆಸ್ ಬೆಲೆ ಎಷ್ಟು ಗೊತ್ತಾ?

3. ಮೇವಾರಿ ಪೇಟ
ಮೇವಾರಿ ಮದುವೆ ಪೇಟವು ಹೆಚ್ಚು ವಿಸ್ತಾರವಾಗಿ ಇರುವುದಿಲ್ಲ. ನೀವು(ವರ) ವಧುವಿಗಿಂತಲೂ ಎತ್ತರವಾಗಿದ್ದಲ್ಲಿ ಈ ವಿಧಾನದ ಪೇಟದ ಆಯ್ಕೆಯು ಉತ್ತಮವಾಗಿರಲಿದೆ. ಸಾಮಾನ್ಯ ತಿರುವುಗಳೊಂದಿಗೆ ತೆಳು ಪದರಗಳನ್ನು ಇದು ಹೊಂದಿರಲಿದೆ. ನಿಮ್ಮ ಉಡುಪಿನ ಆಯ್ಕೆಗೆ ತಕ್ಕಂತೆ ಈ ಪೇಟವನ್ನು ಸಜ್ಜುಗೊಳಿಸಲಾಗುತ್ತದೆ. ಇದರಲ್ಲಿರುವ ವರ್ಣರಂಜಿತ ಸಣ್ಣಸಣ್ಣ ಅರಳು ತಲೆ ಮೇಲ್ಭಾಗವನ್ನು ರತ್ನಕಚಿತ ಕಿರೀಟದಂತೆ ಆಕರ್ಷಿಸಲು ಸಹಕರಿಸುತ್ತದೆ.

Royal Turban 2

4. ರಾಯಲ್ ಪೇಟ
ರಾಜಮನೆತನದಿಂದ ಪ್ರೇರಿತವಾದ ಈ ರಾಯಲ್ ವೆಡ್ಡಿಂಗ್ ಟರ್ಬನ್‌ಗಳು ಸಾಮಾನ್ಯವಾಗಿ ಉದ್ದವಾದ ಬಾಲಗಳನ್ನು ಹೊಂದಿರುತ್ತವೆ. ಬಂಧಗಾಲಾ ಮತ್ತು ಜೋಧಪುರಿ ಪ್ಯಾಂಟ್‌ಗಳ ಲುಕ್‌ಗೆ ಸೂಟ್‌ ಆಗುತ್ತದೆ. ವಜ್ರದ ಅರಳಿನ ಆಭರಣವು ಇದಕ್ಕೆ ಮತ್ತಷ್ಟು ಹೊಳಪು ನೀಡುತ್ತದೆ. ತೀರಾ ಅದ್ಧೂರಿಯಾಗಿ ನಡೆಯುವ ವಿವಾಹ ಮಹೋತ್ಸವಗಳಲ್ಲಿ ಹೆಚ್ಚಿನ ಜನರು ಇದನ್ನು ಧರಿಸುತ್ತಾರೆ.

Marathi Turban 2

5. ಮರಾಠಿ ಪೇಟ
ಮರಾಠಿ ಪೇಟ ನಂಬಲಾಗದಷ್ಟು ಗರಿಗರಿಯಾಗಿದೆ. ಈ ಪೇಟವನ್ನು ಎಷ್ಟು ಅಚ್ಚುಕಟ್ಟಾಗಿ ಹೊಂದಿಸಲಾಗಿದೆ ಎಂದರೆ ಅದು ಬಟ್ಟೆಯೇ ಅಥವಾ ಅಚ್ಚು ಮಾಡಿದ ಶಿಲ್ಪವೇ ಎನ್ನುವಷ್ಟು ಅಚ್ಚರಿ ಮೂಡಿಸುತ್ತದೆ.

MYRURU TURBAN

6. ಮೈಸೂರು ಪೇಟ
ಇದು ಹಿಂದೆ ಮೈಸೂರು ಮಹಾಸಂಸ್ಥಾನದ ರಾಜರು ಧರಿಸುತ್ತಿದ್ದ ಸಾಂಪ್ರದಾಯಿಕ ಉಡುಪು. ಮೈಸೂರು ಪೇಟ ಪರಂಪರೆ ಮತ್ತು ಸಾಂಸ್ಕೃತಿಕ ಪೂರ್ವವರ್ತಿಗಳ ಸಂಕೇತವಾಗಿ ಇಂದಿಗೂ ಉಳಿಸಿಕೊಳ್ಳಲಾಗಿದೆ. ಮಹಾರಾಜರ ಭವ್ಯ ಪೋಷಾಕಿನಲ್ಲಿ ಅತಿ ಹೆಚ್ಚು ಘನತೆಯನ್ನು ಪಡೆದಿರುವುದು ಝರಿ ಪೇಟ. ಸಣ್ಣ ಹಾಗೂ ಕುಶಲ ಕಲೆಗಾರಿಕೆ, ಬಣ್ಣ ಬಣ್ಣದ ಅಂಚಿನ ರೇಷ್ಮೆಯ ಬಟ್ಟೆಯಿಂದ ತಯಾರಿಸಲಾದ ಮುಂಡಾಸನ್ನು ಮೈಸೂರು ಪೇಟ ಎಂದು ಕರೆಯಲಾಗುತ್ತದೆ. ಅರಮನೆಯ ರಾಜ ಪರಿವಾರ, ದಿವಾನರು ಹಿರಿಯ ಅಧಿಕಾರಿಗಳು ಈ ಪೇಟವನ್ನು ಧರಿಸುತ್ತಿದ್ದರು. ಇಂದಿಗೂ ಮೈಸೂರಿನ ಒಡೆಯರ್ ವಂಶಸ್ಥರು ಇದನ್ನು ಬಳಸುತ್ತಾರೆ. ಮದುವೆ ಸಮಾರಂಭಗಳಿಗೆ ಮಾತ್ರವಲ್ಲದೆ ಅಭಿನಂದನಾ ಕಾರ್ಯಕ್ರಮಗಳು, ಗಣ್ಯರಿಗೆ ಸ್ವಾಗತ ಕೋರುವ ಸಮಾರಂಭದಲ್ಲಿ ಇದನ್ನು ಬಳಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ದಲೈಲಾಮ, ರಾಹುಲ್‌ಗಾಂಧಿ, ರಾಷ್ಟ್ರಪತಿ ಸೇರಿದಂತೆ ಹಲವು ಗಣ್ಯರು ಹಲವು ಕಾರ್ಯಕ್ರಮಗಳಲ್ಲಿ ಈ ಪೇಟವನ್ನು ಧರಿಸಿದ್ದಾರೆ.

Leave a Reply

Your email address will not be published.

Back to top button