ಲಕ್ನೋ: ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರೊಬ್ಬರು(Principal) ವಿದ್ಯಾರ್ಥಿಗಳಿಂದ(Student) ಶೌಚಾಲಯವನ್ನು(Toilet) ಸ್ವಚ್ಛಗೊಳಿಸಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋವು ಉತ್ತರ ಪ್ರದೇಶದ(UP) ಬಲ್ಲಿಯಾದಲ್ಲಿ ನಡೆದಿದೆ. ಈ ವಿಡಿಯೋದಲ್ಲಿ, ಸೋಹಾನ್ ಬ್ಲಾಕ್‍ನ ಪಿಪ್ರಾ ಗ್ರಾಮದ ಶಾಲೆಯ ಮುಖ್ಯ ಶಿಕ್ಷಕ ಅಲ್ಲೇ ನಿಂತು ವಿದ್ಯಾರ್ಥಿಗಳಿಂದ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದಾರೆ.
Advertisement
हमारे यहाँ प्राइमरी स्कूल में बच्चो को पढ़ाई के साथ साथ शौचालय साफ करना सिखाया जाता है । यकीन न हो तो बलिया जिले का ये वीडियो देखें ! pic.twitter.com/1DMajDRtfB
— MANISH PANDEY (@ManishPandeyLKW) September 7, 2022
Advertisement
ಅಷ್ಟೇ ಅಲ್ಲದೇ ಶೌಚಾಲಯವನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ನಾನು ಶೌಚಾಲಯಕ್ಕೆ ಬೀಗ ಹಾಕುತ್ತೇನೆ. ನಂತರ ನೀವು ಮಲವಿಸರ್ಜನೆಗೆ ಮನೆಗೆ ಹೋಗಬೇಕಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕರು ಬೆದರಿಕೆ ಹಾಕಿದ್ದಾರೆ. ವೀಡಿಯೋದಲ್ಲಿ ಅಪ್ರಾಪ್ತ ವಿದ್ಯಾರ್ಥಿಯೊಬ್ಬ ಶೌಚಾಲಯವನ್ನು ಸ್ವಚ್ಛಗೊಳಿಸಲು ಬಕೆಟ್ ತುಂಬಿದ ನೀರನ್ನು ತರುತ್ತಿರುವುದನ್ನು ಕಾಣಬಹುದು. ಇದನ್ನೂ ಓದಿ: ಐಟಿ ಕಂಪನಿ ಉದ್ಯೋಗಿ ಅನುಮಾನಾಸ್ಪದ ರೀತಿಯಲ್ಲಿ ಆತ್ಮಹತ್ಯೆ
Advertisement
Advertisement
ವೀಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪ್ರದೇಶದ ಬ್ಲಾಕ್ ಶಿಕ್ಷಣಾಧಿಕಾರಿ ಅಖಿಲೇಶ್ ಕುಮಾರ್ ಝಾ ಮಾತನಾಡಿ, ವೀಡಿಯೋದಲ್ಲಿನ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುವುದು. ಈ ರೀತಿ ಮುಖ್ಯ ಶಿಕ್ಷಕರು ಮಾಡಿದ್ದರೇ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಐಟಿ ಕಂಪನಿ ಉದ್ಯೋಗಿ ಅನುಮಾನಾಸ್ಪದ ರೀತಿಯಲ್ಲಿ ಆತ್ಮಹತ್ಯೆ