Bengaluru CityDistrictsKarnatakaLatestMain Post

ಐಟಿ ಕಂಪನಿ ಉದ್ಯೋಗಿ ಅನುಮಾನಾಸ್ಪದ ರೀತಿಯಲ್ಲಿ ಆತ್ಮಹತ್ಯೆ

ಬೆಂಗಳೂರು/ನೆಲಮಂಗಲ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ (ITCompany) ಕೆಲಸ ಮಾಡುತ್ತಿದ್ದ ಉದ್ಯೋಗಿ ಅನುಮಾನಾಸ್ಪದ ರೀತಿಯಲ್ಲಿ ರೈಲಿಗೆ ಸಿಕ್ಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ(Nelamangala) ತಾಲೂಕಿನ ಬೈರನಾಯಕನಹಳ್ಳಿಯಲ್ಲಿ ಘಟನೆ ನಡೆದಿದ್ದು, ಇಡೀ ಘಟನೆ ನೋಡಿದಾಗ ಬೈಕ್ ರೈಲ್ವೇ(Train) ಹಳಿ ಬಳಿ ನಿಲ್ಲಿಸಿ ರೈಲಿಗೆ ಸಿಲುಕಿರುವ ಶಂಕೆ ಕಂಡುಬಂದಿದೆ. ಮೃತ ಯುವಕನನ್ನು ಚಿಕ್ಕಮಗಳೂರು(Chikkamagaluru) ಮೂಲದ ಸಾಗರ್.ಟಿ ಎಂದು ಗುರುತಿಸಲಾಗಿದೆ.  ಇದನ್ನೂ ಓದಿ: ಬೆಂಗಳೂರು ವಾಸಕ್ಕೆ ಯೋಗ್ಯವಲ್ಲ ಎನ್ನುವವರು ಬೆಂಗಳೂರಿಗೆ ಬರಬೇಡಿ: ಮುನಿರತ್ನ

ಚಿಕ್ಕಮಂಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಸಂಸೆ ಗ್ರಾಮದ ಯುವಕ ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಇನ್ನೂ ತ್ಯಾಮಗೊಂಡ್ಲು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಯಶವಂತಪುರ (Yashwanthpura) ರೈಲ್ವೆ ಪೊಲೀಸರಿಗೆ ಮಾಹಿತಿ ರವಾನೆ ಮಾಡಿದ್ದಾರೆ. ಹೆಚ್ಚಿನ ತನಿಖೆ ನಂತರ ಇನ್ನಷ್ಟೂ ಮಾಹಿತಿ ತಿಳಿಯಲಿದೆ. ಇದನ್ನೂ ಓದಿ: ನಿತ್ಯ ಎಣ್ಣೆ ಹಾಕಿ ಪಾಠ – ಮದ್ಯದೊಂದಿಗೆ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿಕ್ಷಕಿ

Live Tv

Leave a Reply

Your email address will not be published.

Back to top button