ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಐಶ್ವರ್ಯ ಅತ್ಯಂತ ಕಷ್ಟಕರವಾದ ಸ್ಟ್ರಿಂಗ್ ಆರ್ಟ್ ಎಂಬ ಅಪರೂಪದ ಕಲೆಯಲ್ಲಿ ಸುಮಾರು ಆರು ಕಿ.ಮೀ. ನಷ್ಟು ಅಂತರದ ದಾರದಲ್ಲಿ ಆಕರ್ಷಕ ಹಿಂದೂ ಮಹಾ ಗಣಪತಿಯನ್ನು ರಚಿಸಿದ್ದಾರೆ.
Advertisement
ಚಿತ್ರದುರ್ಗದ ಜಯಲಕ್ಷ್ಮಿ ಬಡಾವಣೆಯ ಯುವತಿ ಐಶ್ವರ್ಯಾ ಎಸ್‍ಜೆಎಂಐಟಿ ಕಾಲೇಜಿನಲ್ಲಿ ಪದವಿ ಮುಗಿಸಿದ ಬಳಿಕ ಬೆಂಗಳೂರಿನಲ್ಲಿ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಮಾಡುತ್ತಿದ್ದಾರೆ. ಇದರ ಜೊತೆಯಲ್ಲಿ ಸ್ಟ್ರಿಂಗ್ ಆರ್ಟ್ ಕಡೆ ಒಲವು ಮೂಡಿದೆ. ಹೀಗಾಗಿ ಯಾರ ಬಳಿಯೂ ತರಬೇತಿ ಪಡೆಯದೇ ಸ್ಟ್ರಿಂಗ್ ಆರ್ಟ್ ಕಲಿತಿದ್ದಾರೆ. ದೇಶ, ವಿದೇಶಗಳಲ್ಲಿ ಅತ್ಯಂತ ಪ್ರಸಿದ್ಧವಾದ ಈ ಕಲೆಯನ್ನು ಒಂದು ವರ್ಷದಿಂದ ಪ್ರಯತ್ನಿಸಿ, ಯುಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳನೆರವಿನಿಂದ ಕಲಿತಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಮ್ಯೂಸಿಕ್‍ಗೆ ಏಳು ವಸಂತಗಳ ಸಂಭ್ರಮ
Advertisement
Advertisement
ಮೊದಲ ಚಿತ್ರವಾಗಿ ನಟ ಡಾ.ವಿಷ್ಣುವರ್ಧನ್ ಅವರ ಭಾವಚಿತ್ರವನ್ನು ಬರೋಬ್ಬರಿ 5 ಕಿ.ಮೀ ಉದ್ದದ ದಾರದಲ್ಲಿ ರಚಿಸಿದ್ರು. ಅದನ್ನು ನಟ ಅನಿರುದ್ಧ್ ಅವರ ಮೂಲಕ ಅವರ ಕುಟುಂಬಕ್ಕೆ ತಲುಪಿಸುವ ವಿಶ್ವಾಸದಲ್ಲಿದ್ದಾರೆ. ಅಲ್ಲದೆ ದಾರದಲ್ಲಿ ರಚಿಸಿದ ವಿಷ್ಣು ಅವರ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ದೇಶ,ವಿದೇಶದ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತಗಿದೆ. ಈ ಬೆನ್ನಲ್ಲೇ ಇದೀಗ ಕೋಟೆನಾಡಿನ ಹಿಂದೂ ಮಹಾಗಣಪತಿಯನ್ನು ಸುಮಾರು ಆರು ಕಿಮೀ ಉದ್ದದ ದಾರದಲ್ಲಿ ರಚಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ತುಮಕೂರು ಜಿಲ್ಲಾಧ್ಯಕ್ಷ ಸುರೇಶ್ ಗೌಡ ರಾಜೀನಾಮೆ- ಕಾಂಗ್ರೆಸ್ ಸೇರಲು ಪ್ಲ್ಯಾನ್?
Advertisement
ಇನ್ನು ಈ ಕಲಾಕೃತಿಯನ್ನು ಒಂದು ಬಿಳಿ ಕಾರ್ಡ್ ಬೋರ್ಡ್ ಮೇಲೆ ಸುತ್ತಲೂ ಮೊಳೆ ಹೊಡೆದು, ಒಂದೆಡೆಯಿಂದ ಮತ್ತೊಂದೆಡೆ ದಾರವನ್ನು ಎಳೆಯುತ್ತಲೇ ರಚಿಸುತ್ತಾರೆ. ಅತ್ಯಂತ ಕಷ್ಟದ ಕಲೆಯಾಗಿದ್ದು, ಗಣಪತಿ ಚಿತ್ರವನ್ನು ಸುಮಾರು 17 ಗಂಟೆಗಳ ಕಾಲ ನಿರಂತರವಾಗಿ ಶ್ರಮ ವಹಿಸಿ, ರಚಿಸಿದ್ದಾರೆ. ಹೀಗಾಗಿ ಇಂತಹ ಅದ್ಭುತ ಸ್ಟ್ರಿಂಗ್ ಆರ್ಟ್ ಕಲೆ ಕಲಿತಿರುವ ತನ್ನ ಅಣ್ಣನ ಮಗಳ ಸಾಧನೆ ಬಗ್ಗೆ ಐಶ್ವರ್ಯ ಅವರ ಚಿಕ್ಕಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಗಣಪತಿ ವೀಕ್ಷಣೆಗೆ ಬಂದಿರುವ ಭಕ್ತರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.