ರಾಯಚೂರು: ನಗರದ ರಿಮ್ಸ್ (RIMS) ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆ ಈಗ ಬೀದಿನಾಯಿಗಳ ನೆಚ್ಚಿನ ತಾಣವಾಗಿದೆ.
Advertisement
ಆಸ್ಪತ್ರೆಯ ನಾಲ್ಕನೇ ಅಂತಸ್ತಿನವರೆಗೂ ಯಾರ ಭಯವಿಲ್ಲದೇ ನಾಯಿಗಳು ಓಡಾಡಿಕೊಂಡಿವೆ. ನವಜಾತ ಶಿಶು ಕೊಠಡಿ, ಬಾಣಂತಿಯರ ಲೇಬರ್ ರೂಂ ಬಳಿಯೇ ನಾಯಿಗಳು ಮಲಗುವುದರಿಂದ ಆಸ್ಪತ್ರೆಗೆ ಬರುವವರಲ್ಲಿ ಆತಂಕ ಹೆಚ್ಚಾಗಿದೆ. ರಾತ್ರಿಯಾದರೆ ರೋಗಿಗಳ ಹಾಸಿಗೆಯ ಮೇಲೆ ಬಂದು ನಾಯಿಗಳು ಮಲಗುತ್ತಿವೆ ಅಂತ ರೋಗಿಗಳ ಕಡೆಯವರು ಆರೋಪಿಸಿದ್ದಾರೆ.
Advertisement
Advertisement
ನವಜಾತ ಶಿಶುಗಳಿಗೆ ಅಪಾಯ ಮಾಡಿದರೆ, ರಾತ್ರಿ ವೇಳೆ ಹೊತ್ತೊಯ್ದರೆ ಜವಾಬ್ದಾರಿ ಯಾರು? ಈ ಬಗ್ಗೆ ಸಾಕಷ್ಟು ಬಾರಿ ರಿಮ್ಸ್ ಆಡಳಿತ ಮಂಡಳಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ಬಾಣಂತಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶ್ರದ್ಧಾರಂಥ ಹೆಣ್ಣುಮಕ್ಕಳು ಒಳ್ಳೆ ಹುಡುಗರನ್ನ ಆಯ್ಕೆ ಮಾಡ್ಕೋಬೇಕು; ಅಫ್ತಾಬ್‌ನ ನೇಣಿಗೆ ಹಾಕಿ – ರಾವತ್
Advertisement
ಶ್ವಾನಗಳು ನೇರವಾಗಿ ಆಸ್ಪತ್ರೆ ಒಳಗಡೆ ಬಂದು ಅಲ್ಲಲ್ಲಿ ಬೀಸಾಡಿರುವ ವಸ್ತುಗಳಲ್ಲಿ ಆಹಾರ ಹುಡುಕಾಟ ನಡೆಸುತ್ತವೆ. ಕೊನೆಗೆ ಅಲ್ಲಿಯೇ ಮಲಗುತ್ತಿವೆ. ಒಂದು ವೇಳೆ ನಾಯಿ ಕಚ್ಚಿದರೆ ಕೊಡಲು ಔಷಧಿಯ ಕೊರತೆಯೂ ಇದೆ. ಪರಿಸ್ಥಿತಿ ಹೀಗಿದ್ದರೂ ರಿಮ್ಸ್‌ನ ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರು – ಅಂಗಡಿಯಲ್ಲಿದ್ದ ವೃದ್ಧೆಯ ಚಿನ್ನದ ಸರ ಕಿತ್ತು ಎಸ್ಕೇಪ್