ಬೆಂಗಳೂರು: ನಗರದ ಮೋಸ್ಟ್ ಫೇವರಿಟ್ ಹಾಟ್ ಸ್ಪಾಟ್ ಹಲಸೂರು ಕೆರೆ ಈಗ ಗಬ್ಬೆದ್ದು ಹೋಗಿದೆ. ಚಂದದ ಪ್ರವಾಸಿ ಸ್ಥಳವಾಗಿದ್ದ ಈ ಕೆರೆಗೆ ಈಗ ಕಾಲಿಟ್ಟರೆ ಸಾಕು. ಬೇಡಪ್ಪ ಇದರ ಸಹವಾಸ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
Advertisement
ಹಲಸೂರು ಕೆರೆ ಬೆಂಗಳೂರಿಗರ ಪಾಲಿಗೆ ರಿಲ್ಯಾಕ್ಸ್ ನೀಡುವ ನೆಚ್ಚಿನ ತಾಣ. ಪ್ರವಾಸಿಗರ ಪಾಲಿಗೆ ಸದಾ ಸೆಳೆಯುವ ಪ್ರವಾಸಿ ಜಾಗ. ಕಣ್ಣು ಹಾಯಿಸಿದಷ್ಟು ಹಸಿರಿನ ಮಧ್ಯೆ ಕೆರೆಯ ವಿಹಂಗಮ ನೋಟ. ಆದರೆ ಈಗ ಹಲಸೂರು ಕೆರೆ ದಿನದಿಂದ ದಿನಕ್ಕೆ ಗಬ್ಬೆದ್ದು ಹೋಗುತ್ತಿದೆ. ರಮಣೀಯವಾಗಿದ್ದ ಕೆರೆಯಲ್ಲಿ ಈಗ ಜಲಚರಗಳಿಗಿಂತಲೂರ ಹೆಚ್ಚು ಪ್ಲ್ಯಾಸ್ಟಿಕ್, ಕಸ, ತ್ಯಾಜ್ಯಗಳೇ ಹೆಚ್ಚಾಗಿದೆ.
Advertisement
Advertisement
ಇನ್ನೊಂದು ಕಡೆಯಲ್ಲಿ ರಾಜಕಾಲುವೆಯ ನೀರು ಕೂಡ ಮಿಕ್ಸ್ ಆಗಿ ಇಡೀ ಕೆರೆಯ ನೀರು ಕಲುಷಿತಗೊಂಡಿದೆ. ಈ ಕೆರೆಯಲ್ಲಿ ಕೋಟಿಗಟ್ಟಲೇ ಖರ್ಚು ಮಾಡಿ ಖಾಸಗಿ ಸಂಸ್ಥೆಯೊಂದು ಅತ್ಯಾಧುನಿಕ ಸೋಲರ್ ಪ್ಯಾನಲ್ ಕೂಡ ಹಾಕಲಾಗಿತ್ತು. ಆದ್ರೆ ಇದು ಕೂಡ ಕಸದಿಂದ ತುಂಬಿ ಹೋಗಿದ್ದು, ಅದು ಕೂಡ ಈಗ ಕೆಟ್ಟು ನಿಂತಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಒಕ್ಕಲಿಗ ಸಮರ – ಜಮೀರ್ ವಿರುದ್ಧ ಆಪ್ತ ಚೆಲುವರಾಯಸ್ವಾಮಿ ಸಂಧಾನ, ಸಿದ್ದು ಸೈಲೆಂಟ್
Advertisement
ಒಟ್ಟಿನಲ್ಲಿ ಬಿಬಿಎಂಪಿಂಯ ಕೆರೆ ಸಂರಕ್ಷಣಾ ಪ್ರಾಧಿಕಾರ ಹಲಸೂರು ಕೆರೆಯನ್ನ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಆದ್ರೆ ಬೆಂಗಳೂರಿನ ಪಾಲಿಗೆ ಇರೋದು ಕೆಲವೇ ಕೆಲವು ಕೆರೆಗಳು, ಅವುಗಳನ್ನು ಈ ರೀತಿ ಹಾಳು ಮಾಡಿದ್ರೇ ಹೇಗೆ ಅನ್ನೋದೇ ಸಿಲಿಕಾನ್ ಸಿಟಿ ಮಂದಿಯ ಪ್ರಶ್ನೆ.