ಬೆಂಗಳೂರು: ಆರ್‌ಎಸ್‌ಎಸ್ (RSS) ಸಾವಿರ ಹೆಡೆಗಳ ಸರ್ಪ ಹೇಳಿಕೆಗೆ ನಾನು ಈಗಲು ಬದ್ಧ ಎಂದು ಸಚಿವ ಡಾ.ಯತೀಂದ್ರ (Yathindra Siddaramaiah) ಹೇಳಿದ್ದಾರೆ.
ಈ ಕುರಿತು `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಸಾವಿರ ಹೆಡೆಗಳ ಸರ್ಪ ಅಂತ ನಾನು ಯಾಕೆ ಹೇಳಿದ್ದೇನೆ ಅಂದರೆ ಅವರು ನೂರಾರು ಅಂಗ ಸಂಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಹೇಳಲು ಮಾತ್ರ ಯಾವುದು ಆರ್‌ಎಸ್‌ಎಸ್‌ಗೆ ಸಂಬಂಧ ಇಲ್ಲ ಎನ್ನುತ್ತಾರೆ. ಆರ್‌ಎಸ್‌ಎಸ್ ಪರವಾಗಿ ಕೆಲಸ ಮಾಡುತ್ತಾರೆ. ಜೊತೆಗೆ ಸತತವಾಗಿ ಸಮಾಜದಲ್ಲಿ ಕೋಮುವಾದದ ವಿಷ ಬಿತ್ತುತ್ತಾ ಇರುತ್ತಾರೆ. ಹಾಗಾಗಿ ಆ ರೀತಿಯ ಉಪಮೇ ಕೊಟ್ಟಿದ್ದೇನೆ. ಅವರು ಏನೇ ವಿಷಯಕ್ಕೆ ಬಂದರು ಧರ್ಮ, ಜಾತಿ ವಿಷಯಕ್ಕೆ ತಿರುಗಿಸಿ ಬಿಡುತ್ತಾರೆ. ಜನರ ಕೆಲಸ ಅಂತು ಮಾಡೋದಿಲ್ಲ, ಜನರ ವಿಷಯಗಳನ್ನು ಎತ್ತೋದಿಲ್ಲ ಎಂದರು. ಇದನ್ನೂ ಓದಿ: KPSC ಅಕ್ರಮ ನೇಮಕಾತಿ ಕೇಸ್; ಮಾಜಿ ಅಧ್ಯಕ್ಷ ಶಿವಶಂಕರಪ್ಪ ಮನೆ ಮೇಲೆ ಇಡಿ ದಾಳಿ
ಯಾರೇ ಕೋಮುವಾದ ಮಾಡಿದರು ನಾವು ಅದನ್ನು ಟಾರ್ಗೆಟ್ ಮಾಡುತ್ತೇವೆ. ಬೇರೆ ಯಾರು ಇವರ ರೀತಿ ಇಲ್ಲ. ಧರ್ಮಕ್ಕೆ ತಿರುಗಿಸುವವರು ಇವರಥರದವರು ಯಾರು ಇಲ್ಲ. ಆ ರೀತಿ ಇದ್ದರೆ ಅವರನ್ನು ಕೂಡ ನಾವು ಟೀಕೆ ಮಾಡುತ್ತೇವೆ. ಆರ್‌ಎಸ್‌ಎಸ್‌ನ ಭಯ ನಮಗ್ಯಾಕೆ? ಆರ್‌ಎಸ್‌ಎಸ್‌ನ ತತ್ವ ಸಿದ್ಧಾಂತ ಫಾಲೋ ಮಾಡುವವರು ಆರ್‌ಎಸ್‌ಎಸ್‌ನ ವಿಚಾರ ಫಾಲೋ ಮಾಡೋ ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ನಾವು ಅವರ ಪರವಾಗಿಯೆ ಮಾತನಾಡಬೇಕು. ನಾವು ಇನ್ಯಾರ ಪರ ಮಾತನಾಡಬೇಕು? ಎಲ್ಲಾ ಕಾಂಗ್ರೆಸ್ ನಾಯಕರು ಇದರ ಬಗ್ಗೆ ಮಾತನಾಡುತ್ತಾರೆ. ಖರ್ಗೆ ಸಾಹೇಬರು ಮಾತನಾಡುತ್ತಿಲ್ವಾ? ಪರಮೇಶ್ವರ್ ಅವರು ಮಾತನಾಡುತ್ತಿಲ್ವಾ? ಡಿ.ಕೆ.ಸರ್ ಮಾತಾಡ್ತಿಲ್ವಾ? ಎಲ್ಲರೂ ಮಾತನಾಡುತ್ತಿದ್ದಾರೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಗೋಕರ್ಣದ ತದಡಿಯಲ್ಲಿ ಬೋಟ್ ಮುಳುಗಡೆ – ನಾಲ್ವರು ಮೀನುಗಾರರ ರಕ್ಷಣೆ
ನಾವು ಕಾಂಗ್ರೆಸ್‌ನ ಐಡಿಯಾಲಜಿಗೆ ಕಮಿಟ್‌ಮೆಂಟ್ ಇರುವಂಥವರು ಕಾಂಗ್ರೆಸ್ ಐಡಿಯಾಲಾಜಿ ಕೋಮುವಾದದ ವಿರುದ್ಧ ಇರುವಂತದ್ದು ಸೆಕ್ಯುಲರ್ ಐಡಿಯಾಲಾಜಿ. ಹಾಗಾಗಿ ಆ ಐಡಿಯಾಲಾಜಿ ಡಿಫೆಂಡ್ ಮಾಡುವಾಗ ನಾವು ಸ್ಟ್ರಾಂಗ್ ಆಗಿ ಹೇಳುತ್ತೇವೆ. ನಾವು ಅವರನ್ನ ಕೋಮುವಾದಿಗಳು ಅಂತ ಕರೆಯಬಾರದು ಅಂದರೆ ಅವರು ಬರಿ ಹಿಂದುತ್ವದ ವಿಚಾರ ಬಿಟ್ಟು ಬೇರೆ ವಿಚಾರವನ್ನು ಮಾತನಾಡಿದರೆ ನಾವು ಅವರ ಮೇಲೆ ಆರೋಪ ಮಾಡುವುದು ತಪ್ಪುತ್ತದೆ. ನಾನು ಇತ್ತೀಚೆಗೆ ಅಲ್ಲಾ ರಾಜಕಾರಣಕ್ಕೆ ಬಂದಾಗಿನಿಂದಲು ಒಂದೇ ವಿಚಾರ ಮಾತನಾಡುತ್ತಿದ್ದೇನೆ. ಬಹುಷಃ ಮಾಧ್ಯಮಗಳಲ್ಲಿ ಇವಾಗ ಬರುತ್ತಿದೆ ಅನ್ನಿಸುತ್ತೆ. ಈಗ ಮಾಧ್ಯಮಗಳಲ್ಲಿ ಏನಕ್ಕೆ ಬಂತು ಅವರು ನಮ್ಮ ಎಐಸಿಸಿ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಮಾಡಿದ್ದರಿಂದ ತಾನೆ ನಾವು ಪ್ರತಿಕ್ರಿಯೆ ಕೊಡಬೇಕಾಗಿ ಬಂತು. ಇಲ್ಲದಿದ್ದರೆ ಸುಮ್ಮನೆ ನಾವು ಮಾತನಾಡುತ್ತಿದ್ವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಹೋಟೆಲ್ ಆಹಾರ ಕಳಪೆಯೇ? ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ದೂರು ಕೊಡಿ
ಅವರು ಜಾತಿ ವಾದ ಕೋಮುವಾದವನ್ನು ಫಾಲೋ ಮಾಡಿಕೊಂಡು ಬರುತ್ತಾರೆ. ಅದಕ್ಕೆ ನಾವು ರಿಯಾಕ್ಟ್ ಮಾಡುತ್ತೇವೆ. ಅವರು ಮಾಡಿದ್ದಕ್ಕೆ ನಾವು ಮಾಡುತ್ತೇವೆ ಅಷ್ಟೇ. ಯರ‍್ಯಾರು ಸಾರ್ವಜನಿಕ ಸ್ಥಳಗಳನ್ನು ತಮ್ಮ ಚಟುವಟಿಕೆಗಳಿಗೆ ಅನುಮತಿ ಇಲ್ಲದೆ ಬಳಸುತ್ತಾರೋ ಅಂತ ಎಲ್ಲ ಜನರಿಗೂ ಅನ್ವಯಿಸುತ್ತದೆ. ಸಿದ್ದರಾಮಯ್ಯ ಅವರ ಅವಧಿಯಲ್ಲೂ ಅದನ್ನ ತರಬೇಕು ಅಂತ ಇತ್ತು, ಪ್ರಕ್ರಿಯೆಯಲ್ಲಿ ಇತ್ತು. ಇವಾಗ ಅದು ಪೂರ್ತಿ ಆಗಿ ಬಂದಿದೆ. ನನ್ನ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ ಎಂದು ಪುನರುಚ್ಚರಿಸಿದರು. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಭಿಕ್ಷೆ ಬೇಡಬೇಡಿ: ತನ್ನ ನಾಗರಿಕರಿಗೆ ಪಾಕ್ ಖಡಕ್ ಎಚ್ಚರಿಕೆ

