ನವದೆಹಲಿ: ವಿಶ್ವದ ಶ್ರೀಮಂತ ಎಲೋನ್ ಮಸ್ಕ್‌ನ ಕಂಪನಿ ಸ್ಟಾರ್‌ಲಿಂಕ್ ಇಂಡಿಯಾದ ಮುಖ್ಯಸ್ಥ ಸಂಜಯ್ ಭಾರ್ಗವ ರಾಜಿನಾಮೆ ನೀಡಿರುವುದಾಗಿ ಮಂಗಳವಾರ ಘೋಷಿಸಿದ್ದಾರೆ.
2021ರ ಡಿಸೆಂಬರ್ 31ಕ್ಕೆ ತಾವು ಕೊನೆಯದಾಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿದ್ದಾಗಿ ಹೇಳಿ, ತಮ್ಮ ವೈಯಕ್ತಿಕ ಕಾರಣಗಳಿಂದ ಹುದ್ದೆಯನ್ನು ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.
ಭಾರತದಲ್ಲಿ ಉಪಗ್ರಹ-ಬ್ರಾಡ್‌ಬ್ಯಾಂಡ್ ಸೇವೆಯ ಪ್ರಿ-ಬುಕ್ಕಿಂಗ್ ಮಾಡಿದವರಿಗೆ ಕಂಪನಿ ಮರುಪಾವತಿ (ರೀಫಂಡ್) ಮಾಡಲಾಗುವುದು ಎಂದು ಕೆಲವು ದಿನಗಳ ಹಿಂದೆ ಘೋಷಿಸಿತ್ತು. ಇದಾದ ಬಳಿಕ ಸಂಜಯ್ ಭಾರ್ಗವ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಚೆನ್ನೈ ವಿಮಾನ ನಿಲ್ದಾಣದ ಕಾರ್ಯಕ್ಷಮತೆಗೆ ವಿಶ್ವದಲ್ಲೇ 8ನೇ ಸ್ಥಾನ
ಸ್ಟಾರ್‌ಲಿಂಕ್ ಇಂಡಿಯಾದ ನಿರ್ದೇಶಕ ಹಾಗೂ ಅಧ್ಯಕ್ಷ ಸ್ಥಾನದಿಂದ ನಾನು ವೈಯಕ್ತಿಕ ಕಾರಣಗಳಿಂದ ಕೆಳಗಿಳಿದಿದ್ದೇನೆ. ನನ್ನ ಕೊನೆಯ ಕೆಲಸದ ದಿನ 2021ರ ಡಿಸೆಂಬರ್ 31. ಮಾಧ್ಯಮಗಳಿಗೆ ಹಾಗೂ ಜನರಿಗೆ ನಾನು ಯಾವುದೇ ಕಾಮೆಂಟ್ ನೀಡಲು ಬಯಸುವುದಿಲ್ಲ. ಆದ್ದರಿಂದ ದಯವಿಟ್ಟು ನನ್ನ ಗೌಪ್ಯತೆಯನ್ನು ಗೌರವಿಸಿ ಎಂದು ಭಾರ್ಗವ ತಡವಾಗಿ ತಮ್ಮ ಲಿಂಕ್ಡ್ಇನ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಚಾಕೋಲೇಟ್ ರಾಕೆಟ್- ವೀಡಿಯೋ ವೈರಲ್
ಭಾರ್ಗವ 1 ಅಕ್ಟೋಬರ್ 2021ರಂದು ಸ್ಟಾರ್‌ಲಿಂಕ್ ಇಂಡಿಯಾದ ಕಂಟ್ರಿ ಡೈರೆಕ್ಟರ್ ಆಗಿ ಸ್ಪೇಸ್‌ಎಕ್ಸ್‌ಗೆ ಸೇರಿದ್ದರು. 2000 ಇಸವಿಯಲ್ಲಿ ಎಲೋನ್ ಮಸ್ಕ್ ಅವರೊಂದಿಗೆ ಕೆಲಸ ಮಾಡಿದ್ದಾಗಿ ಅವರು ಹಿಂದೆ ತಿಳಿಸಿದ್ದರು.