ಬೆಂಗಳೂರು: ಕಾಂಗ್ರೆಸ್‌ನ (Congress) ಗ್ಯಾರಂಟಿ ಯೋಜನೆ (Guarantee Scheme) ಜಾರಿಗೆ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ (ST Somashekar) ಭಾರೀ ಉತ್ಸಾಹ ತೋರಿದ್ದು, ಗೃಹಲಕ್ಷ್ಮಿ (Gruhalakshmi) ಯೋಜನೆ ಜಾರಿ ಸಂಬಂಧ ಪೂರ್ವಭಾವಿ ಸಭೆ ಕರೆದಿದ್ದಾರೆ.
ಯಶವಂತಪುರ (Yeshwantpur) ಕ್ಷೇತ್ರದಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಗೆ ಕ್ಷೇತ್ರದ ಬೆಂಬಲಿಗರು, ಆಪ್ತರು ಹಾಗೂ ಕಾರ್ಯಕರ್ತರ ಸಭೆಯನ್ನು ಸೋಮಶೇಖರ್ ಕರೆದಿದ್ದಾರೆ. ಇದೇ ಆಗಸ್ಟ್ 30ರಂದು ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಯಾಗಲಿದೆ. ಈ ಕುರಿತು ಸೋಮಶೇಖರ್ ತಮ್ಮ ಫೇಸ್‌ಬುಕ್‌ನಲ್ಲಿ (Facebook) ಪೋಸ್ಟ್ ಹಾಕಿ ಮಾಹಿತಿಯನ್ನು ನೀಡಿದ್ದು, ಬಿಜೆಪಿಗೆ (BJP) ಮತ್ತೊಮ್ಮೆ ಮುಜುಗರ ಉಂಟಾಗುವಂತೆ ಮಾಡಿದ್ದಾರೆ. ಇದನ್ನೂ ಓದಿ: ಆಪರೇಷನ್ ಹಸ್ತಕ್ಕೆ ಮುಂದಿನ ವಾರ ನಿರ್ಣಾಯಕ – ಕಾಂಗ್ರೆಸ್ ಸೇರ್ತಾರಾ ಮುನೇನಕೊಪ್ಪ?
ಈ ಹಿಂದೆ ಡಿಕೆಶಿ ಗುಣಗಾನವನ್ನು ಮಾಡಿದ್ದ ಎಸ್.ಟಿ.ಸೋಮಶೇಖರ್ ಈಗ ಗ್ಯಾರಂಟಿ ಯೋಜನೆ ಜಾರಿಗೆ ಒಲವು ತೋರುತ್ತಿದ್ದು, ಕಾಂಗ್ರೆಸ್ ಸೇರುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇರಿಸಿದ್ರಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ರೋಡ್ ಶೋ ಸಂದರ್ಭದಲ್ಲಿ ಬಿಜೆಪಿ ನಾಯಕರ ಮಾದರಿ ನಡೆ: ಬಸವರಾಜ ಬೊಮ್ಮಾಯಿ
Web Stories