BellaryDistrictsKarnatakaLatestMain Post

ಜನಾರ್ದನ ರೆಡ್ಡಿ ನನ್ನ ಆಪ್ತಮಿತ್ರ, ಸ್ನೇಹಕ್ಕಾಗಿ ಪ್ರಾಣ ಕೊಡಲು ಸಿದ್ಧ: ಶ್ರೀರಾಮುಲು

ಬಳ್ಳಾರಿ: ಜನಾರ್ದನ ರೆಡ್ಡಿ (Janardhan Reddy) ರೆಬಲ್ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ ಸಚಿವ ಶ್ರೀರಾಮುಲು (Sriramulu) ಅವರು ಮತ್ತೆ ಸ್ನೇಹದ ಮಂತ್ರ ಜಪಿಸಿದ್ದಾರೆ. ಜನಾರ್ದನ ರೆಡ್ಡಿ ನನ್ನ ಆಪ್ತಸ್ನೇಹಿತ, ಸ್ನೇಹಕ್ಕಾಗಿ ಜೀವ ಕೊಡಲು ನಾನು ಸಿದ್ಧ ಎಂದು ಶ್ರೀರಾಮುಲು ತಿಳಿಸಿದರು.

ಬಳ್ಳಾರಿ (Ballary) ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಅಸಮಾಧಾನವನ್ನು ಮನವೊಲಿಸಲು ಸಿದ್ಧನಿದ್ದೇನೆ. ಸ್ನೇಹ ಅಂದ್ರೆ ಜನಾರ್ದನ‌ರೆಡ್ಡಿ ಮತ್ತು ರಾಮುಲು ಎಂದು ಎಲ್ಲರೂ ಮಾತಾಡ್ತಾರೆ. ಸ್ನೇಹಕ್ಕೆ ಪ್ರಾಣ ಕೊಡುವ ವ್ಯಕ್ತಿ ಈ ರಾಮುಲು. ಹೀಗಾಗಿ ನನ್ನ ಪ್ರಾಣಸ್ನೇಹಿತನಿಂದ ದೂರ ಆಗುವ ಮಾತೇ ಇಲ್ಲ ಎಂದು ಹೇಳಿದರು.

ಜನಾರ್ದನ ರೆಡ್ಡಿ ನನ್ನ ಆಪ್ತಮಿತ್ರ, ಸ್ನೇಹಕ್ಕಾಗಿ ಪ್ರಾಣ ಕೊಡಲು ಸಿದ್ಧ: ಶ್ರೀರಾಮುಲು

ಸ್ನೇಹ ಮತ್ತು ರಾಜಕಾರಣ ಎರಡೂ ಕೂಡ ಮುಖ್ಯ. ಬಿಜೆಪಿ (BJP) ಪಕ್ಷ ನನಗೆ ತಾಯಿ ಸಮಾನ, ಸ್ನೇಹ ಮತ್ತು ಪಾರ್ಟಿ ವಿಚಾರ ಬಂದಾಗ ಎರಡನ್ನೂ ಕೂಡ ಸರಿದೂಗಿಸಿಕೊಂಡು ಹೋಗುವೆ. ರಾಜಕಾರಣ ಬಂದಾಗ ಜನಾರ್ದನ ರೆಡ್ಡಿ ಅವರ ಬಗ್ಗೆ ಅಲ್ಲಿ ಇಲ್ಲಿ ಸುದ್ದಿಗಳನ್ನು ಕೇಳ್ತಾ ಇದ್ದೇವೆ. ಆದ್ರೆ ಅದೆಲ್ಲವೂ ಸತ್ಯವಲ್ಲ, ಅವರ ಅಸಮಾಧಾನ ಸರಿಪಡಿಸುವೆ, ನಾನಿನ್ನೂ ಜನಾರ್ದನ ರೆಡ್ಡಿ ಅವರನ್ನ ಭೇಟಿಯಾಗಿಲ್ಲ. ಭೇಟಿಯಾಗಿ ಅವರ ಜೊತೆ ಎಲ್ಲವನ್ನೂ ಮಾತನಾಡುವೆ ಎಂದು ತಿಳಿಸಿದರು. ಇದನ್ನೂ ಓದಿ: ಫೆಬ್ರವರಿಯಲ್ಲಿ ಏರ್ ಶೋ- ಪ್ರಧಾನಿ ಮೋದಿಯವರಿಂದ ಉದ್ಘಾಟನೆ

ಜನಾರ್ದನ ರೆಡ್ಡಿ ಸದ್ಯದ ರಾಜಕೀಯದ ಬಗ್ಗೆ ನನಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಅವರು ನನಗೆ ಸಿಕ್ಕ ಬಳಿಕ ಅವರನ್ನ ಕೂರಿಸಿಕೊಂಡು ಮಾತಾಡುವೆ. ನನ್ನ ಸ್ನೇಹಿತ ಅಸಮಾಧಾನಗೊಳ್ಳದಂತೆ ನಾನು ಕೂರಿಸಿ ಮಾತಾಡುವೆ. ಅವರ ಮನವೊಲಿಸುವ ಕೆಲಸ ಮಾಡುವೆ. ಪಕ್ಷಕ್ಕೆ ಮುಜುಗರವಾಗದಂತೆ ಎಲ್ಲವನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಜನಾರ್ದನ್‌ ರೆಡ್ಡಿಗೆ ಬಿಗ್‌ ರಿಲೀಫ್‌ – ಒಂದೇ ದಿನ 4 ಪ್ರಕರಣಗಳಿಂದ ಮುಕ್ತಿ

Live Tv

Leave a Reply

Your email address will not be published. Required fields are marked *

Back to top button