BellaryLatestMain Post

ಜನಾರ್ದನ್‌ ರೆಡ್ಡಿಗೆ ಬಿಗ್‌ ರಿಲೀಫ್‌ – ಒಂದೇ ದಿನ 4 ಪ್ರಕರಣಗಳಿಂದ ಮುಕ್ತಿ

ಬಳ್ಳಾರಿ: ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭಿಸಲು ಮುಂದಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ (Janardhan Reddy) ಬಿಗ್ ರಿಲೀಫ್ ಸಿಕ್ಕಿದೆ. ಬೆನಾಮಿ ಆಸ್ತಿ ಗಳಿಕೆ ಸಂಬಂಧ ದಾಖಲಾಗಿದ್ದ ನಾಲ್ಕು ಪ್ರಕರಣಗಳಲ್ಲಿ ಒಂದೇ ದಿನ ಜನಾರ್ದನ ರೆಡ್ಡಿಗೆ ಮುಕ್ತಿ ಸಿಕ್ಕಿದೆ.

ಸುಪ್ರೀಂ ಕೋರ್ಟ್ (Supreme Court) ತೀರ್ಪನ್ನು ಆಧರಿಸಿ ಬೆಂಗಳೂರಿನ ಸೆಷನ್ಸ್ ಕೋರ್ಟ್, ಗಾಲಿ ಜನಾರ್ದನ ರೆಡ್ಡಿ ವಿರುದ್ಧ ದಾಖಲಾದ ನಾಲ್ಕು ಪ್ರಕರಣಗಳನ್ನು ಇತ್ಯರ್ಥ ಮಾಡಿದೆ. ಇದನ್ನೂ ಓದಿ: ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ರಾಮುಲು ಗೈರು- ಮುರಿದು ಬಿತ್ತಾ ದಶಕಗಳ ಗೆಳೆತನದ ನಂಟು..?

court order law

ಯೂನಿಯನ್ ಆಫ್ ಇಂಡಿಯಾ ಮತ್ತು ಗಣಪತಿ ಡೀಲ್ಕಾಮ್ ಪ್ರೈವೆಟ್ ಲಿಮಿಟೆಡ್ ಪ್ರಕರಣದಲ್ಲಿ ಆಗಸ್ಟ್ 23ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಬೇನಾಮಿ ಆಸ್ತಿಯ ಹಳೆಯ ಪ್ರಕರಣಗಳಲ್ಲಿ 2016ರ ಕಾನೂನಿನ ಅಡಿಯಲ್ಲಿ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ. 1988ರ ಕಾಯ್ದೆಯ ಪ್ರಕಾರ 2016ರಲ್ಲಿ ತಂದಿರುವ ಕಾಯ್ದೆತ ಸೆಕ್ಷನ್ 3(2) ಕೂಡ ಅಸಾಂವಿಧಾನಿಕ ಎಂದು ಅಂದಿನ ಸಿಜೆಐ ರಮಣ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಅವರಿದ್ದ ಪೀಠ ತೀರ್ಪು ನೀಡಿತ್ತು.

ಇದು ಜನಾರ್ದನ ರೆಡ್ಡಿಗೆ ವರವಾಗಿ ಪರಿಣಮಿಸಿದೆ. 2009ರಲ್ಲಿ ಜನಾರ್ದನ ರೆಡ್ಡಿ ಬೇನಾಮಿ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ 2021ರಲ್ಲಿ ಆದಾಯ ತೆರಿಗೆ ಇಲಾಖೆ 4 ಕೇಸ್ ದಾಖಲು ಮಾಡಿತ್ತು. ಈ ಮಧ್ಯೆ, ಇವತ್ತು ಕೂಡ ಜನಾರ್ದನ ರೆಡ್ಡಿ ಪರವಾಗಿ ಸಚಿವ ಶ್ರೀರಾಮುಲು ಬ್ಯಾಟ್ ಮಾಡಿದ್ದಾರೆ. ಇದನ್ನೂ ಓದಿ: ವಿಶ್ವನಾಥ್ ಮನಸ್ಥಿತಿ ಗೊತ್ತಿಲ್ಲ, ನಾನು ಬಿಜೆಪಿ ಬಿಟ್ಟು ಹೋಗಲ್ಲ: ಎಂಟಿಬಿ

Live Tv

Leave a Reply

Your email address will not be published. Required fields are marked *

Back to top button