ಕನ್ನಡತಿ ಶ್ರೀನಿಧಿ ಶೆಟ್ಟಿ `ಕೆಜಿಎಫ್ 2′ ಚಿತ್ರದ ಯಶಸ್ಸಿನ ಅಲೆಯಲ್ಲಿದ್ದಾರೆ. ಸದ್ಯ ಚಿಯಾನ್ ವಿಕ್ರಮ್ಗೆ ನಾಯಕಿಯಾಗಿ `ಕೋಬ್ರಾ’ ಚಿತ್ರದಲ್ಲಿ ನಟಿಸಿರುವ ಶ್ರೀನಿಧಿ, ತಮ್ಮ ಸಂಭಾವನೆ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕೆಜಿಎಫ್ ಸಕ್ಸಸ್ ನಂತರ ʻಕೋಬ್ರಾʼ ಚಿತ್ರಕ್ಕೆ ಬರೋಬ್ಬರಿ ಎರಡು ಪಟ್ಟು ಜಾಸ್ತಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.
Advertisement
ಯಶ್ ಜೊತೆ ಕೆಜಿಎಫ್ನಲ್ಲಿ ಮಿಂಚಿದ ನಂತರ ಈಗ ಚಿಯಾನ್ ವಿಕ್ರಮ್ ಜತೆ ಡ್ಯುಯೆಟ್ ಹಾಡಲು ಶ್ರೀನಿಧಿ ರೆಡಿಯಾಗಿದ್ದಾರೆ. ಸದ್ಯ ಗಾಂಧಿನಗರದಲ್ಲಿ ಶ್ರೀನಿಧಿ ಶೆಟ್ಟಿ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿರುವ ಬಗ್ಗೆ ಸಖತ್ ಸುದ್ದಿಯಲ್ಲಿದ್ದಾರೆ. ತಮಿಳಿನ ʻಕೋಬ್ರಾʼ ಚಿತ್ರಕ್ಕೆ ಭಾರಿ ಮೊತ್ತದ ಸಂಭಾವನೆಯನ್ನೇ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:Breaking-ಬಿಗ್ ಬಾಸ್ ಸೀಸನ್ 8 ಶೂಟಿಂಗ್ ಶುರು: ಪ್ರೊಮೋ ಚಿತ್ರೀಕರಣದಲ್ಲಿ ಸುದೀಪ್ ಭಾಗಿ
Advertisement
`ಕೆಜಿಎಫ್ 2′ ಸಿನಿಮಾಗೆ 3 ಕೋಟಿ ಸಂಭಾವನೆ ಪಡೆದಿದ್ದ ಶ್ರೀನಿಧಿ ಶೆಟ್ಟಿ, ಈಗ ತಮಿಳಿನ ಚೊಚ್ಚಲ ಚಿತ್ರಕ್ಕೆ 6 ರಿಂದ 7 ಕೋಟಿ ಸಂಭಾವನೆ ಪಡೆದಿದ್ದಾರಂತೆ. ನಟಿಸಿರುವ ಎರಡು ಚಿತ್ರದಲ್ಲೂ ಸಿಕ್ಕಾಪಟ್ಟೆ ಸೌಂಡ್ ಮಾಡಿರುವ ನಾಯಕಿ, ಈಗ ತಮ್ಮ ಸಂಭಾವನೆ ವಿಚಾರದಲ್ಲಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಮೊದಲ ಬಾರಿಗೆ ಚಿಯಾನ್ ವಿಕ್ರಮ್ಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ಕೆಜಿಎಫ್ ನಟಿ ಶ್ರೀನಿಧಿ ನಟನೆಯ ಚಿತ್ರ ʻಕೋಬ್ರಾʼ ಆಗಸ್ಟ್ 11ರಂದು ತೆರೆಗೆ ಅಬ್ಬರಿಸುತ್ತಿದೆ. ಇನ್ನು ಕಾಲಿವುಡ್ನಲ್ಲಿ ಶ್ರೀನಿಧಿ ಶೆಟ್ಟಿ ಅದೆಷ್ಟರ ಮಟ್ಟಿಗೆ ಸೌಂಡ್ ಮಾಡುತ್ತಾರೆ ಅಂತಾ ಕಾದುನೋಡಬೇಕಿದೆ.