ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ಮೊನ್ನೆಯಷ್ಟೇ ಬಿಗ್ ಬಾಸ್ ತಯಾರಿ ಕುರಿತು ಸಣ್ಣದೊಂದು ಅಪ್ ಡೇಟ್ ಕೊಟ್ಟಿದ್ದರು. ಹೊಸ ಮನೆ ನಿರ್ಮಾಣ ಆಗುತ್ತಿರುವ ಮಸುಕಾದ ಫೋಟೋವೊಂದು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಾಕಿ ಕುತೂಹಲಕ್ಕೆ ಕಾರಣವಾಗಿದ್ದರು. ಇದೀಗ ಸದ್ದಿಲ್ಲದೇ ಪ್ರೊಮೋ ಶೂಟ್ ಕೂಡ ಮುಗಿಸಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಪ್ರೊಮೋ ಶೂಟ್ ಮುಗಿದಿದ್ದು, ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ.
Advertisement
ವಿಕ್ರಾಂತ್ ರೋಣ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದರೂ, ಸುದೀಪ್ ನಿನ್ನೆ ಬೆಳಗ್ಗೆಯಿಂದ ಸಂಜೆವರೆಗೂ ನಡೆದ ಬಿಗ್ ಬಾಸ್ 9ರ ಪ್ರೋಮೋ ಶೂಟ್ ನಲ್ಲಿ ಭಾಗಿಯಾಗಿದ್ದಾರೆ. ಸ್ವತಃ ಪರಮೇಶ್ವರ ಗುಂಡ್ಕಲ್ ಅವರೇ ಈ ಪ್ರೊಮೋವನ್ನು ಚಿತ್ರೀಕರಿಸಿದ್ದು ವಿಶೇಷ. ಈ ಬಾರಿಯ ಬಿಗ್ ಬಾಸ್ ವಿಶೇಷ ಏನು? ಯಾವ ಯಾವ ಕ್ಷೇತ್ರದ ಜನರು ಭಾಗಿಯಾಗಲಿದ್ದಾರೆ? ಸೀಸನ್ 8ರಲ್ಲಿ ಏನೆಲ್ಲ ನೋಡಬಹುದು ಎನ್ನುವ ಕುರಿತಾದ ಸ್ಕ್ರಿಪ್ಟ್ ಗೆ ಕಿಚ್ಚ ಆಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಕೆ.ಎಲ್ ರಾಹುಲ್ ಜೊತೆ ಮದುವೆಯ ವದಂತಿಗೆ ಸ್ಪಷ್ಟನೆ ನೀಡಿದ ಅಥಿಯಾ ಶೆಟ್ಟಿ
Advertisement
Advertisement
ಬಿಗ್ ಬಾಸ್ ಸೀಸನ್ 9ರ ಪ್ರೊಮೋಗಾಗಿ ಕಿಚ್ಚ ಸುದೀಪ್ ವಿಶೇಷ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದರು. ಬಿಳಿ ಅಂಗಿ, ಕರಿಪ್ಯಾಂಟು, ಮೇಲೊಂದು ಕೋಟು ಹಾಗೂ ವಿಶೇಷ ಹೇರ್ ಸ್ಟೈಲ್ ನಲ್ಲಿ ಈ ಬಾರಿ ಪ್ರೊಮೋ ಶೂಟ್ ಮಾಡಲಾಗಿದೆ. ಮೊದಲು ಓಟಿಟಿಯಲ್ಲಿ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಬಾರಿಯ ಬಿಗ್ ಬಾಸ್ ಪ್ರಸಾರವಾಗಲಿದ್ದು, ಅದಕ್ಕೆ ತಕ್ಕಂತೆ ಪ್ರೊಮೋಗಳನ್ನು ಶೂಟ್ ಮಾಡಲಾಗಿದೆ ಎನ್ನುತ್ತಿವೆ ಮೂಲಗಳು. ಈ ಎರಡಲ್ಲೂ ಕಿಚ್ಚನ ನಿರೂಪಣೆಯೇ ಇರಲಿದೆಯಂತೆ.
Advertisement
ಎರಡು ವೇದಿಕೆಯಲ್ಲಿ ಈ ಬಾರಿ ಬಿಗ್ ಬಾಸ್ ಮೂಡಿ ಬರಲಿದ್ದು, ಮೊದಲು ವೂಟ್ಸ್ ನಲ್ಲಿ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ವೂಟ್ಸ್ ನಲ್ಲಿ ಗೆದ್ದವರಿಗೆ ಕಲರ್ಸ್ ವಾಹಿನಿಯಲ್ಲಿ ನಡೆಯುವ ಬಿಗ್ ಬಾಸ್ ನಲ್ಲಿ ಭಾಗಿಯಾಗಲು ಅವಕಾಶ ನೀಡಲಾಗುತ್ತಿದೆ ಎಂದು ಹೇಳಲಾಗಿದ್ದು, ವಾಹಿನಿಯು ಅದನ್ನು ಅಧಿಕೃತವಾಗಿ ಮುಂದಿನ ದಿನಗಳಲ್ಲಿ ಹೇಳಲಿದೆಯಂತೆ.