ಕಲಬುರಗಿ: ಶೃಂಗೇರಿ ಮಠದ (Sringeri Matha) ಆಸ್ತಿ ವಕ್ಫ್ ಆಸ್ತಿ ಎಂದು ಎಲ್ಲಿಯೂ ಹೇಳಿಲ್ಲ ಎಂದು ಹಜರತ್ ಟಿಪ್ಪು ಸುಲ್ತಾನ್ (Tipu Sultan) ವಂಶಸ್ಥ ಸಾಹೇಬ್ ದಾದಾ ಮನ್ಸೂರ್ ಅಲಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶೃಂಗೇರಿ ಮಠದ ಆಸ್ತಿ ಹಿಂದೂ ಧರ್ಮಕ್ಕೆ ಸೇರಿದ್ದು ಎಂಬ ಕಾರಣಕ್ಕಾಗಿ ಟಿಪ್ಪು ಸುಲ್ತಾನ್ ತಮ್ಮ ಸೇನೆಯ ಸಿಪಾಯಿಗಳನ್ನು ಕಳುಹಿಸಿ ಮಠದ ರಕ್ಷಣೆ ಮಾಡುವ ಕೆಲಸ ಮಾಡಿದ್ದರು. ಶೃಂಗೇರಿ ಮಠವನ್ನು ಕೆಲವರು ಒಡೆದು ಹಾಕಿದಾಗ ಟಿಪ್ಪು ಸುಲ್ತಾನ್ ಸಿಪಾಯಿಗಳನ್ನು ಕಳುಹಿಸಿ ರಕ್ಷಣೆ ಮಾಡಿದ್ದಲ್ಲದೆ, ಅದರ ಪುನರ್ರಚನೆ ಮಾಡಿಸಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ – ಪ್ರತ್ಯಕ್ಷದರ್ಶಿ ಮೊಬೈಲ್‌ನಲ್ಲಿದ್ದ ಫೋಟೋ ರಿಟ್ರೀವ್
Advertisement
Advertisement
ದೊಡ್ಡಬಳ್ಳಾಪುರದ ಶ್ರೀನರಸಿಂಹ ಸ್ವಾಮಿ ದೇವಸ್ಥಾನ, ಚಾಮುಂಡೇಶ್ವರಿ ದೇವಸ್ಥಾನ, ನಂಜುಂಡೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ಸಾಕಷ್ಟು ದೇವಸ್ಥಾನಗಳಿಗೆ ಹಜರತ್ ಟಿಪ್ಪು ಸುಲ್ತಾನ್ ಜಮೀನು ನೀಡಿದ್ದಾರೆ ಎಂದು ವಿವರಿಸಿದರು.
Advertisement
ವಕ್ಫ್ ಆಸ್ತಿಯನ್ನು ಅಲ್ಲಾಹುವಿನ ಹೆಸರಲ್ಲಿ ಬಡವರು ಮತ್ತು ಮುಸ್ಲಿಂ ಸಮುದಾಯಕ್ಕೆ ಕೊಟ್ಟಿದ್ದಾರೆ. ನಂತರ ಸರ್ಕಾರ ವಕ್ಫ್ ಬೋರ್ಡ್ (Waqf Board) ಎಂದು 1995 ರಲ್ಲಿ ನಾಮಕರಣ ಮಾಡಿದೆ. ಸಾಕಷ್ಟು ವಕ್ಫ್ ಆಸ್ತಿ ಮತ್ತು ಜಮೀನು ಬೇರೆಯವರ ಪಾಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
Advertisement
ಸರ್ಕಾರವೇ ಟಿಪ್ಪು ಜಯಂತಿ ಆಚರಿಸಲಿ:
ಇನ್ಮುಂದೆ ಹಜರತ್ ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದಲೇ ಆಚರಿಸಬೇಕು. ಈ ಬಾರಿ ಟಿಪ್ಪು ಜಯಂತಿ ಆಚರಣೆಗೆ ಬೇರೆ ಬೇರೆ ಸಂಘಟನೆಗಳಿಗೆ ಅವಕಾಶ ನೀಡಿಲ್ಲ. ವಿಜಯಾನಂದ ಕಾಶಪ್ಪನವರ್ ಇಳಕಲ್‌ನಲ್ಲಿ ದೊಡ್ಡ ಕಾರ್ಯಕ್ರಮ ಮಾಡಿದರು. ಅದೇ ರೀತಿಯಲ್ಲಿ ಕಲ್ಯಾಣ ಕರ್ನಾಟಕದ ಎಲ್ಲ ಕಡೆ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಅವಕಾಶ ನೀಡಬೇಕು ಎಂದರು. ಇದನ್ನೂ ಓದಿ: ನಿಖಿಲ್ ಸೋಲಿನಿಂದ ಬೇಸರ – ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ!
ಕೇವಲ ಮುಸ್ಲಿಮರು ಮಾತ್ರವಲ್ಲ ದಲಿತರು ಸೇರಿದಂತೆ ಅನ್ಯ ಸಮುದಾಯಗಳಲ್ಲಿಯೂ ಟಿಪ್ಪು ಸುಲ್ತಾನ್‌ಗೆ ಅಭಿಮಾನಿಗಳಿದ್ದಾರೆ. ಹಾಗಾಗಿ, ಮುಂಬರುವ ದಿನಗಳಲ್ಲಿ ಸರ್ಕಾರವೇ ಟಿಪ್ಪು ಜಯಂತಿ ಆಚರಣೆ ಮಾಡಬೇಕು. ಒಂದು ವೇಳೆ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವಿಚಾರದಲ್ಲಿ ಸರ್ಕಾರ ತಕ್ಷಣ ಸಕಾರಾತ್ಮಕ ಕ್ರಮ ಕೈಗೊಳ್ಳದೇ ಹೋದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಟಿಪ್ಪು ಸುಲ್ತಾನ್ ಹೆಸರಲ್ಲಿ ಪುರಾತತ್ವ ಇಲಾಖೆಗೆ ವಕ್ಫ್ ಆಸ್ತಿಗಳಿಂದ ಕೋಟ್ಯಂತರ ರೂ. ಹಣ ಬರುತ್ತಿದೆ. ಆ ಹಣದ ಉಪಯೋಗ ಸರಿಯಾಗಿ ಆಗುತ್ತಿಲ್ಲ. ಹಾಗಾಗಿ ಸರ್ಕಾರ ತಾನೇ ಸ್ವತಃ ಟಿಪ್ಪು ಜಯಂತಿ ಆಚರಿಸಬೇಕು ಎಂದು ಪುನರುಚ್ಚರಿಸಿದರು. ಈ ಕುರಿತು ಮುಖ್ಯಮಂತ್ರಿಗಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಸಚಿವರು ಮತ್ತು ಶಾಸಕರ ಗಮನಕ್ಕೆ ತಂದು ಮನವಿ ಮಾಡುತ್ತೇವೆ ಎಂದು ಹೇಳಿದರು.