ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರರಕಣದಲ್ಲಿ ಅನಗತ್ಯವಾಗಿ ಹಿಂದೂ ಸಂಘಟನೆಗಳ ಹೆಸರು ಕೇಳಿ ಬರುತ್ತಿದೆ. ಅನಗತ್ಯವಾಗಿ ರಾಜಕೀಯ ದುರುದ್ದೇಶದಿಂದ ಪ್ರಕರಣಕ್ಕೆ ತಿರುವು ನೀಡಲಾಗುತ್ತಿದೆ. ಅನಗತ್ಯವಾಗಿ ಹಿಂದೂ ಸಂಘಟನೆಯ ಮಾನಹಾನಿಯನ್ನು ಮಾಡಲಾಗುತ್ತಿದೆ ಎಂದು ಶ್ರೀರಾಮ ಸಂಘಟನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಗೌರಿ ಲಂಕೇಶ್ ಹತ್ಯೆಯಲ್ಲಿ ಶ್ರೀರಾಮಸೇನೆ ಪಾತ್ರವಿದೆ ಎಂಬ ಆರೋಪ ಹಿನ್ನೆಲೆ ಹಿಂದೂ ಜನಜಾಗೃತಿ ವೇದಿಕೆಯಿಂದ ಜನಸಂವಾದ ಸಭೆ ಆಯೋಜನೆ ಮಾಡಲಾಗಿತ್ತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗೌರಿ ಹತ್ಯೆಗೆ ಶ್ರೀ ರಾಮಸೇನೆಗೆ ಯಾವುದೇ ಸಂಬಂಧ ಇಲ್ಲ. ಯಾವುದೇ ಹಿಂದೂ ಸಂಘಟನೆಯ ಕೈವಾಡ ಇಲ್ಲ. ಫೋಟೋ ಸಂಬಂಧಿಸಿದಂತೆ ನಾನು ಮದುವೆಗೆ ಹೋಗುತ್ತೇನೆ. ಈ ಸಂದರ್ಭದಲ್ಲಿ ಸಾಕಷ್ಟು ಜನ ಫೋಟೋ ತೆಗೆದುಕೊಳ್ಳುತ್ತಾರೆ. ಫೋಟೋ ತೆಗೆಸಿಕೊಂಡವರಲ್ಲ ನಮ್ಮ ಸಂಘಟನೆಗೆ ಸಂಬಂಧ ಇಲ್ಲ. ಆದರೆ ಅವರು ಹಿಂದೂ ಅಭಿಮಾನಿಗಳು ಎಂದು ಸ್ಪಷ್ಟನೆ ನೀಡಿದರು.
Advertisement
Advertisement
ನಾನು ಮುಸ್ಲಿಂ ಮತ್ತು ಕ್ರಿಶ್ಚಿಯನ್ ವಿರೋಧಿ ಅಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ ಅವರು, ಅವರೆಲ್ಲರೂ ನಮ್ಮವರೆ, ಏಕೆಂದರೆ ಅವರ ಪೂರ್ವಜರು ಹಿಂದೂಗಳು. ಆದರೆ ಬೇರೆ ಧರ್ಮಕ್ಕೆ ಮತಾಂತರ ಮಾಡಲಾಗಿದೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ಸುಖವಾಗಿದ್ದಾರೆ ಎಂದರೆ ಅದು ಭಾರತದಲ್ಲಿ ಮಾತ್ರ. ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಿಗೆ ನೂರಾರು ದೇಶಗಳಿವೆ ಆದರೆ ಹಿಂದೂಗಳಿಗೆ ಭಾರತವೊಂದೆ ಮನೆ ಎಂದರು.
Advertisement
ಗೌರಿ ಹತ್ಯೆ ತನಿಖೆಯನ್ನು ಆರಂಭದಲ್ಲೆ ದಿಕ್ಕು ತಪ್ಪಿಸಲಾಯ್ತು, ಆರಂಭದಿಂದಲೂ ಬಲಪಂಥೀಯರ ಮೇಲೆ ಆರೋಪ ಮಾಡಲಾಯಿತು. ಆದರೆ ಮಹಾರಾಷ್ಟ್ರದಲ್ಲಿ ಇಬ್ಬರು ಮತ್ತು ಕರ್ನಾಟಕದಲ್ಲಿ ಇಬ್ಬರು ಹತ್ಯೆಯಾಗಿದ್ದು ಕಾಂಗ್ರೆಸ್ ಆಡಳಿತದಲ್ಲಿ. ಆದರೆ ಬುದ್ಧಿಜೀವಿಗಳು ಕಾಂಗ್ರೆಸ್ ಆನ್ನು ಪ್ರಶ್ನೆ ಮಾಡುವುದಿಲ್ಲ. ಎಲ್ಲಾ ಹತ್ಯೆಗಳಿಗೂ ಮೋದಿಯನ್ನು ಪ್ರಶ್ನೆ ಮಾಡಲಾಗುತ್ತೆ. ಗೌರಿ ಹತ್ಯೆಗೆ ಮೋದಿಗೂ ಏನು ಸಂಬಂಧ. ರಸ್ತೆಯಲ್ಲಿ `ನಾಯಿ’ ಸತ್ತರೂ ಮೋದಿ ಮಾತನಾಡಬೇಕಾ ಎಂದು ಪ್ರಶ್ನಿಸಿದರು.
Advertisement
ಬುದ್ಧಿಜೀವಿಗಳು ಕಾಂಗ್ರೆಸ್ ಏಜೆಂಟ್: ದೇಶದಲ್ಲಿರುವ ಬುದ್ಧಿ ಜೀವಗಳು ಕಾಂಗ್ರೆಸ್ ಏಜೆಂಟರು. ಕಾಂಗ್ರೆಸ್ ಪಕ್ಷವನ್ನು ಪ್ರಶ್ನೆ ಮಾಡುವುದಿಲ್ಲ, ಆದರೆ ಮೋದಿ ಮೋದಿ ಎಂದು ಬೊಗಳುತ್ತಾರೆ. ನೀವು ಮೋದಿಯನ್ನು ಪ್ರಶ್ನಿಸುವಷ್ಟು ದೊಡ್ಡವರಾದಾರಾ. ಪ್ರಶ್ನೆ ಮಾಡಲಿ ಆದರೆ ಸರಿಯಾದ ಪ್ರಶ್ನೆಗಳನ್ನು ಎತ್ತಲಿ ಎಂದು ವಾಗ್ದಾಳಿ ನಡೆಸಿದರು.
ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮೋಹನ್ ಗೌಡ ಮತ್ತು ವಕೀಲ ಅಮೃತೇಶ್ ಭಾಗಿಯಾಗಿದ್ದರು. ನಗರದ ರಾಜಾಜಿನಗರದ ರಾಮಮಂದಿರದಲ್ಲಿ ಜನಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.