ಕಲಬುರಗಿ: ನಗರದ ಕೋಟೆ ಮುಂಭಾಗದಲ್ಲಿ ಹಿಂದೂ ಮಹಾಗಣಪತಿ ಸಮಿತಿಯಿಂದ ಪ್ರತಿಷ್ಠಾಪಿಸಲಾಗಿರುವ ಕೇದಾರನಾಥ ಮಾದರಿಯ ಭವ್ಯ ಮಂದಿರಕ್ಕೆ ಕೊಪ್ಪಳ ಗವಿಮಠದ ಪೂಜ್ಯ ಶ್ರೀಗಳು ಭೇಟಿ ನೀಡಿ ಹಿಂದೂ ಮಹಾಗಣಪತಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀಗಳು ಮಹಾಗಣಪತಿಗೆ ಆರತಿ ನೆರವೇರಿಸಿ ಭಕ್ತರೊಂದಿಗೆ ದೇವರ ಆಶೀರ್ವಾದ ಪಡೆದರು. ಗಣೇಶೋತ್ಸವದ ಅಂಗವಾಗಿ ಸಮಿತಿಯಿಂದ ನಿರ್ಮಿಸಲಾಗಿರುವ ಕೇದಾರನಾಥ ಮಾದರಿಯ ಮಂದಿರ ಹಾಗೂ ವಿಶೇಷ ಅಲಂಕಾರವನ್ನು ಶ್ರೀಗಳು ಮೆಚ್ಚಿಕೊಂಡರು.
ಕಾರ್ಯಕ್ರಮದಲ್ಲಿ ಶ್ರೀ ಅಭಿನವ ಚನ್ನಮಲ್ಲ ಶ್ರೀಗಳು, ಗೋಳಾ, ತೋಳನೂರ ಹಾಗೂ ನರೋಣಾ ಶ್ರೀಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಪ್ರಚಾರಕ ವಿಜಯ ಮಾಹಾಂತೇಶ, ಶಾಸಕ ಬಸವರಾಜ ಮತ್ತಿಮಡು, ಸಮಾಜ ಸೇವಕಿ ಜಯಶ್ರೀ ಮತ್ತಿಮಡು ಸೇರಿದಂತೆ ಹಲವರು ಭಾಗವಹಿಸಿ ಮಹಾಗಣಪತಿಗೆ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಬಿಗ್‌ಬಾಸ್ ಮನೆಗೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿ – ಮನೆಯವರ ಮುಂದೆ ಪ್ರಶ್ನೆಗಳ ಸುರಿಮಳೆ
ಈ ವೇಳೆ ಹಿಂದೂ ಮಹಾಗಣಪತಿ ಸಮಿತಿಯ ಅಧ್ಯಕ್ಷ ಶ್ರೀಮಂತ ರಾಜು ನವಲದಿ, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಗಂಗಾ, ಸಂಜೀವ್ ಗುಪ್ತಾ, ಕೋಶಾಧ್ಯಕ್ಷ ಶ್ರೀಶೈಲ ಮೂಲಗೆ, ಸದಸ್ಯರಾದ ಶಿವರಾಜ ಸಂಗೋಳಗಿ, ಅಶ್ವಿನ್ ಕುಮಾರ್, ಪ್ರಶಾಂತ್ ಗುಡ್ಡಾ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.ಇದನ್ನೂ ಓದಿ: ನವರಾತ್ರಿಗೆ ಬೆಲೆ ಏರಿಕೆ ಬಾಂಬ್; ಹಾಲು-ಮೊಸರಿನ ಜೊತೆಗೆ ಬೆಣ್ಣೆ – ತುಪ್ಪವೂ ದುಬಾರಿ?

