ಕನ್ನಡ ಸಿನಿಮಾ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಟಾಲಿವುಡ್ ಅಂಗಳದಲ್ಲಿ ಸೌಂಡ್ ಮಾಡ್ತಿದ್ದಾರೆ ಕನ್ನಡದ ಬೆಡಗಿಯರು. ಅವರ ಸಾಲಿಗೆ ಈಗಾಗಲೇ ಭರಾಟೆ ಬೆಡಗಿ ಶ್ರೀಲೀಲಾ ಸೇರಿಕೊಂಡಿದ್ದಾರೆ. ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದ ಇವರು, ಕೆಲವೇ ಸಮಯದಲ್ಲೇ ಬೇರೆ ಸಿನಿಮಾ ರಂಗ ಪ್ರವೇಶಿಸಿ ಅಚ್ಚರಿ ಮೂಡಿಸಿದ್ದಾರೆ.
ಸಾಮಾನ್ಯವಾಗಿ ಕನ್ನಡದಲ್ಲಿ ಅವಕಾಶ ಕಡಿಮೆಯಾದಾಗ ಬೇರೆ ಸಿನಿಮಾ ರಂಗದ ಕಡೆ ಮುಖ ಮಾಡಿದಿದ್ದೆ. ಆದರೆ, ಸ್ಯಾಂಡಲ್ವುಡ್ನಲ್ಲೇ ಸಿಕ್ಕಾಪಟ್ಟೆ ಬೇಡಿಕೆ ಇರುವಾಗಲೇ ತೆಲುಗು ಚಿತ್ರಗಳಿಂದಲೂ ನಟಿ ಶ್ರೀಲೀಲಾಗೆ ಬುಲಾವ್ ಬರುತ್ತಿದೆ. ತೆಲುಗಿನ `ಪೆಳ್ಳಿ ಸಂದಡಿ’ ಚಿತ್ರದ ನಂತರ ಟಾಲಿವುಡ್ ನಟ ನಿತಿನ್ಗೆ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ.
ತೆಲುಗಿನ ಟ್ಯಾಲೆಂಟೆಡ್ ಆಕ್ಟರ್ ನಿತಿನ್ ನಟನೆಯ ಹೊಸ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಲಿದ್ದಾರೆ. ವಕ್ಕಂತA ವಂಶಿ ನಿರ್ದೇಶನದ ಚಿತ್ರದಲ್ಲಿ ನಿತಿನ್ಗೆ ಭರಾಟೆ ಕ್ವೀನ್ ನಾಯಕಿಯಾಗಿ ಫಿಕ್ಸ್ ಆಗಿದ್ದಾರೆ. ಇದೊಂದು ಪಕ್ಕಾ ರೊಮ್ಯಾಂಟಿಕ್ ಲವ್ಸ್ಟೋರಿ ಚಿತ್ರವಾಗಿದ್ದು, ನಿತಿನ್ ಲವರ್ಬಾಯ್ ಲುಕ್ ಕಾಣಿಸಿಕೊಳ್ಳಲಿದ್ದಾರೆ. ನಟಿ ಶ್ರೀಲೀಲಾ ವಿಭಿನ್ನ ಪಾತ್ರದ ಮೂಲಕ ಮೋಡಿ ಮಾಡಲಿದ್ದಾರಂತೆ. ಇದನ್ನು ಓದಿ: ತಲೆಕೂದಲು ಬೋಳಿಸಿಕೊಂಡ ಫೋಟೋ ಶೇರ್ ಮಾಡಿದ ಗರ್ಭಿಣಿ ಸಂಜನಾ
ನಟ ನಿತಿನ್ ಅವರ ಹೋಮ್ ಪ್ರೊಡಕ್ಷನ್ `ಶ್ರೇಷ್ಠ ಮೂವೀಸ್’ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು. ಇತ್ತೀಚಿಗಷ್ಟೇ ಚಿತ್ರದ ಮುಹೂರ್ತ ನೆರೆವೇರಿದೆ. ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ. `ಪೆಳ್ಳಿ ಸಂದಡಿ’ ಚಿತ್ರದ ನಂತರ ಸ್ಟಾರ್ ನಟ ರವಿ ತೇಜಾ, ನಿತಿನ್ ಜೊತೆ ನಟಿಸ್ತಿರೋ ಶ್ರೀಲೀಲಾ, ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.