ಕನ್ನಡದ ನಟಿ ಶ್ರೀಲೀಲಾ (Sreeleela) ಪ್ರಸ್ತುತ ಬಾಲಿವುಡ್ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಪುಷ್ಪ 2’ ಚಿತ್ರದಲ್ಲಿ ಸೊಂಟ ಬಳುಕಿಸಿದ ಮೇಲೆ ರಾಮ್ ಚರಣ್ (Ram Charan) ಹೊಸ ಸಿನಿಮಾದಲ್ಲಿಯೂ ಶ್ರೀಲೀಲಾ ಐಟಂ ಹಾಡಿಗೆ ಡ್ಯಾನ್ಸ್ ಮಾಡ್ತಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:ಭಾರತದ ವಿರುದ್ಧವೇ ಪೋಸ್ಟ್ – ಮಲಯಾಳಂ ನಟಿ ವಿರುದ್ಧ ಆಕ್ರೋಶ
ಶ್ರೀಲೀಲಾ ಸಾಲು ಸಾಲು ಸಿನಿಮಾದಲ್ಲಿ ನಟಿಸುತ್ತಿದ್ದರೂ ಕೂಡ ಅವರಿಗೆ ಸಕ್ಸಸ್ ಸಿಕ್ಕಿಲ್ಲ. ಹಾಗಂತ ಅವರಿಗಿರುವ ಕ್ರೇಜ್ ಮತ್ತು ಬೇಡಿಕೆಯೇನು ಕಮ್ಮಿಯಾಗಿಲ್ಲ. ಅದರಲ್ಲೂ ನಟಿಯ ಡ್ಯಾನ್ಸ್ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಅದಕ್ಕೆ ‘ಪುಷ್ಪ 2’ (Pushpa 2) ಚಿತ್ರದ ‘ಕಿಸ್ಸಿಕ್’ ಸಾಂಗ್ ಸಾಕ್ಷಿಯಾಗಿದೆ. ಇದೀಗ ಅದೇ ರೀತಿಯ ಮತ್ತೊಂದು ಐಟಂ ಸಾಂಗ್ ಮಾಡುವ ಆಫರ್ ಅವರಿಗೆ ಅರಸಿ ಬಂದಿದೆ. ಇದನ್ನೂ ಓದಿ: ನಿರ್ಮಾಪಕನೊಂದಿಗೆ ಸಮಂತಾ ಲವ್‌ನಲ್ಲಿ ಬಿದ್ದಿರೋದು ನಿಜನಾ? – ಫ್ಯಾನ್ಸ್‌ಗೆ ಸಿಕ್ತು ಸಾಕ್ಷಿ
ರಾಮ್ ಚರಣ್ ನಟನೆಯ ‘ಪೆಡ್ಡಿ’ (Peddi) ಚಿತ್ರದಲ್ಲಿ ಶ್ರೀಲೀಲಾಗೆ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲು ಚಿತ್ರತಂಡ ಮಾತುಕತೆ ನಡೆಸಿದೆಯಂತೆ. ಉತ್ತಮ ಸಂಭಾವನೆ ಕೊಟ್ಟು ಅವರನ್ನೇ ಹಾಕಿಕೊಳ್ಳುವ ಪ್ಲ್ಯಾನ್ ಚಿತ್ರತಂಡಕ್ಕಿದೆ. ಆದರೆ ಮತ್ತೊಮ್ಮೆ ಐಟಂ ಹಾಡಿಗೆ ಡ್ಯಾನ್ಸ್ ಮಾಡಲು ಒಪ್ಪಿಕೊಳ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ಆಶಿಕಿ 2, ಉಸ್ತಾದ್ ಭಗತ್ ಸಿಂಗ್, ಮಾಸ್ ಜಾತ್ರಾ ಸೇರಿದಂತೆ ಹಲವು ಸಿನಿಮಾಗಳು ನಟಿಯ ಕೈಯಲ್ಲಿವೆ.