ವಾಷಿಂಗ್ಟನ್: ಗಗನಯಾತ್ರಿಗಳನ್ನು ಚಂದ್ರ, ಮಂಗಳ ಸೇರಿದಂತೆ ಅದರಾಚೆಗಿನ ಗ್ರಹಗಳೆಡೆಗೆ ಕಳುಹಿಸಲು ವಿನ್ಯಾಸಗೊಳಿಸಲಾದ ಹಾಗೂ ಇದುವರೆಗೆ ನಿರ್ಮಿಸಲಾದ ಅತ್ಯಂತ ಶಕ್ತಿಶಾಲಿ ರಾಕೆಟ್ ಸ್ಟಾರ್‌ಶಿಪ್‌ನ (Starship) ಮೊದಲ ಪರೀಕ್ಷಾ ಹಾರಾಟವನ್ನು ಸ್ಪೇಸ್‌ಎಕ್ಸ್ (SpaceX) ಸೋಮವಾರ ಮುಂದೂಡಿದೆ.
ಬೂಸ್ಟರ್ ಹಂತದಲ್ಲಿ ಒತ್ತಡದ ಸಮಸ್ಯೆಯಿಂದಾಗಿ ಸ್ಟಾರ್‌ಶಿಪ್ ರಾಕೆಟ್‌ನ (Rocket) ಲಿಫ್ಟ್ಆಫ್ ಅನ್ನು ಉಡಾವಣೆಗೆ ನಿಗದಿಪಡಿಸಲಾಗಿದ್ದ ಸಮಯಕ್ಕಿಂತ ಕೆಲವೇ ನಿಮಿಷಗಳ ಮೊದಲು ಸ್ಥಗಿತಗೊಳಿಸಲಾಯಿತು ಎಂದು ಸ್ಪೇಸ್‌ಎಕ್ಸ್‌ನ ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿರುವ ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನಿಲ್ದಾಣವಾದ ಸ್ಟಾರ್‌ಬೇಸ್‌ನಿಂದ ಸ್ಥಳೀಯ ಕಾಲಮಾನ ಬೆಳಗ್ಗೆ 8:20ರ ವೇಳೆಗೆ ಸ್ಟಾರ್‌ಶಿಪ್ ಹಾರಾಟವನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ತಾತ್ಕಾಲಿಕವಾಗಿ ಉಡಾವಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಕನಿಷ್ಠ 48 ಗಂಟೆ ವಿಳಂಬವಾಗಲಿದೆ ಎಂದು ಸ್ಪೇಸ್‌ಎಕ್ಸ್ ತಿಳಿಸಿದೆ.
Advertisement
Advertisement
ಸ್ಟಾರ್‌ಶಿಪ್ ವಿಶೇಷತೆಗಳೇನು?
ಸ್ಟಾರ್‌ಶಿಪ್ ಗಗನಯಾತ್ರಿಗಳು ಹಾಗೂ ಸರಕುಗಳನ್ನು ಸಾಗಿಸುವ ಮರುಬಳಕೆ ಮಾಡಬಹುದಾದ ಕ್ಯಾಪ್ಸುಲ್ ಮತ್ತು ಮೊದಲ ಹಂತದ ಸೂಪರ್ ಹೆವಿ ಬೂಸ್ಟರ್ ರಾಕೆಟ್ ಅನ್ನು ಒಳಗೊಂಡಿದೆ. ಸುಮಾರು 164 ಅಡಿ ಎತ್ತರದ ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆ 230 ಅಡಿ ಎತ್ತರದ ಭಾರೀ ತೂಕದ ರಾಕೆಟ್‌ನ ಮೇಲೆ ನೆಲೆನಿಂತಿದೆ. ಇದನ್ನೂ ಓದಿ: ಹೊಸ ಕೃತಕ ಬುದ್ಧಿಮತ್ತೆ ಕಂಪನಿ X.AI ಪ್ರಾರಂಭಿಸಲಿದ್ದಾರೆ ಮಸ್ಕ್
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ 2025ರ ಅಂತ್ಯದಲ್ಲಿ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಸಾಗಿಸಲು ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆಯನ್ನು ಆರಿಸಿದೆ. ಕಳೆದ ಫೆಬ್ರವರಿಯಲ್ಲಿ ಸ್ಟಾರ್‌ಶಿಪ್‌ನ ಮೊದಲ ಹಂತದ ಬೂಸ್ಟರ್‌ನಲ್ಲಿ ಸ್ಪೇಸ್‌ಎಕ್ಸ್ 33 ರಾಪ್ಟರ್ ಎಂಜಿನ್‌ಗಳ ಯಶಸ್ವಿ ಪರೀಕ್ಷಾ ಉಡಾವಣೆ ನಡೆಸಿತ್ತು. ಇದೀಗ ಮೊದಲ ಪರೀಕ್ಷಾರ್ಥ ಉಡಾವಣೆ ಸೋಮವಾರ ನಡೆಯಬೇಕಿತ್ತು. ಆದರೆ ಇದೀಗ ಸೂಪರ್ ಹೆವಿ ಬೂಸ್ಟರ್‌ನ ಒತ್ತಡದ ಸಮಸ್ಯೆಯಿಂದಾಗಿ ಹಾರಾಟವನ್ನು ಮುಂದೂಡಲಾಗಿದೆ. ಇದನ್ನೂ ಓದಿ: Twitter ನಲ್ಲಿ ಮೋದಿ ಫಾಲೋ ಮಾಡ್ತಿರುವ ಮಸ್ಕ್ – ಭಾರತಕ್ಕೆ ಬರುತ್ತೆ ಟೆಸ್ಲಾ ಎಂದ ನೆಟ್ಟಿಗರು!