ಪ್ರಿಟೋರಿಯಾ: ಭಾರತ (Team India) ವಿರುದ್ಧದ ಮೂರು ಸರಣಿಗಳಿಗೆ ದಕ್ಷಿಣ ಆಫ್ರಿಕಾ (South Africa) ತಂಡ ಪ್ರಕಟಿಸಿದ್ದು, ಟಿ20 ಮತ್ತು ಏಕದಿನ ಸರಣಿಯಿಂದ ನಾಯಕ ತೆಂಬಾ ಬವುಮಾ ಮತ್ತು ಕಗಿಸೊ ರಬಾಡ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈ ಇಬ್ಬರೂ ಆಟಗಾರರು ಭಾರತ ವಿರುದ್ಧದ ಟೆಸ್ಟ್ ಸರಣಿಯನ್ನು ಆಡಲಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ತಂಡವನ್ನು ಏಡನ್ ಮಾರ್ಕ್ರಮ್ (Aiden Markram) ಮುನ್ನೆಡೆಸಲಿದ್ದಾರೆ.
ಟೀಂ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಮುಖಾಮುಖಿ 3 ಪಂದ್ಯಗಳ ಟಿ20 ಸರಣಿಯೊಂದಿಗೆ ಆರಂಭವಾಗಲಿದೆ. ಬಳಿಕ ನಡೆಯಲಿರುವ ಏಕದಿನ ಸರಣಿಯಿಂದ ಖಾಯಂ ನಾಯಕ ತೆಂಬಾ ಬವುಮಾಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನವನ್ನು ಏಡನ್ ಮಾರ್ಕ್ರಮ್ ತುಂಬಲಿದ್ದಾರೆ. ಇದನ್ನೂ ಓದಿ: IND vs AUS T20I: ಕೊನೆ ಪಂದ್ಯದಲ್ಲಿ ಭಾರತಕ್ಕೆ ಗೆಲುವು; 4-1 ಅಂತರದಿಂದ ಸರಣಿ ಕೈವಶ
Advertisement
ಮಾಕ್ರ್ರಾಮ್ ಈ ಹಿಂದೆಯೂ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಉಳಿದಂತೆ ಟಿ20 ಸರಣಿಗೆ ಆಯ್ಕೆಯಾಗಿರುವ ಜೆರಾಲ್ಡ್ ಕೊಯೆಟ್ಜಿ, ಮಾರ್ಕೊ ಯಾನ್ಸನ್ ಮತ್ತು ಲುಂಗಿ ಎನ್‍ಗಿಡಿಗೆ ಮೂರನೇ ಟಿ20 ಮತ್ತು ಏಕದಿನ ಸರಣಿಯಿಂದ ಕೋಕ್ ನೀಡಲಾಗಿದೆ.
Advertisement
Advertisement
ಮೂರು ಸ್ವರೂಪಗಳಿಗೆ ದಕ್ಷಿಣ ಆಫ್ರಿಕಾದ ತಂಡ
ಟಿ20 ತಂಡ: ಏಡನ್ ಮಾರ್ಕ್ರಮ್ (ನಾಯಕ), ಒಟ್ನೀಲ್ ಬಾರ್ಟ್‍ಮನ್, ಮ್ಯಾಥ್ಯೂ ಬ್ರಿಟ್ಜ್ಕೆ, ನಾಂಡ್ರೆ ಬರ್ಗರ್, ಜೆರಾಲ್ಡ್ ಕೋಟ್ಜಿ, ಡೊನೊವನ್ ಫೆರೀರಾ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಯಾನ್ಸೆನ್, ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಆಂಡಿಲೆ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್, ಲಿಜಾದ್ ವಿಲಿಯಮ್ಸ್. ಲುಂಗಿ ಎನ್‍ಗಿಡಿ.
Advertisement
ಏಕದಿನ ತಂಡ: ಏಡನ್ ಮಾರ್ಕ್ರಮ್ (ನಾಯಕ), ಒಟ್ನಿಯೆಲ್ ಬಾರ್ಟ್‍ಮ್ಯಾನ್, ಟೋನಿ ಡಿ ಜೊರ್ಜಿ, ನಾಂಡ್ರೆ ಬರ್ಗರ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಮಿಹ್ಲಾಲಿ ಎಂಪೊಂಗ್ವಾನಾ, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಆಂಡಿಲ್ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಕೈಲ್ ವೆರ್ರೆನ್, ಲಿಜಾದ್ ವಿಲಿಯಮ್ಸ್.
ಟೆಸ್ಟ್ ತಂಡ: ತೆಂಬಾ ಬವುಮಾ (ನಾಯಕ), ಡೇವಿಡ್ ಬೆಡಿಂಗ್‍ಹ್ಯಾಮ್, ಆಂಡ್ರೆ ಬರ್ಗರ್, ಜೆರಾಲ್ಡ್ ಕೋಟ್ಜಿ, ಟೋನಿ ಡಿ ಜೊರ್ಜಿ, ಡೀನ್ ಎಲ್ಗರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಏಡನ್ ಮಾರ್ಕ್ರಮ್, ವಿಯಾನ್ ಮುಲ್ಡರ್, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಕೀಗನ್ ಪೀಟರ್ಸನ್, ಕಗಿಸೊ ರಬಾಡ, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರೆನ್. ಇದನ್ನೂ ಓದಿ: ಐಪಿಎಲ್ 2024 ಮಿನಿ ಹರಾಜಿನ ಅಧಿಕೃತ ದಿನಾಂಕ ಪ್ರಕಟ – 1166 ಆಟಗಾರರು ನೋಂದಣಿ