ನವದೆಹಲಿ: ಐಪಿಎಲ್ 2024ರ ಮಿನಿ ಹರಾಜು (IPL 2024 Auction) ಪ್ರಕ್ರಿಯೆಗೆ ಅಧಿಕೃತ ದಿನಾಂಕ ಪ್ರಕಟಗೊಂಡಿದೆ. ಡಿ.19ರಂದು ದುಬೈನಲ್ಲಿ ಐಪಿಎಲ್ 2024ರ ಹರಾಜು ಪ್ರಕ್ರಿಯೆ ನಡೆಸುವುದರ ಕುರಿತು ಇಂಡಿಯನ್ ಪ್ರೀಮಿಯರ್ ಲೀಗ್ ಅಧಿಕೃತ ಮಾಹಿತಿ ನೀಡಿದೆ. ಇದೇ ಮೊದಲ ಬಾರಿಗೆ ವಿದೇಶದಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ.
ಮಿನಿ ಹರಾಜಿಗೆ 1166 ಆಟಗಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ 830 ಭಾರತೀಯರಾಗಿದ್ದಾರೆ. ಉಳಿದ 336 ಆಟಗಾರರು ವಿದೇಶಿಗರಾಗಿದ್ದಾರೆ. 1166 ಆಟಗಾರರು ಐಪಿಎಲ್ ತಂಡ ಸೇರಿಕೊಳ್ಳುವ ಉತ್ಸಾಹ ತೋರಿದ್ದರೂ, 10 ತಂಡಗಳು ಭರ್ತಿ ಮಾಡಬೇಕಿರುವುದು ಕೇವಲ 77 ಸ್ಲಾಟ್ ಮಾತ್ರ. ಹೀಗಾಗಿ ಹರಾಜಿನಲ್ಲಿ ಪಾಲ್ಗೊಂಡಿರುವ 1000ಕ್ಕೂ ಅಧಿಕ ಆಟಗಾರರಿಗೆ ನಿರಾಸೆಯಾಗಲಿದೆ. ಇದನ್ನೂ ಓದಿ: WPL 2024 ಹರಾಜಿಗೆ 165 ಪ್ಲೇಯರ್ಸ್ ನೋಂದಣಿ – ಯಾರಾಗ್ತಾರೆ ಈ ಬಾರಿಯ ಟಾಪ್ ಪ್ಲೇಯರ್?
Advertisement
Advertisement
ಅಲ್ಲದೇ, ಶಾರ್ಟ್‍ಲಿಸ್ಟ್ ಮಾಡಿದ ಆಟಗಾರರು ಮಾತ್ರ ಅಂತಿಮ ಪಟ್ಟಿಯಲ್ಲಿ ಇರಲಿದ್ದಾರೆ. ಶೀಘ್ರದಲ್ಲೇ ಹರಾಜಿಗೆ ಲಭ್ಯವಿರುವ ಆಟಗಾರರ ಪಟ್ಟಿಯನ್ನು ಐಪಿಎಲ್ ಪ್ರಕಟಿಸಲಿದೆ. ಡಿ.12ರ ವರೆಗೆ ಟ್ರೇಡಿಂಗ್ ವಿಂಡೋ ತೆರೆದಿರಲಿದ್ದು, ಆಟಗಾರರ ಬದಲಾಗುವ ಸಾಧ್ಯತೆ ಕೂಡ ಇದೆ.
Advertisement
Advertisement
ಈ ಬಾರಿಯ ವಿಶ್ವಕಪ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಹರಾಜಿನಲ್ಲಿ ಕೇಂದ್ರಬಿಂದು ಆಗಲಿದ್ದಾರೆ. ಟೀಂ ಇಂಡಿಯಾದ ಆಟಗಾರರಾದ ಶಾರ್ದೂಲ್ ಠಾಕೂರ್, ಹರ್ಷಲ್ ಪಟೇಲ್, ಉಮೇಶ್ ಯಾದವ್ ಭಾರಿ ಮೊತ್ತಕ್ಕೆ ತಂಡ ಸೇರಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಈಗಾಗಲೇ ಈ ಆಟಗಾರರು ತಮ್ಮ ಮೂಲ ಬೆಲೆಯನ್ನು 2 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನಕ್ಕೆ ಅವಮಾನ – ಟ್ರಕ್‌ಗೆ ಲಗೇಜ್ ಲೋಡ್ ಮಾಡಿದ ಆಟಗಾರರು