ಕೋಲ್ಕತ್ತಾ: ಕ್ರಿಕೆಟ್ನಲ್ಲೂ (Cricket) ರಾಜಕೀಯ ಮಾಡಬೇಡಿ, ಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ (ICC Election) ಸ್ಪರ್ಧಿಸಲು ಬಿಸಿಸಿಐ (BCCI) ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವ ಸೌರವ್ ಗಂಗೂಲಿಗೆ (Sourav Ganguly) ಅವಕಾಶ ನೀಡಿ ಎಂದು ಒತ್ತಾಯಿಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರು (Mamata Banerjee) ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
I request PM to make sure Sourav Ganguly must be allowed to contest ICC election. He's a popular figure which is why he is being deprived. Request GoI not to take a decision politically, but for cricket, sports…He is not a political party member: West Bengal CM Mamata Banerjee pic.twitter.com/mXmqWrX2rM
— ANI (@ANI) October 17, 2022
ಮೋದಿ (Narendra Modi) ಅವರೇ ರಾಜಕೀಯವಾಗಿ ನಿರ್ಧಾರ ತೆಗೆದುಕೊಳ್ಳಬೇಡಿ, ಗಂಗೂಲಿ ಅವರು ರಾಜಕೀಯ ಪಕ್ಷದ ಸದಸ್ಯರಲ್ಲ. ಅವರು ಬಿಸಿಸಿಐ ಸ್ಥಾನಕ್ಕೆ ಸೂಕ್ತ ವ್ಯಕ್ತಿ. ಬಿಸಿಸಿಐ ಅಧ್ಯಕ್ಷರಾಗಿ ಸ್ಥಾನ ಪಡೆದಿರುವ ಸೌರವ್ ಗಂಗೂಲಿ ಅವರು 2ನೇ ಬಾರಿಗೆ ಈ ಸ್ಥಾನದಿಂದ ವಂಚಿತರಾಗಿದ್ದಾರೆ. ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC)ಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪಂತ್ಗೂ ಕಾಡ್ತಿದ್ಯಾ ಗಾಯದ ಸಮಸ್ಯೆ?
Kolkata, West Bengal | On behalf of all countrymen I say that Sourav Ganguly is our pride, he has skillfully managed his sports & administration career. He was BCCI president. He was excluded in an unfair way; the compensation for it will be to send him to ICC: CM Mamata Banerjee pic.twitter.com/U25UKJ3LKQ
— ANI (@ANI) October 17, 2022
ಸೌರವ್ ಗಂಗೂಲಿ ಅವರನ್ನು ಅನ್ಯಾಯವಾಗಿ ಹೊರಗಿಡಲಾಗಿದೆ. ನನಗೆ ತುಂಬಾ ದುಃಖವಾಗಿದೆ. ಸೌರವ್ ಗಂಗೂಲಿ ಬಹಳ ಜನಪ್ರಿಯ ವ್ಯಕ್ತಿ. ಅವರು ಭಾರತ ತಂಡದ ನಾಯಕರಾಗಿದ್ದರು. ಅವರು ದೇಶಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಅವರು ಬಂಗಾಳದ ಹೆಮ್ಮೆ ಮಾತ್ರವಲ್ಲ, ಭಾರತದ ಹೆಮ್ಮೆಯೂ ಹೌದು. ಅವರನ್ನು ಹೊರಗಿಟ್ಟಿರೋದು ಅನ್ಯಾಯ. ಸೌರವ್ ಗಂಗೂಲಿ ಅವರಿಗೆ ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕೊಹ್ಲಿ ಮ್ಯಾಜಿಕ್ ಫೀಲ್ಡಿಂಗ್, ಶಮಿ ಮಾರಕ ಬೌಲಿಂಗ್ – ಭಾರತಕ್ಕೆ 6 ರನ್ಗಳ ರೋಚಕ ಜಯ
ಇನ್ನು ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 20 ರಂದು ನಾಮಪತ್ರ ಸಲ್ಲಿಸಬೇಕು. ಹಾಲಿ ಬಿಸಿಸಿಐ ಅಧ್ಯಕ್ಷರಾಗಿರುವ ಗಂಗೂಲಿ ಅವರ ಅವಧಿ ಮುಕ್ತಾಯವಾಗುತ್ತಿದ್ದು, ಅವರ ನಂತರ ರೋಜರ್ ಬಿನ್ನಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ.