ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಸದ್ಯ ಬಿಗ್ ಬಾಸ್ ಮನೆಯಲ್ಲಿ ಮಿಂಚ್ತಿದ್ದಾರೆ. ಸಾಕಷ್ಟು ಅಭಿಮಾನಿಗಳ ಪರ ವಿರೋಧದ ನಡುವೆಯೂ ಕೂಡ ಸೋನು ಕಮಾಲ್ ಮಾಡ್ತಿದ್ದಾರೆ. ಈಗ ಸೋನು ತಮ್ಮ ಮೊಬೈಲ್ ನಂಬರ್ನ್ನು ರಿವೀಲ್ ಮಾಡಿದ್ದಾರೆ.
ಕಿರುತೆರೆಯ ದೊಡ್ಮನೆಯಲ್ಲಿ ಹೈಲೈಟ್ ಆಗಿರುವ ಸೋನು ಶ್ರೀನಿವಾಸ್ ಗೌಡ ಅವರಿಗೆ ಸೋಶಿಯಲ್ ಮೀಡಿಯಾಲ್ಲಿ ಸುಮಾರು 8 ಲಕ್ಷಕ್ಕೂಫಾಲೋವರ್ಸ್ ಇದ್ದಾರೆ. ಅವರ ವೈಯಕ್ತಿಕ ಜೀವನದ ಬಗ್ಗೆ ಫೋನ್ ನಂಬರ್ ತಿಳಿದುಕೊಳ್ಳಬೇಕು ಎಂಬ ಹಂಬಲ ಅನೇಕರಿಗೆ ಇದೆ. ಆದರೆ ಅವರು ಅಷ್ಟು ಸುಲಭಕ್ಕೆ ಕಾಂಟ್ಯಾಕ್ಟ್ ನಂಬರ್ ಕೊಡುವವರಲ್ಲ. ಹಾಗಿದ್ದರೂ ಕೂಡ ಬಿಗ್ ಬಾಸ್ ಮನೆಯಲ್ಲಿ ಫೋನ್ ನಂಬರ್ ಶೇರ್ ಮಾಡಿಕೊಂಡಿದ್ದಾರೆ. ಅದ್ರಲ್ಲೂ ಒಂದಷ್ಟು ಬುದ್ದಿವಂತಿಕೆ ತೋರಿಸಿದ್ದಾರೆ. ಇದನ್ನೂ ಓದಿ:`ಲಾಲ್ ಸಿಂಗ್ ಚಡ್ಡಾ’ ರಿಲೀಸ್ ಬೆನ್ನಲ್ಲೇ ಕ್ಷಮೆಯಾಚಿಸಿದ ಅಮೀರ್ ಖಾನ್
`ಬೇಗ ಫೋನ್ ನಂಬರ್ ಹೇಳಮ್ಮ ಡಯಲ್ ಮಾಡುತ್ತೇನೆ’ ಎಂದು ತಮಾಷೆ ಮಾಡುತ್ತಾ ಲೋಕೇಶ್ ಕೇಳಿದರು. ಅದಕ್ಕೆ ಸೋನು ಗೌಡ 99876543210 ಎಂದರು. ಇದು ಸುಳ್ಳು ನಂಬರ್ ಎಂದರು ಸ್ಫೂರ್ತಿ ಗೌಡ. ಅದನ್ನು ನಾನು ಉಲ್ಪಾ ಪಲ್ಟಾ ಹೇಳಿದ್ದೀನಿ. ಈ ನಂಬರ್ ಯಾವುದೇ ಕಾರಣಕ್ಕೂ ಇರಲ್ಲ. ನಿಮ್ಮಂಥ ಜಾಣರು ಇರ್ತೀರಿ ಅಂತ ನಂಗೆ ಗೊತ್ತು ಎಂದು ಸೋನು ಗೌಡ ಚಾಲಾಕಿತನ ತೋರಿಸಿದ್ದಾರೆ. ಒಟ್ನಲ್ಲಿ ಒಂದಲ್ಲಾ ಒಂದು ವಿಚಾರವಾಗಿ ಸೋನು ಶ್ರೀನಿವಾಸ್ ಗೌಡ ಸೌಂಡ್ ಮಾಡುತ್ತಲೇ ಇದ್ದಾರೆ.
Live Tv
[brid partner=56869869 player=32851 video=960834 autoplay=true]