CinemaEntertainmentLatestLeading NewsMain PostSouth cinema

`ಲಾಲ್ ಸಿಂಗ್ ಚಡ್ಡಾ’ ರಿಲೀಸ್ ಬೆನ್ನಲ್ಲೇ ಕ್ಷಮೆಯಾಚಿಸಿದ ಅಮೀರ್ ಖಾನ್

ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ನಟನೆಯ `ಲಾಲ್ ಸಿಂಗ್ ಚಡ್ಡಾ’ ಇದೇ ಆಗಸ್ಟ್ 11ಕ್ಕೆ ತೆರೆಗೆ ಅಪ್ಪಳಿಸಲು ರೆಡಿಯಾಗಿದೆ.ಆಮೀರ್ ಮತ್ತು ಕರೀನಾ ಕಾಂಬಿನೇಷನ್ ಸಿನಿಮಾ ಇದಾಗಿದ್ದು, ಅಮೀರ್ ಆಡಿದ್ದರು ಎನ್ನಲಾದ ಮಾತಿನಿಂದಾಗಿ ಈ ಚಿತ್ರವನ್ನ ಬಾಯ್ ಕಾಟ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಆಂದೋಲನ ಶುರು ಮಾಡಿದ್ದರು. ಈಗ ರಿಲೀಸ್ ಬೆನ್ನಲ್ಲೇ ಅಮೀರ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

ಈ ದೇಶದಲ್ಲಿ ಅಸಹಿಷ್ಣತೆ ಇದೆ. ಹಾಗಾಗಿ ನನ್ನ ಪತ್ನಿ ದೇಶ ತೊರೆಯುವಂತಹ ಮಾತುಗಳನ್ನು ಆಡಿದ್ದಳು ಎಂದು ಅಮೀರ್ ಈ ಹಿಂದೆ ಹೇಳಿದ್ದರು. ಇದೇ ಮಾತನ್ನು ಇಟ್ಟುಕೊಂಡು ಇವತ್ತು ಬಾಯ್ ಕಾಟ್ ಮಾತುಗಳನ್ನು ಆಡಲಾಗುತ್ತಿದೆ. ದೇಶ ದ್ರೋಹದಂತಹ ಹೇಳಿಕೆಯನ್ನು ಕೊಟ್ಟಿರುವ ಅಮೀರ್ ಖಾನ್ ಸಿನಿಮಾವನ್ನು ನೋಡಬೇಡಿ ಎಂದು ಹಲವರು ಪೋಸ್ಟ್ ಮಾಡಿದ್ದರು. ಈಗ ಸಿನಿಮಾ ರಿಲೀಸ್‌ಗೂ ಮುನ್ನವೇ ಅಮೀರ್ ಖಾನ್ ಕ್ಷಮೆ ಕೇಳಿದ್ದಾರೆ.

ಕೆಲ ವರ್ಷಗಳ ಹಿಂದೆ ಅಮೀರ್ ಹೇಳಿಕೆ ಈಗ ಕಂಗಟ್ಟಾಗಿದೆ. ರಿಲೀಸ್ ಮುನ್ನ ಮಾತನಾಡಿರುವ ಅಮೀರ್, ನಾನು ಯಾರಿಗಾದರೂ ನೋವುಂಟು ಮಾಡಿದ್ದರೆ, ನಾನು ವಿಷಾದಿಸುತ್ತೇನೆ, ನಾನು ಯಾರನ್ನೂ ನೋಯಿಸಲು ಬಯಸುವುದಿಲ್ಲ, ಯಾರಾದರೂ ಚಲನಚಿತ್ರವನ್ನು ವೀಕ್ಷಿಸಲು ಬಯಸದಿದ್ದರೆ, ನಾನು ಅವರ ಭಾವನೆಯನ್ನು ಗೌರವಿಸುತ್ತೇನೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಪತಿ ಮಾಡಿದ ಎಡವಟ್ಟು: ನಯನತಾರಾ ಆಸ್ಪತ್ರೆಗೆ ದಾಖಲು

ಚಿತ್ರದ ಬಗ್ಗೆ ಬಾಯ್ ಕಾಟ್ ಟ್ರೆಂಡ್ ಆಗುತ್ತಿದ್ದರು ಕೂಡ ಈಗಾಗಲೇ ಚಿತ್ರದ ಬುಕ್ಕಿಂಗ್ ವಿಚಾರದಲ್ಲಿ ಕೋಟಿ ಕೋಟಿ ಕಲೆಕ್ಷನ್ ಆಗಿದೆ. ಬಾಯ್ ಕಾಟ್ ವಿವಾದದ ಮಧ್ಯೆ ಎಷ್ಟರ ಮಟ್ಟಿಗೆ ಈ ಸಿನಿಮಾ ಸೌಂಡ್ ಮಾಡುತ್ತೆ ಎಂದು ಕಾದುನೋಡಬೇಕಿದೆ.

Live Tv

Leave a Reply

Your email address will not be published.

Back to top button