
ಬ್ರೆಸಿಲಿಯಾ: ಅನಾರೋಗ್ಯದಿಂದ ತಂದೆಗೆ ವ್ಯಾಕ್ಸಿನ್ ಕೊಡಿಸಲು ಮಗ 6 ಗಂಟೆಗಳ ಕಾಲ ಬೆನ್ನಿನ ಮೇಲೆ ಹೊತ್ತೊಯ್ದು, ಲಸಿಕೆ ಕೊಡಿಸಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಂದೆ, ಮಗನ ಬಾಂಧವ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬ್ರೆಜಿಲ್‍ನ ಅಮೆಜಾನ್ ಪ್ರದೇಶದಲ್ಲಿ ಮಗ ತಂದೆಯನ್ನು ಬೆನ್ನಿನ ಮೇಲೆ ಹೊತ್ತೊಯ್ದ ವ್ಯಾಕ್ಸಿನ್ ಕೊಡಿಸಿದ್ದಾನೆ. 24 ವರ್ಷದ ಟಾವಿ, 67 ವರ್ಷದ ತಂದೆ ವಹು ಅವರನ್ನು ಬರೋಬ್ಬರಿ ಆರು ಗಂಟೆಗಳ ಕಾಲ ಹೊತ್ತು ಸಾಗಿ ವ್ಯಾಕ್ಸಿನ್ ಕೊಡಿಸಿದ್ದಾನೆ. ಅದೇ ರೀತಿ ಮನೆಗೆ ವಾಪಸ್ಸಾಗುವಾಗಲೂ ಆರು ಗಂಟೆಗಳ ಕಾಲ ಹೊತ್ತು ಸಾಗಿದ್ದಾನೆ. ಇದನ್ನೂ ಓದಿ: 50 ಕೋಟಿ ರೂ. ಜಾಗತಿಕ ಕ್ರೆಡಿಟ್ ಕಾರ್ಡ್ ಹಗರಣ ಭೇದಿಸಿದ ಪೊಲೀಸರು – 7 ಜನ ಅರೆಸ್ಟ್
ಒಂದು ಫೋಟೋ ನೂರು ಕತೆಗಳನ್ನು ಹೇಳುತ್ತವೆ. ಒಂದೆಡೆ ತಂದೆ ಮತ್ತು ಮಗನ ಬಾಂಧವ್ಯವನ್ನು ವಿವರಿಸಿದರೆ ಇನ್ನೊಂದೆಡೆ ಕುಗ್ರಾಮಗಳ ಜನರು ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವುದನ್ನು ತೋರಿಸುತ್ತದೆ. ವ್ಯಾಕ್ಸಿನ್ ಪಡೆಯಲು ಜನರು ಪಡುವ ಕಷ್ಟಗಳನ್ನು ತೋರಿಸುವಂತಿದೆ ಎಂದು ಬರೆದುಕೊಂಡು ಡಾ ಎರಿಕ್ ಜೆನ್ನಿಂಗ್ಸ್ ಸಿಮೊಸ್, ಎನ್ನುವವರು ಇಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.
ಯುವಕನ ತಂದೆ ಮೂತ್ರಕೋಶದ ಸಮಸ್ಯೆಯಿಂದ ಬಳಲುತ್ತಿದ್ದು, ನಡೆದಾಡಲು ಸಾಧ್ಯವಾಗದೇ ಇರುವ ಕಾರಣ ಮಗ ಬೆನ್ನಿನ ಮೇಲೆ ಹೊತ್ತೊಯ್ದಿದ್ದಾರೆ. ಈ ಫೋಟೋವನ್ನು ಡಾ. ಎರಿಕ್ 2022ರ ಜನವರಿ 1 ರಂದು ಹಂಚಿಕೊಂಡಿದ್ದು, 2021ರ ಅತ್ಯುತ್ತಮ ಕ್ಷಣ ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಮಗನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಇಂದು ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಆಗಮನ