ನವದೆಹಲಿ: ಕೇಂದ್ರ ಸರ್ಕಾರವು ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಉತ್ತೇಜಿಸಲು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿರುತ್ತದೆ. ಆದರೆ ಈ ಮಧ್ಯೆ ಭಾರತದಲ್ಲಿ ಅನೇಕ ಮಂದಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಹಲವಾರು ಪ್ರಸಿದ್ಧ ಸ್ಮಾರಕಗಳ ಸುತ್ತಮುತ್ತ ಗುಟ್ಕಾ ಮತ್ತು ವೀಳ್ಯದೆಲೆ ಕಲೆಗಳನ್ನು ನೀವು ಬಹುಶಃ ನೋಡಿರಬಹುದು. ಆದರೆ ಈಗ ವಿಮಾನದಲ್ಲಿ ಉಗುಳಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮದುವೆ ಮನೆಯಲ್ಲೂ MES ಕಿರಿಕ್ – ಕನ್ನಡ ಸಾಂಗ್ ಹಾಕಿದ್ದಕ್ಕೆ ವಧು, ವರ, ಕನ್ನಡಿಗರ ಮೇಲೆ ಹಲ್ಲೆ
Advertisement
Advertisement
ಛತ್ತೀಸ್‍ಗಢ ಕೇಡರ್‌ನ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು, ತಮ್ಮ ಟ್ವಿಟ್ಟರ್‌ನಲ್ಲಿ ವಿಮಾನದ ಕಿಟಕಿಯ ಕೆಳಗೆ ಗುಟ್ಕಾವನ್ನು ಉಗುಳಿರುವ ಕಲೆಯ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಯಾರೋ ತಮ್ಮ ಗುರುತನ್ನು ಬಿಟ್ಟು ಹೋಗಿದ್ದಾರೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.
Advertisement
अपनी पहचान छोड़ दी किसी ने. pic.twitter.com/xsl68VfhH1
— Awanish Sharan (@AwanishSharan) May 25, 2022
Advertisement
ಸದ್ಯ ವೈರಲ್ ಆಗುತ್ತಿರುವ ಈ ಫೋಟೋ ಹಿಂದಿರುವ ವ್ಯಕ್ತಿ ಯಾರು ಎಂಬ ಕುತೂಹಲ ಮೂಡಿದೆ. ಈ ಪೋಸ್ಟ್‌ಗೆ 16,000 ಕ್ಕೂ ಹೆಚ್ಚು ಲೈಕ್‍ಗಳು ಬಂದಿದ್ದು, ಕೆಲವು ಟ್ವಿಟ್ಟರ್ ಬಳಕೆದಾರರು ಸೂಪರ್‌ಸ್ಟಾರ್‌ಗಳ ತಂಬಾಕು ಸೇವನೆಯ ಜಾಹೀರಾತುಗಳನ್ನು ಟೀಕಿಸಿದ್ದಾರೆ. ಇದನ್ನೂ ಓದಿ: ದಾಳಿ ವೇಳೆ ಸಿಬಿಐ ನನ್ನ ವೈಯಕ್ತಿಕ ದಾಖಲೆಗಳನ್ನು ವಶಪಡಿಸಿಕೊಂಡಿದೆ – ಕಾರ್ತಿ ಚಿದಂಬರಂ ಆರೋಪ
ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಅಧ್ಯಯನಗಳು ತಿಳಿಸಿದೆ. ಹಲವಾರು ಕಂಪನಿಗಳು ತಂಬಾಕು ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ಪ್ಯಾಕ್ ಮೇಲೆ ನಮೂದಿಸಿರುತ್ತದೆ. ಜೊತೆಗೆ ಚಲನಚಿತ್ರಗಳು ಪ್ರಾರಂಭವಾಗುವ ಮುನ್ನ ಚಿತ್ರಮಂದಿರಗಳಲ್ಲಿ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಪ್ರಸಾರ ಮಾಡುವ ಮೂಲಕ ಸಂದೇಶ ಸಾರಲಾಗುತ್ತದೆ.