ತೂಕ ಇಳಿಸಬೇಕು ಅಂದುಕೊಂಡಿದ್ದೀರಾ? ಪ್ರತಿನಿತ್ಯ ಚಪಾತಿ ತಿಂದು ಬೇಸರವಾಗಿದ್ಯ? ನಿಮ್ಮ ನಾಲಿಗೆ ವಿಭಿನ್ನ ರುಚಿಯ ಅಡುಗೆ ತಿನ್ನಲು ಬಯಸುತ್ತಿದ್ಯಾ? ಹಾಗಿದ್ದರೆ ಒಮ್ಮೆ ರವಾ ಚಪಾತಿ ಮಾಡಲು ಟ್ರೈ ಮಾಡಿ. ರುಚಿಯಾಗಿರುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು:
* ಅಕ್ಕಿ ಹಿಟ್ಟು- 2 ಕಪ್
* ರವಾ- 2 ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ- ಅರ್ಧ ಕಪ್
Advertisement
ಮಾಡುವ ವಿಧಾನ:
* ಒಂದು ಪಾತ್ರೆಗೆ ನೀರು, ಉಪ್ಪು ಮತ್ತು 1 ಚಮಚ ಅಡುಗೆ ಎಣ್ಣೆಯನ್ನು ಹಾಕಿ.
* ನೀರು ಚೆನ್ನಾಯಿ ಕುದಿಯಲು ಆರಂಭಿಸಿದ ಬಳಿಕ ಚೆನ್ನಾಗಿ ರವಾ, ಅಕ್ಕಿಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
Advertisement
Advertisement
* ಈ ಮಿಶ್ರಣ ಚೆನ್ನಾಗಿ ಬೇಯಿಸಿಕೊಂಡು ನಂತರ ಮೃದುವಾಗಿ ಹಿಟ್ಟನ್ನು ಕಲಸಿಕೊಂಡು ಉಂಡೆಗಳನ್ನು ಮಾಡಿಕೊಳ್ಳಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
Advertisement
* ನಂತರ ರೊಟ್ಟಿಯನ್ನು ತಟ್ಟಿ ಬೇಯಿಸಿದರೆ ರಚಿಯಾದ ರವಾ ಚಪಾತಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ